ವೀರ್ ಸಾವರ್ಕರ್ ದೇಶಭಕ್ತಿ ಅನುಮಾನಿಸುವವರಿಗೆ ನಾಚಿಕೆಯಾಗಬೇಕು: ಅಮಿತ್ ಶಾ

ವೀರ್ ಸಾವರ್ಕರ್ ದೇಶಭಕ್ತಿ ಅನುಮಾನಿಸುವವರಿಗೆ ನಾಚಿಕೆಯಾಗಬೇಕು: ಅಮಿತ್ ಶಾ
ಅಮಿತ್ ಶಾ

Amit Shah ಸಾವರ್ಕರ್ ಅವರು ಉತ್ತಮ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೊಂದಿದ್ದರು. ಆದರೆ ಅವರು ಕಠಿಣವಾದ ಮಾರ್ಗವನ್ನು ಆರಿಸಿಕೊಂಡರು, ಇದು ತಾಯ್ನಾಡಿಗೆ ಅವರ ಅಚಲವಾದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Oct 15, 2021 | 8:17 PM

ಪೋರ್ಟ್ ಬ್ಲೇರ್: “ವೀರ್” ಸಾವರ್ಕರ್ (Savarkar) ಅವರ ದೇಶಭಕ್ತಿ ಮತ್ತು ಶೌರ್ಯವನ್ನು ಪ್ರಶ್ನಿಸಲಾಗದು.  ಭಾರತ ಮತ್ತು ಅದರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾವರ್ಕರ್ ಬದ್ಧತೆಯನ್ನು ಅನುಮಾನಿಸುವವರ ವಿರುದ್ಧ ಗುಡುಗಿದ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah)  ಸಾವರ್ಕರ್​​ನ್ನು ಟೀಕಿಸುವವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.  ಮಹಾತ್ಮಾ ಗಾಂಧಿಯವರ ಸಲಹೆಯ ಮೇರೆಗೆ ಗೌರವಾನ್ವಿತ ಹಿಂದುತ್ವ ವಿಚಾರವಾದಿ ವಿ ಡಿ ಸಾವರ್ಕರ್ ಅವರು ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಇತ್ತೀಚಿನ ಹೇಳಿಕೆಯ ವಿರುದ್ಧ ಭಾರೀ ವಿವಾದದ ಹಿನ್ನೆಲೆಯಲ್ಲಿ ಶಾ ಈ ರೀತಿ ಹೇಳಿದ್ದಾರೆ. ಅಂಡಮಾನ್​​ನಲ್ಲಿರುವ ಸೆಲ್ಯುಲಾರ್ ಜೈಲಿನಲ್ಲಿ ಸಾವರ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅಮಿತ್ ಶಾ .”ಈ ಜೈಲಿನಲ್ಲಿ ತೈಲವನ್ನು ಹೊರತೆಗೆಯಲು ಉಳುವ ಎತ್ತಿನಂತೆ ಬೆವರು ಸುರಿಸಿದ, ಎರಡು ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಜೀವನವನ್ನು ನೀವು ಹೇಗೆ ಅವಮಾನಿಸುತ್ತೀರಿ. ಸ್ವಲ್ಪ ನಾಚಿಕೆ ಇರಲಿ”ಎಂದಿದ್ದಾರೆ.

ಸಾವರ್ಕರ್ ಅವರು ಉತ್ತಮ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೊಂದಿದ್ದರು. ಆದರೆ ಅವರು ಕಠಿಣವಾದ ಮಾರ್ಗವನ್ನು ಆರಿಸಿಕೊಂಡರು, ಇದು ತಾಯ್ನಾಡಿಗೆ ಅವರ ಅಚಲವಾದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಶಾ ಹೇಳಿದ್ದಾರೆ.

“ಈ ಸೆಲ್ಯುಲಾರ್ ಜೈಲಿಗಿಂತ ದೊಡ್ಡ ತೀರ್ಥಯಾತ್ರೆ ಬೇರೆ ಇಲ್ಲ. ಸಾವರ್ಕರ್ 10 ವರ್ಷಗಳ ಕಾಲ ಅಮಾನವೀಯ ಚಿತ್ರಹಿಂಸೆಯನ್ನು ಅನುಭವಿಸಿದ ಆದರೆ ಅವರ ಧೈರ್ಯ, ಧೈರ್ಯವನ್ನು ಕಳೆದುಕೊಳ್ಳದ ಈ ಸ್ಥಳವು ‘ಮಹಾತೀರ್ಥ’ವಾಗಿದೆ “ಎಂದು ಭಾರತವು 75 ವರ್ಷಗಳ ಸ್ವಾತಂತ್ರ್ಯದ ಅಂಗವಾಗಿ ಆಚರಿಸುತ್ತಿರುವ ” ಆಜಾದಿ ಕಾ ಅಮೃತ್ ಉತ್ಸವ್’ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ ಹೇಳಿದ್ದಾರೆ.

ಸಾವರ್ಕರ್‌ಗೆ ಯಾವುದೇ ಸರ್ಕಾರದಿಂದಲ್ಲ, ಆದರೆ ದೇಶದ ಜನರಿಂದ ಅವರ ಅದಮ್ಯ ಚೈತನ್ಯ ಮತ್ತು ಧೈರ್ಯವನ್ನು ಅನುಮೋದಿಸುವ ಮೂಲಕ “ವೀರ್” ಬಿರುದು ನೀಡಲಾಗಿದೆ ಎಂದು ಸಚಿವರು ಹೇಳಿದರು. “ಭಾರತದ 130 ಕೋಟಿ ಜನರು ಪ್ರೀತಿಯಿಂದ ಅವರಿಗೆ ನೀಡಿದ ಈ ಬಿರುದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ ಶಾ ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದ್ದಾರೆ.

ಇಂದಿನ ಭಾರತದಲ್ಲಿ ಹೆಚ್ಚಿನ ಜನರು ಸ್ವಾತಂತ್ರ್ಯದ ನಂತರ ಜನಿಸಿದರು. ಆದ್ದರಿಂದ “ದೇಶಕ್ಕಾಗಿ ಸಾಯುವ” ಅವಕಾಶವನ್ನು ಪಡೆಯಲಿಲ್ಲ. “ಇಂದಿನ ಯುವಕರು ಈ ಮಹಾನ್ ರಾಷ್ಟ್ರಕ್ಕಾಗಿ ಬದುಕಲು ನಾನು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದರು.

ರಾಜನಾಥ್ ಸಿಂಗ್ ಸಾವರ್ಕರ್ ಅವರನ್ನು ಟೀಕಿಸಿದ ನಂತರ ಇತ್ತೀಚೆಗೆ ಒಂದು ದೊಡ್ಡ ವಿವಾದವು ಭುಗಿಲೆದ್ದಿತು. ಕ್ಷಮಾದಾನ ಅರ್ಜಿಗಳ ಬಗ್ಗೆ ಉಲ್ಲೇಖಿಸಿ ಸಾವರ್ಕರ್ ನ್ನು ಅವಮಾನಿಸಲಾಗುತ್ತಿದೆ ಎಂದು ಸಿಂಗ್ ಹೇಳಿದ್ದರು.

ಇದನ್ನೂ ಓದಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾವರ್ಕರ್ ಇದ್ದ ಜೈಲಿಗೆ ಭೇಟಿ ಗೌರವ ನಮನ ಸಲ್ಲಿಸಿದ ಅಮಿತ್ ಶಾ

ಇದನ್ನೂ ಓದಿ: ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಸಾವರ್ಕರ್​​ಗೆ ಹೇಳಿದ್ದು ಗಾಂಧಿ: ರಾಜನಾಥ್ ಸಿಂಗ್

Follow us on

Related Stories

Most Read Stories

Click on your DTH Provider to Add TV9 Kannada