ಬಿಜೆಪಿಗೆ ಮಹಾತ್ಮಾ ಗಾಂಧಿ ಅಥವಾ ಸಾವರ್ಕರ್ ಬಗ್ಗೆ ಏನೂ ಗೊತ್ತಿಲ್ಲ: ಉದ್ಧವ್ ಠಾಕ್ರೆ
ಬಿಜೆಪಿಗೆ ವೀರ್ ಸಾವರ್ಕರ್ ಆಗಲಿ ಅಥವಾ ಮಹಾತ್ಮಾ ಗಾಂಧಿ ಅವರಾಗಲಿ ಗೊತ್ತಿಲ್ಲ ಎಂದು ಹೇಳಿದರು.
ಮುಂಬೈ: ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಯನ್ನು ನೆಪವಾಗಿರಿಸಿಕೊಂಡು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ವೀರ್ ಸಾವರ್ಕರ್ ಆಗಲಿ ಅಥವಾ ಮಹಾತ್ಮಾ ಗಾಂಧಿ ಅವರಾಗಲಿ ಗೊತ್ತಿಲ್ಲ ಎಂದು ಹೇಳಿದರು.
ಶಿವಸೇನೆಯ ವಾರ್ಷಿಕ ದಸರಾ ಱಲಿಯಲ್ಲಿ ಮಾತನಾಡಿದ ಅವರು, ದೇಲ್ಗರ್ ವಿಧಾನಸಭಾ ಉಪಚುನಾವಣೆಯಲ್ಲಿ ಶಿವಸೇನೆಯ ಮಾಜಿ ಶಾಸಕನನ್ನು ಚುನಾವಣೆಗೆ ನಿಲ್ಲಿಸಿದ ಕ್ರಮವನ್ನೂ ಅವರು ಲೇವಡಿ ಮಾಡಿದರು. ವಿಶ್ವದ ಅತಿದೊಡ್ಡ ಪಕ್ಷಕ್ಕೆ ಸ್ವಂತದ ಅಭ್ಯರ್ಥಿಗಳೂ ಸಿಗುತ್ತಿಲ್ಲ. ಬೇರೆ ಪಕ್ಷಗಳಿಂದ ಅವರು ಅಭ್ಯರ್ಥಿಗಳನ್ನು ಹುಡುಕಿ ಹೆಕ್ಕುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಮಹಾತ್ಮ ಗಾಂಧಿ ಅವರ ಸೂಚನೆ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಪತ್ರ ಬರೆದಿದ್ದರು ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಯನ್ನು ಠಾಕ್ರೆ ಪರೋಕ್ಷವಾಗಿ ಉಲ್ಲೇಖಿಸಿದ್ದರು. ಶಿವಸೇನೆಯನ್ನು ಭ್ರಷ್ಟ ಪಕ್ಷ ಎಂದು ದೂರಿದ್ದಕ್ಕೆ ಬಿಜೆಪಿಯನ್ನು ಟೀಕಿಸಿದ್ದರು. ಎರಡೂ ಪಕ್ಷಗಳ ಮೈತ್ರಿ 2019ರಲ್ಲಿ ಕೊನೆಯಾಗಿತ್ತು. ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ 2019ರಲ್ಲಿ ಪ್ರಯತ್ನಿಸಿತ್ತು.
ಇದನ್ನೂ ಓದಿ: ಉದ್ಧವ್ ಠಾಕ್ರೆ, ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ಮುಖಕ್ಕೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರು ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದ ಉದ್ಧವ್ ಠಾಕ್ರೆ ಸರ್ಕಾರ