ಲೋಕಸಭೆಯಲ್ಲಿಂದು ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ 4 ಖಾಸಗಿ ಮಸೂದೆಗಳು ಮಂಡನೆ; ಈ ಮಸೂದೆಯಲ್ಲೇನಿದೆ?

| Updated By: ರಶ್ಮಿ ಕಲ್ಲಕಟ್ಟ

Updated on: Jul 23, 2021 | 4:54 PM

Private Members’ Bills: ಲೋಕಸಭಾ ಸದಸ್ಯರ ಮಾಹಿತಿಯ ಪ್ರಕಾರ 540 ಸಂಸದರ ಪೈಕಿ 168 ಮಂದಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆಂದು ತೋರಿಸುತ್ತದೆ. ಅವರಲ್ಲಿ 105 ಮಂದಿ ಆಡಳಿತಾರೂಢ ಬಿಜೆಪಿಯವರು.

ಲೋಕಸಭೆಯಲ್ಲಿಂದು ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ 4 ಖಾಸಗಿ ಮಸೂದೆಗಳು ಮಂಡನೆ; ಈ ಮಸೂದೆಯಲ್ಲೇನಿದೆ?
ಲೋಕಸಭೆ (ಪ್ರಾತಿನಿಧಿಕ ಚಿತ್ರ)
Follow us on

ದೆಹಲಿ: ಶುಕ್ರವಾರ ಮೂರು ಬಿಜೆಪಿ ಲೋಕಸಭಾ ಸದಸ್ಯರು ಮತ್ತು ಜೆಡಿಯುನ ಒಬ್ಬರು ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಖಾಸಗಿ ಮಸೂದೆಗಳನ್ನು(Private Members’ Bills) ಮಂಡಿಸಲಿದ್ದಾರೆ. ನಾಲ್ವರು  ಬಿಜೆಪಿ ಸಂಸದರ ಪೈಕಿ ಗೋರಖ್‌ಪುರದ ಸಂಸದ ರವಿ ಕಿಶನ್ ಉತ್ತರ ಪ್ರದೇಶದ ಮೂಲದವರಾಗಿದ್ದು ಇವರು ಮಂಡಿಸಲಿರುವ ರಾಜ್ಯ ಜನಸಂಖ್ಯಾ ನಿಯಂತ್ರಣ ಮಸೂದೆ ಪ್ರಕ್ರಿಯೆಯಲ್ಲಿದೆ. ಅಂದಹಾಗೆ ಕಿಶನ್ ನಾಲ್ಕು ಮಕ್ಕಳ ತಂದೆ.ಇವರಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ.

ಆದಾಗ್ಯೂ, ಲೋಕಸಭೆಯ ನವೀಕರಿಸಿದ ಖಾಸಗಿ ಸದಸ್ಯರ ವ್ಯವಹಾರ ಪಟ್ಟಿಯಲ್ಲಿ ಕಿಶನ್ ಅವರ ಮಸೂದೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.

ಕಿಶನ್ ಅವರ ಪಕ್ಷದ ಸಹೋದ್ಯೋಗಿ ಬಿಹಾರದ ಸುಶೀಲ್ ಕುಮಾರ್ ಸಿಂಗ್ ಅವರು ಪ್ರಸ್ತಾಪಿಸಿದ ಮಸೂದೆ, ಜನಸಂಖ್ಯೆಯನ್ನು ಖಾತ್ರಿಪಡಿಸಿಕೊಳ್ಳಲು ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಇರುವುದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಜನಸಂಖ್ಯಾ ಯೋಜನಾ ಪ್ರಾಧಿಕಾರ ಮತ್ತು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಜನಸಂಖ್ಯಾ ಯೋಜನಾ ಸಮಿತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ. ಇದು ನಮ್ಮ ರಾಷ್ಟ್ರದ ಸಂಪನ್ಮೂಲಗಳು ಮತ್ತು ಅಭಿವೃದ್ಧಿಗೆ ಅನುಗುಣವಾಗಿದೆ ಎಂದು ಮಸೂದೆಯಲ್ಲಿ ಹೇಳಿದೆ. ಸಿಂಗ್‌ಗೆ ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿ ಇದ್ದಾರೆ.

ಬಿಹಾರದ ಮತ್ತೊಬ್ಬ ಸಂಸದ, ಇಬ್ಬರು ಪುತ್ರರನ್ನು ಹೊಂದಿರುವ ಜೆಡಿ (ಯು) ನ ಡಾ.ಅಲೋಕ್ ಕುಮಾರ್ ಸುಮನ್ ಅವರು ಇದೇ ರೀತಿಯ ಮಸೂದೆಯನ್ನು ಮಂಡಿಸುತ್ತಿದ್ದಾರೆ, “ದೀರ್ಘಾವಧಿಯಲ್ಲಿ ರಾಷ್ಟ್ರೀಯ ಪ್ರಗತಿಯ ಭವಿಷ್ಯದ ಮೇಲೆ ಜನಸಂಖ್ಯೆಯ ಪರಿಣಾಮಗಳ ಬಗ್ಗೆ ಈ ಮಸೂದೆಯಲ್ಲಿ ಹೇಳಲಾಗಿದೆ.
“ಅರ್ಹ ದಂಪತಿಗಳಿಗೆ ಇಬ್ಬರು ಮಕ್ಕಳ ಸಣ್ಣ ಕುಟುಂಬ ನೀತಿಗಳನ್ನು ಉತ್ತೇಜಿಸುವ ಪ್ರಯತ್ನಗಳನ್ನು ಪುನರುಜ್ಜೀವನಗೊಳಿಸುವ” ಅಗತ್ಯವನ್ನು ಸುಮನ್ ಅವರ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಲೋಕಸಭಾ ಸದಸ್ಯರ ಮಾಹಿತಿಯ ಪ್ರಕಾರ 540 ಸಂಸದರ ಪೈಕಿ 168 ಮಂದಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆಂದು ತೋರಿಸುತ್ತದೆ. ಅವರಲ್ಲಿ 105 ಮಂದಿ ಆಡಳಿತಾರೂಢ ಬಿಜೆಪಿಯವರು. 66 ಬಿಜೆಪಿ ಸಂಸದರಿಗೆ ಮೂವರು ಮಕ್ಕಳಿದ್ದಾರೆ, 26 ಜನರಿಗೆ ನಾಲ್ಕು ಮಕ್ಕಳು ಮತ್ತು 13 ಸಂಸದರಿಗೆ ಐದು ಮಕ್ಕಳಿದ್ದಾರೆ. ಮೂವರು ಸಂಸದರಾದ ಎಐಯುಡಿಎಫ್‌ನ ಮೌಲಾನಾ ಬದ್ರುದ್ದೀನ್ ಅಜ್ಮಲ್, ಜೆಡಿಯುನ ದಿಲೇಶ್ವರ್ ಕಮೈತ್, ಅಪ್ನಾ ದಳದ ಪಕೌರಿ ಲಾಲ್ ಅವರಿಗೆ ತಲಾ ಏಳು ಮಕ್ಕಳಿದ್ದಾರೆ. ಕಾಂಗ್ರೆಸ್​​ನ ಮೊಹಮ್ಮದ್ ಸಾದಿಕ್ ಮತ್ತು ಐಯುಎಂಎಲ್​​ನ ಪಿ ಅಬ್ದುಸ್ಸಾಮದ್ ಸಮಅದನಿ ಅವರಿಗೆ ಆರು ಮಕ್ಕಳಿದ್ದಾರೆ.

ಖಾಸಗಿ ಸದಸ್ಯರ ಮಸೂದೆ ಕಾನೂನು ಆಗುವ ಸಾಧ್ಯತೆಗಳು ಕಡಿಮೆ. ಏಕೆಂದರೆ ಅವರು ಸದನದೊಳಗೆ ಸರ್ಕಾರದ ಬೆಂಬಲವನ್ನು ಪಡೆಯುವುದಿಲ್ಲ. ಪಿಆರ್​​ಎಸ್  (PRS) ಶಾಸಕಾಂಗದ ಪ್ರಕಾರ, 1970 ರಿಂದ ಯಾವುದೇ ಖಾಸಗಿ ಸದಸ್ಯರ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿಲ್ಲ. ಒಟ್ಟು 14 ಮಸೂದೆಗಳು ಮಾತ್ರ ಇಲ್ಲಿಯವರೆಗೆ ಸಂಸತ್ತಿನ ಅನುಮೋದನೆಯನ್ನು ಪಡೆದಿವೆ.

ಇದನ್ನೂ ಓದಿ:  Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು

(Three BJP Lok Sabha members and one JDU member will move Private Members’ Bills on population control today)