ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತರುತ್ತಿದ್ದ ಬಸ್ ಅಪಘಾತ; ಮೂವರು ದುರ್ಮರಣ

ಶುಕ್ರವಾರ ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಮೊಗಾದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಈವರೆಗೆ ಮೂರು ಜನರು ಸಾವನ್ನಪ್ಪಿದ್ದಾರೆ.ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕೆಲವು ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ.

ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತರುತ್ತಿದ್ದ ಬಸ್ ಅಪಘಾತ; ಮೂವರು ದುರ್ಮರಣ
ಪಂಜಾಬ್​​ನಲ್ಲಿ ಬಸ್ ಅಪಘಾತ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 23, 2021 | 2:39 PM

ಚಂಡೀಗಢ: ನವಜೋತ್ ಸಿಂಗ್ ಸಿಧು ಅವರು ಪಂಜಾಬ್  ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರನ್ನು ಕರೆ ತರುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಜಲಂಧರ್-ಬರ್ನಾಲಾ ರಸ್ತೆಯ ಮೊಗಾದ ಲೋಹರಾ ಚೌಕ್ ನಲ್ಲಿ ಎರಡು ಬಸ್ಸುಗಳು ಡಿಕ್ಕಿ ಹೊಡೆದ ಪರಿಣಾಮ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಮೊಗಾದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಈವರೆಗೆ ಮೂರು ಜನರು ಸಾವನ್ನಪ್ಪಿದ್ದಾರೆ.ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕೆಲವು ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿ (ಎಸ್‌ಎಂಒ) ಡಾ. ಸುಖ್‌ಪ್ರೀತ್ ಬ್ರಾರ್ ಹೇಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು ಕಾಂಗ್ರೆಸ್ ಶಾಸಕ ಕುಲ್ಬೀರ್ ಸಿಂಗ್ ಜಿರಾ ಅವರ ಬೆಂಬಲಿಗರಾಗಿದ್ದಾರೆ. ಇವರು ಮೊಗಾದಿಂದ 15 ಕಿ.ಮೀ ದೂರದಲ್ಲಿರುವ ಜೀರಾದಿಂದ ಚಂಡೀಗಢದಲ್ಲಿರುವ ಪಂಜಾಬ್ ಕಾಂಗ್ರೆಸ್ ಭವನಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿಯ ಸ್ಥಾಪನಾ ಸಮಾರಂಭಕ್ಕೆ ಬರುತ್ತಿದ್ದರು. ಅವರ ವಾಹನ ಡಿಕ್ಕಿ ಹೊಡೆದ ಪಂಜಾಬ್ ರೋಡ್ ವೇಸ್ ಬಸ್ ಜಲಂಧರ್ ಕಡೆಗೆ ಹೋಗುತ್ತಿತ್ತು.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು “ಮೊಗಾ ಜಿಲ್ಲೆಯಲ್ಲಿ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಯಿತು, ಇದರಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಸರ್ಕಾರಕ್ಕೆ ವರದಿ ಕಳುಹಿಸುವಂತೆ ಮೊಗಾ ಡಿಸಿಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈಗ ಪಕ್ಷದ ಅಧ್ಯಕ್ಷ; ಪಿಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನವಜೋತ್ ಸಿಂಗ್ ಸಿಧು

ಇದನ್ನೂ ಓದಿ: ಬಿಕ್ಕಟ್ಟು ಶಮನ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜತೆ ಚಹಾ ಸೇವಿಸಿದ ಸಿಎಂ ಅಮರಿಂದರ್ ಸಿಂಗ್

(Three Congress workers headed for Chandigarh to attend Navjot Sidhu event killed in bus accident)