ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈಗ ಪಕ್ಷದ ಅಧ್ಯಕ್ಷ; ಪಿಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನವಜೋತ್ ಸಿಂಗ್ ಸಿಧು

Navjot Singh Sidhu: ಇಂದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷರಾಗಿದ್ದಾರೆ, ನಾಯಕ ಮತ್ತು ಕಾರ್ಯಕರ್ತರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ ನವಜೋತ್ ಸಿಂಗ್ ಸಿಧು.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈಗ ಪಕ್ಷದ ಅಧ್ಯಕ್ಷ; ಪಿಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 23, 2021 | 2:03 PM

ಚಂಡೀಗಢ: ಪಂಜಾಬ್ ರಾಜ್ಯ ಕಾಂಗ್ರೆಸ್(PPCC) ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು (Navjot Singh Sidhu)ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಪಿಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮುನ್ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈಗ ಪಕ್ಷದ ಅಧ್ಯಕ್ಷ ಎಂದಿದ್ದಾರೆ.

ಆಗಸ್ಟ್ 15 ರಂದು ನಾನು ಕಾಂಗ್ರೆಸ್ ಭವನದಲ್ಲಿ ನನ್ನ ಕಚೇರಿಯನ್ನು ಸ್ಥಾಪಿಸುತ್ತೇನೆ, ಮಂತ್ರಿಗಳು ಸಹ ಮೂರು ಗಂಟೆಗಳ ಕಾಲ ಇಲ್ಲಿಗೆ ಬರಬೇಕೆಂದು ನಾನು ಬಯಸುತ್ತೇನೆ. ನಾವು ಹೈಕಮಾಂಡ್‌ನ 18 ಅಂಶಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಸಿಧು ಹೇಳಿದ್ದಾರೆ.

ದುಬಾರಿ ವಿದ್ಯುತ್ ಮತ್ತು ವಿವಾದಾತ್ಮಕ ವಿದ್ಯುತ್ ಖರೀದಿ ಒಪ್ಪಂದಗಳ ಬಗ್ಗೆಯೂ ಸಿಧು ಮಾತನಾಡಿದ್ದಾರೆ. ನನ್ನ ಬಗ್ಗೆ ಎಲ್ಲಾ ರೀತಿಯ ಊಪೋಹಗಳಿವೆ, ಸ್ಥಾನಗಳು ಸಮಸ್ಯೆಯಲ್ಲ. ಇಂದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷರಾಗಿದ್ದಾರೆ. ನಾಯಕ ಮತ್ತು ಕಾರ್ಯಕರ್ತರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ ಸಿಧು.

ಪಕ್ಷ ಅಧ್ಯಕ್ಷರಾಗಿ ಸಿಧು ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪಕ್ಷದ ಅಧ್ಯಕ್ಷರನ್ನು ಬೆಂಬಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಸಿಧು ಜನಿಸಿದ ವರ್ಷವೇ ನಾನು ಸೈನ್ಯದಲ್ಲಿ ನಿಯೋಜನೆಗೊಂಡಿದ್ದು.ನನ್ನ ತಾಯಿ ನನ್ನನ್ನು ರಾಜಕೀಯಕ್ಕೆ ಪ್ರವೇಶಿಸಲು ಕೇಳಿದಾಗ, ಸಿಧು ಅವರ ಅಪ್ಪ ನನಗೆ ಸಹಾಯ ಮಾಡಿದರು. ಅವನು ಸುಮಾರು ಆರು ವರ್ಷದವನಿದ್ದಾಗ ನಾನು ಅವನ ಮನೆಗೆ ಹೋಗುತ್ತಿದ್ದೆ.

ಕೊವಿಡ್ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಪ್ರಥಮ ಸ್ಥಾನ ಗಳಿಸಿತು. ಪ್ರಾಥಮಿಕ ಶಿಕ್ಷಣದಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿದೆ ಮತ್ತು ಆಹಾರ ಬೌಲ್‌ಗೆ ಪಂಜಾಬ್‌ನ ಕೊಡುಗೆಯೂ ಅತ್ಯಧಿಕವಾಗಿದೆ. ಹೊಸ ಜವಾಬ್ದಾರಿಗಳಿಗಾಗಿ ನವಜೋತ್ ಸಿಧು ಮತ್ತು ಇತರರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ ಸಿಂಗ್.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪಕ್ಷದ ಮಾಜಿ ರಾಜ್ಯ ಅಧ್ಯಕ್ಷ ಸುನಿಲ್ ಜಖರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಹೊಸ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಸ್ಥಾಪನೆಯ ಸಂದರ್ಭದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

ಸಮಾರಂಭದಲ್ಲಿ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಮೊದಲು ಭಾಷಣಮಾಡಿದ್ದು, ಪಕ್ಷದ ಮಾಜಿ ರಾಜ್ಯ ಅಧ್ಯಕ್ಷ ಸುನಿಲ್ ಜಖರ್ ನಂತರ ಭಾಷಣ ಮಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರನ್ನು ಉತ್ತೇಜಿಸಲು ನಾನು ನಿಮಗಾಗಿ ಅಪೂರ್ಣ ಅಜೆಂಡಾವನ್ನು ಕೊಡುತ್ತಿದ್ದೇನೆ ಎಂದಿದ್ದಾರೆ ಜಖರ್. ಈಗ ಒಬ್ಬ ಕಮಾಂಡರ್ ಮತ್ತು ಕಮಾಂಡರ್-ಇನ್-ಚೀಫ್ ಒಟ್ಟಿಗೆ ಯುದ್ಧಭೂಮಿಗೆ ಪ್ರವೇಶಿಸುತ್ತಾರೆ.

ಕ್ಯಾಪ್ಟನ್ ಸಾಬ್ ನಿಮಗೆ ನಾನು ಕೃತಜ್ಞನಾಗಿದ್ದೇನೆ, ಪಂಜಾಬ್ ಜನರು ನಿಮ್ಮನ್ನು ಇಷ್ಟಪಟ್ಟಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ನವಜೋತ್ ಸಿಂಗ್ ಸಿಧು ಅವರಿಗೆ ಸೋನಿಯಾ ಗಾಂಧಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ ಒಳಗಿನ ಪ್ರತಿಸ್ಪರ್ಧಿ ಪಕ್ಷಗಳು ಮತ್ತು ವಿರೋಧಿಗಳು ಇಂದು ಪಟಾಕಿಗಳನ್ನು ನಿರೀಕ್ಷಿಸುತ್ತಿದ್ದರು. ಆದರೆ ಅದು ಆಗಲಿಲ್ಲ ಎಂದು ಸುನಿಲ್ ಜಖರ್ ಹೇಳಿದ್ದಾರೆ.

ಈ ಸಮಾರಂಭವು ಚಂಡೀಗಢದ ಸೆಕ್ಟರ್ 15ರ ಕಾಂಗ್ರೆಸ್ ಭವನದಲ್ಲಿ ನಡೆದಿದ್ದು, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗಿದೆ.

ಇದನ್ನೂ ಓದಿ: ಬಿಕ್ಕಟ್ಟು ಶಮನ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜತೆ ಚಹಾ ಸೇವಿಸಿದ ಸಿಎಂ ಅಮರಿಂದರ್ ಸಿಂಗ್