
ಮುಂಬೈ, ನವೆಂಬರ್ 6: ಮಹಾರಾಷ್ಟ್ರದ (Maharashtra) ಮುಂಬ್ರಾದ ಸ್ಯಾಂಡ್‌ಹರ್ಸ್ಟ್ ನಿಲ್ದಾಣದ ಬಳಿ ಮುಂಬೈ ಉಪನಗರದ ರೈಲು (Mumbai Train Accident) ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಇಂದು ಸಂಜೆ ದಕ್ಷಿಣ ಮುಂಬೈನ ಸ್ಯಾಂಡ್‌ಹರ್ಸ್ಟ್ ರಸ್ತೆ ರೈಲು ನಿಲ್ದಾಣದ ಬಳಿ ಸ್ಥಳೀಯ ರೈಲು ಡಿಕ್ಕಿ ಹೊಡೆದು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಸ್ಥಳೀಯ ರೈಲು ಅವರ ಬಳಿಗೆ ಬಂದಿತು. ಸಮಯಕ್ಕೆ ಸರಿಯಾಗಿ ಅವರು ಆಚೆ ಚಲಿಸಲು ಸಾಧ್ಯವಾಗದ ಕಾರಣ ರೈಲು ಅವರಿಗೆ ಡಿಕ್ಕಿ ಹೊಡೆದಿದೆ. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆ: ಬೆಂಗಳೂರಿನಿಂದ ಬಿಹಾರಕ್ಕೆ ವಿಶೇಷ ರೈಲುಗಳು, ಇಲ್ಲಿದೆ ವೇಳಾಪಟ್ಟಿ
ಇಂದು ರಾತ್ರಿ 7 ಗಂಟೆ ಸುಮಾರಿಗೆ ತೀವ್ರ ಜನದಟ್ಟಣೆ ಮತ್ತು ಉಪನಗರ ರೈಲು ಸೇವೆಗಳ ಅಡಚಣೆಯಿಂದಾಗಿ ಹಲವಾರು ಪ್ರಯಾಣಿಕರು ರೈಲ್ವೆ ಹಳಿಗಳ ಉದ್ದಕ್ಕೂ ನಡೆಯತೊಡಗಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ. ಜೂನ್ 9ರಂದು ನಡೆದ ಮುಂಬ್ರಾ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಎಂಜಿನಿಯರ್‌ಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಿರುದ್ಧ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಲ್ಲಿ ರೈಲ್ವೆ ನೌಕರರು ಹಠಾತ್ ಪ್ರತಿಭಟನೆ ನಡೆಸಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು.
ಇದನ್ನೂ ಓದಿ: ಮಿರ್ಜಾಪುರದಲ್ಲಿ ರೈಲ್ವೆ ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ, ನಾಲ್ವರು ಸಾವು
ಸ್ಥಳೀಯ ರೈಲು ಸಮೀಪಿಸಿದಾಗ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ರೈಲ್ವೆ ಹಳಿಗಳನ್ನು ದಾಟುತ್ತಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಅವರಿಗೆ ರೈಲ್ವೆ ಹಳಿಯನ್ನು ದಾಟಿ ಆಚೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರಿಗೆ ರೈಲು ಡಿಕ್ಕಿ ಹೊಡೆದಿದೆ. ನಾಲ್ವರನ್ನೂ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಂತರ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೂ ತೊಂದರೆಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 pm, Thu, 6 November 25