ರಾಜಸ್ಥಾನ: ಮೊಬೈಲ್ ಗೇಮ್ ಆಡ್ಬೇಡ ಎಂದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ
ತಂದೆ ಬೈದರೆಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೊಬೈಲ್ ಗೇಮ್ ಆಡಬೇಡ ಎಂದು ತಂದೆ ಬೈದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನವೆಂಬರ್ 5ರಂದು ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಘಟನೆ ಡನೆದಿದ್ದು, ಬಾಲಕ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಹೆಸರು ರಾಜವೀರ್ ಬಘೇಲ್. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು.

ಜೈಪುರ, ನವೆಂಬರ್ 07: ಮೊಬೈಲ್ ಗೇಮ್ ಆಡಬೇಡ ಎಂದು ತಂದೆ ಬೈದಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ(Suicide)ಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ನವೆಂಬರ್ 5ರಂದು ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಘಟನೆ ಡನೆದಿದ್ದು, ಬಾಲಕ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಮೃತ ಬಾಲಕನ ಹೆಸರು ರಾಜವೀರ್ ಬಘೇಲ್. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು.
ಅಷ್ಟೇ ಅಲ್ಲದೆ ತಂದೆ ರಾಜವೀರ್ ಬಘೇಲ್ ಆಟ ಆಡುತ್ತಿದ್ದಾಗ ಅವನ ಫೋನ್ ಅನ್ನು ಕಸಿದುಕೊಂಡು ವಶಪಡಿಸಿಕೊಂಡಿದ್ದರು. ಕೋಪಗೊಂಡ ಹುಡುಗ ನೇರವಾಗಿ ತನ್ನ ಕೋಣೆಗೆ ಹೋದನು. ಅಷ್ಟರಲ್ಲಿ, ಕುಟುಂಬದ ಇತರ ಸದಸ್ಯರು ಊಟ ಮಾಡುತ್ತಿದ್ದರು.
ಊಟದ ನಂತರ ಅವರು ಬಾಲಕನ ಕೋಣೆಗೆ ಹೋದಾಗ, ಅವರ ಮಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಕೂಡಲೇ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ.
ಮತ್ತಷ್ಟು ಓದಿ: ವಿಚ್ಛೇದನ ಕೇಳಿದ್ದಕ್ಕೆ ಪತ್ನಿಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪತಿ! ಅಮೇಲೇನಾಯ್ತು?
ಆ ಹುಡುಗ ಐದು ಜನ ಒಡಹುಟ್ಟಿದವರಲ್ಲಿ ಮೂರನೆಯವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದ. ಗುರುವಾರ ರಾಜ್‌ವೀರ್ ಬಾಘೇಲ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ವಿಚಾರಣೆಯ ಸಮಯದಲ್ಲಿ, ಕುಟುಂಬ ಸದಸ್ಯರು ವಿಷ್ಣು ತನ್ನ ಮೊಬೈಲ್‌ನಲ್ಲಿ ಫ್ರೀ ಫೈರ್ ಆಟ ಆಡುತ್ತಿದ್ದನೆಂದು ಹೇಳಿದರು. ತಂದೆ ತನ್ನ ಆಟ ನಿಲ್ಲಿಸಿದಾಗ, ಕೋಪಗೊಂಡು ಕೋಣೆಗೆ ಹೋದವನೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಹೆಡ್ ಕಾನ್‌ಸ್ಟೆಬಲ್ ಕಪಿಲ್ ಶರ್ಮಾ ಹೇಳಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
