ರೈಲ್ವೆ ಸ್ಟೇಶನ್ (Railway Station) ತಲುಪಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕ (Migrant Labourers)ರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಉಳಿದವರು ಗಾಯಗೊಂಡ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ. ಇವರೆಲ್ಲ ಬಿಹಾರ (Bihar)ದ ಕಾರ್ಮಿಕರಾಗಿದ್ದು, ಮನೆಗೆ ಹೋಗುವ ಸಲುವಾಗಿ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿ (GRP)ಯೊಬ್ಬರು ತಿಳಿಸಿದ್ದಾರೆ.
ಸುಮಾರು 7-8 ವಲಸೆ ಕಾರ್ಮಿಕರು ಭಾನುವಾರ ರಾತ್ರಿ ಬ್ರಹ್ಮಾಪುರ ರೈಲ್ವೆ ಸ್ಟೇಶನ್ಗೆ ಹೋಗುತ್ತಿದ್ದರು. ಇವರೆಲ್ಲ ಹಳಿಯ ಮೇಲೇ ನಡೆದುಕೊಂಡು ಹೋಗುತ್ತಿದ್ದು, ಅದೇ ಸಮಯದಲ್ಲಿ ಬಂದ ವಿಶಾಖಪಟ್ಟಣಂ-ಟಾಟಾನಗರ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಕಾರ್ಮಿಕರೂ ಸ್ಥಳೀಯ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಈ ಹಿಂದೆಯೂ ಹಲವು ಘಟನೆಗಳು ನಡೆದಿವೆ
ಹೀಗೆ ವಲಸೆ ಕಾರ್ಮಿಕರು ರೈಲಿಗೆ ಬಲಿಯಾಗಿದ್ದು ಇದೇ ಮೊದಲಲ್ಲ. ಹಿಂದೆ ಕೂಡ ಹಲವು ಘಟನೆಗಳು ನಡೆದಿವೆ. ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ 68 ವರ್ಷದ ರೈತನೊಬ್ಬನಿಗೆ ಸಿಲ್ವಾರ್ ಗ್ರಾಮದ ಬಳಿ ದೆಹಲಿ-ಸಹರನ್ಪುರ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಈ ರೈತ ಕೂಡ ರೈಲ್ವೆ ಹಳಿ ದಾಟುತ್ತಿದ್ದಾಗಲೇ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: ಉಡುಗೆ ಯಾವುದಾದರೇನು, ರಣವೀರ್ ಸಿಂಗ್ ಮಟ್ಟಸ ದೇಹದ ಮೇಲೆ ಚೆನ್ನಾಗಿ ಕಾಣುತ್ತದೆ ಅನ್ನೋದು ಸುಳ್ಳಲ್ಲ!
Published On - 5:33 pm, Mon, 30 August 21