AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing Bell: ದಿನಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ರೂ. ಹೆಚ್ಚಳ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರದಂದು ಮತ್ತೊಂದು ದಾಖಲೆಯ ಎತ್ತರದಲ್ಲಿ ವಹಿವಾಟು ಚುಕ್ತಾ ಮಾಡಿದೆ.

Closing Bell: ದಿನಾಂತ್ಯಕ್ಕೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ರೂ. ಹೆಚ್ಚಳ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 30, 2021 | 4:58 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ (ಆಗಸ್ಟ್ 30, 2021) ದಾಖಲೆ ಪ್ರಮಾಣದ ಎತ್ತರದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಹೂಡಿಕೆದಾರರ ಸಂಪತ್ತು 3.58 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಬ್ಲ್ಯೂಚಿಪ್ ಷೇರುಗಳಲ್ಲಿ ಭಾರೀ ಪ್ರಮಾಣದ ಬೆಂಬಲ ಕಂಡುಬಂತು. ದಿನದ ಕೊನೆಗೆ ಸೆನ್ಸೆಕ್ಸ್ ಸೂಚ್ಯಂಕವು 765 ಪಾಯಿಂಟ್ಸ್ ಅಥವಾ ಶೇ 1.36ರಷ್ಟು ಏರಿಕೆ ದಾಖಲಿಸಿ, 56,889.76 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ- 50 ಸೂಚ್ಯಂಕವು 226 ಪಾಯಿಂಟ್ಸ್ ಅಥವಾ ಶೇ 1.35ರಷ್ಟು ಹೆಚ್ಚಳವಾಗಿ, 16,931 ಪಾಯಿಂಟ್ಸ್​​ನೊಂದಿಗೆ ವಹಿವಾಟು ಚುಕ್ತಾ ಮಾಡಿತು. ಇಂದಿನ ವ್ಯವಹಾರದಲ್ಲಿ 2067 ಕಂಪೆನಿಯ ಷೇರುಗಳು ಮೇಲಕ್ಕೆ ಏರಿದರೆ, 998 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು. ಇನ್ನು 149 ಕಂಪೆನಿಯ ಷೇರುಗಳ ದರದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ವಲಯವಾರು ನೋಡುವುದಾದರೆ, ಮಾಹಿತಿ ತಂತ್ರಜ್ಞಾನವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಏರಿಕೆಯಲ್ಲೇ ಅಂತ್ಯವಾಗಿವೆ. ಲೋಹ, ಫಾರ್ಮಾಸ್ಯುಟಿಕಲ್ಸ್, ಪಿಎಸ್​ಯು ಬ್ಯಾಂಕ್​ ತಲಾ ಶೇ 2ರಷ್ಟು ಹೆಚ್ಚಳ ಕಂಡಿವೆ. ಇನ್ನು ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 1.5ರಷ್ಟು ಏರಿದವು. ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆಯ ಎರಡೂ ಸೂಚ್ಯಂಕಗಳು ದಿನಾಂತ್ಯಕ್ಕೆ ದಾಖಲೆಯ ಎತ್ತರದಲ್ಲಿ ವ್ಯವಹಾರ ಚುಕ್ತಾ ಮಾಡಿವೆ. ಸೆನ್ಸೆಕ್ಸ್ ಈ ಹಿಂದಿನ ಟ್ರೇಡಿಂಗ್ ಅಂತ್ಯಕ್ಕೆ 56,124.72 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿತ್ತು. ಸೋಮವಾರ ಬೆಳಗ್ಗೆ ಶುರುವಿನಲ್ಲೇ 56,329.25 ಪಾಯಿಂಟ್ಸ್​ನೊಂದಿಗೆ ಆರಂಭಿಸಿದ್ದು, ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 56,958.27 ಪಾಯಿಂಟ್ಸ್ ಮುಟ್ಟಿತು.

ಅದೇ ರೀತಿ ನಿಫ್ಟಿ 50 ಸೂಚ್ಯಂಕವು ಈ ಹಿಂದಿನ ಟ್ರೇಡಿಂಗ್​ ಸೆಷನ್​ನಲ್ಲಿ 16,705.20 ಪಾಯಿಂಟ್ಸ್​ನೊಂದಿಗೆ ದಿನಾಂತ್ಯ ಕಂಡಿತ್ತು. ಇಂದಿನ ವಹಿವಾಟನ್ನು 16,775.85 ಪಾಯಿಂಟ್ಸ್​​ನೊಂದಿಗೆ ಶುರು ಮಾಡಿ, ದಿನದ ಹಾಗೂ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 16,951.50 ಪಾಯಿಂಟ್ಸ್​ ಮುಟ್ಟಿ ಹೊಸ ದಾಖಲೆಯನ್ನು ಬರೆಯಿತು.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಭಾರ್ತಿ ಏರ್​ಟೆಲ್ ಶೇ 4.25 ಆಕ್ಸಿಸ್ ಬ್ಯಾಂಕ್ ಶೇ 4.21 ಟಾಟಾ ಸ್ಟೀಲ್ ಶೇ 4.08 ಡಿವೀಸ್ ಲ್ಯಾಬ್ಸ್ ಶೇ 3.94 ಕೋಲ್ ಇಂಡಿಯಾ ಶೇ 3.64

ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಟೆಕ್ ಮಹೀಂದ್ರಾ ಶೇ -1.81 ನೆಸ್ಟ್ಲೆ ಶೇ -1.08 ಐಷರ್ ಮೋಟಾರ್ಸ್ ಶೇ -0.86 ಇನ್ಫೋಸಿಸ್ ಶೇ -0.63 ಟಿಸಿಎಸ್ ಶೇ -0.51

ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು

(Indian Stock Market Index Sensex And Nifty Ends At New Record High On August 30th 2021)

Published On - 4:46 pm, Mon, 30 August 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?