TTD Tickets: ಜನವರಿಗೆ ದರ್ಶನ ಸ್ಲಾಟ್ ತೆರೆದ ತಿರುಪತಿ; ಉದಯಸ್ತಮಾನ ಸೇವಾ ಟಿಕೆಟ್ ಬೆಲೆ ₹1 ಕೋಟಿ
Tirumala Tirupati Darshan Tickets ಮಂಡಳಿಯು ಜನವರಿ 1 ಮತ್ತು ಜನವರಿ 13 ರಿಂದ 22 ರವರೆಗೆ ದಿನಕ್ಕೆ 20,000 ಮತ್ತು ಜನವರಿ 2 ರಿಂದ 12 ಮತ್ತು ಜನವರಿ 23 ರಿಂದ 31 ರವರೆಗೆ ದಿನಕ್ಕೆ 12,000 ಟಿಕೆಟ್ಗಳನ್ನು ಬಿಡುಗಡೆ ಮಾಡಿದೆ.
ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanam) ಆಂಧ್ರಪ್ರದೇಶದ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರನ (Lord Venkateswara) ದರ್ಶನಕ್ಕಾಗಿ ಸ್ಲಾಟ್ಗಳನ್ನು ತೆರೆದಿದೆ ಮತ್ತು ಜನವರಿ ತಿಂಗಳಿಗೆ 4,60,000 ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಕೊರೊನಾವೈರಸ್ (coronavirus)ಸಾಂಕ್ರಾಮಿಕದ ಮಧ್ಯೆ ಮುಚ್ಚಲಾಗಿದ್ದ ದೇವಾಲಯವು ಈಗ ಎರಡು ವರ್ಷಗಳ ನಂತರ ಕೊವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸುವ ಮೂಲಕ ದೇಗುಲಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡುತ್ತಿದೆ. ಟಿಟಿಡಿ ಸೋಮವಾರ ಬೆಳಗ್ಗೆ 9 ಗಂಟೆಯಿಂದ ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕೃತ ವೆಬ್ಸೈಟ್ನಲ್ಲಿ ಜನವರಿ ತಿಂಗಳ ಸ್ಲಾಟ್ ಮಾಡಿದ ಸರ್ವದರ್ಶನ (SSD) ಟೋಕನ್ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು. ಭಕ್ತರು ಆನ್ಲೈನ್ ಮತ್ತು ಆಫ್ಲೈನ್ ಮೋಡ್ನಲ್ಲಿ ಟಿಕೆಟ್ಗಳನ್ನು ಖರೀದಿಸಬಹುದು. ಉದಯಸ್ತಮಾನ ಸೇವಾ ಟಿಕೆಟ್ ಬೆಲೆ ₹ 1 ಕೋಟಿ ಮತ್ತು ಶುಕ್ರವಾರ ಭಕ್ತರು ಇದೇ ಟಿಕೆಟ್ಗೆ ₹ 1.50 ಕೋಟಿ ಪಾವತಿಸಬೇಕಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಮಂಡಳಿಯು ಸೂಪರ್ ಸ್ಪೆಷಾಲಿಟಿ ಮಕ್ಕಳ ಆಸ್ಪತ್ರೆ ನಿರ್ಮಾಣ ಸೇರಿದಂತೆ ಮೂರು ಪ್ರಮುಖ ಯೋಜನೆಗಳಿಗೆ ಹಣವನ್ನು ಬಳಸಲು ಯೋಜಿಸುತ್ತಿದೆ ಎಂದು ವರದಿಗಳು ಸೂಚಿಸುತ್ತವೆ.
ಡಿಸೆಂಬರ್ 25 ರಂದು, ಟಿಕೆಟ್ ಬಿಡುಗಡೆ ಘೋಷಣೆಯ ನಂತರ ಮಂಡಳಿಯ ವೆಬ್ಸೈಟ್ 14 ಲಕ್ಷ ಸಂದರ್ಶಕರನ್ನು ಸ್ವೀಕರಿಸಿತು ಮತ್ತು ಸಂಪೂರ್ಣ ಸ್ಲಾಟ್ 55 ನಿಮಿಷಗಳಲ್ಲಿ ಬುಕ್ ಆಗಿದೆ.
ಮಂಡಳಿಯು ಜನವರಿ 1 ಮತ್ತು ಜನವರಿ 13 ರಿಂದ 22 ರವರೆಗೆ ದಿನಕ್ಕೆ 20,000 ಮತ್ತು ಜನವರಿ 2 ರಿಂದ 12 ಮತ್ತು ಜನವರಿ 23 ರಿಂದ 31 ರವರೆಗೆ ದಿನಕ್ಕೆ 12,000 ಟಿಕೆಟ್ಗಳನ್ನು ಬಿಡುಗಡೆ ಮಾಡಿದೆ. ಮತ್ತೊಂದೆಡೆ ಇದು ಜನವರಿ 1, 2, 13, 22, ಮತ್ತು 26 ರಂದು 5,500 ವರ್ಚುವಲ್ ಸೇವಾ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿತು, ಇವೆಲ್ಲವನ್ನೂ ನಿಮಿಷಗಳಲ್ಲಿ ಬುಕ್ ಮಾಡಲಾಗಿದೆ.
ದೇವಾಲಯದ ಮಂಡಳಿಯು ಭಕ್ತರಿಗೆ ಕೊವಿಡ್-19 ಎರಡೂ ಡೋಸ್ಗಳ ಲಸಿಕೆ ಪ್ರಮಾಣಪತ್ರ ಅಥವಾ ದರ್ಶನಕ್ಕಾಗಿ ಋಣಾತ್ಮಕ ಕೊವಿಡ್-19 ವರದಿಯನ್ನು ಕಡ್ಡಾಯಗೊಳಿಸಿದೆ.
ಕೊವಿಡ್ -19 ಪ್ರಕರಣಗಳ ಉಲ್ಬಣದ ಮಧ್ಯೆ ಇದು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ ಮತ್ತು ಭಕ್ತರ ಸಂಖ್ಯೆಯಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡಿದೆ. ಭಕ್ತರು ಆಧಾರ್ ಕಾರ್ಡ್ ವಿವರಗಳೊಂದಿಗೆ ಟಿಕೆಟ್ ಕಾಯ್ದಿರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಉದಯಸ್ತಮಾನ ಆರ್ಜಿತ ಸೇವೆಯನ್ನು 1981 ರಲ್ಲಿ ಪ್ರಾರಂಭಿಸಲಾಯಿತು ಆದರೆ 2006 ರಲ್ಲಿ ಅಧಿಕೃತವಾಗಿ ಮುಚ್ಚುವ ಮೊದಲು 1995 ರಲ್ಲಿ ನಿಲ್ಲಿಸಲಾಯಿತು. ಮೊದಲು ಪರಿಚಯಿಸಿದಾಗ ಟಿಕೆಟ್ಗಳ ಬೆಲೆ ₹1 ಲಕ್ಷವಾಗಿತ್ತು. ಮಂಡಳಿಯು ಸುಮಾರು 2,600 ಟಿಕೆಟ್ಗಳನ್ನು ಮಾರಾಟ ಮಾಡಿದೆ. ಆದರೆ 531 ಟಿಕೆಟ್ಗಳು ಬಳಕೆಯಾಗದೆ ಉಳಿದಿವೆ. ಇದೀಗ ಈ ಟಿಕೆಟ್ಗಳನ್ನು ಹಂಚಿಕೆ ಮಾಡಲು ಮಂಡಳಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: TTD Tickets ತಿರುಮಲ ತಿರುಪತಿ ದೇವಸ್ಥಾನ: ₹300 ಟಿಕೆಟ್ ಖರೀದಿಸಿ ದೇವರ ದರ್ಶನ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Published On - 12:49 pm, Mon, 27 December 21