ತಿರುಪತಿಯ ಆಸ್ಪತ್ರೆಯೊಂದರಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ರೋಗಿಯೊಬ್ಬ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ತಿರುಪತಿ ಸ್ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಮನಬಂದಂತೆ ವರ್ತಿಸಿದ್ದಾರೆ. ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಆಕೆಗೆ ಕಪಾಳಪೋಕ್ಷಮಾಡಿದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸಿದರು.
ಸ್ವಿಮ್ಸ್ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆತರಲಾಗಿತ್ತು. ಆತ ಮದ್ಯ ವ್ಯಸನಿಯಾಗಿದ್ದು, ತಿರುಪತಿಯಲ್ಲಿ ಮದ್ಯ ಸಿಗದ ಕಾರಣ ಆತ ತಲೆ ತಿರುಗಿ ಬಿದ್ದಿದ್ದ. ಕೆಲವರು ಆತನನ್ನು ಗಮನಿಸಿ ಅಶ್ವಿನಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಬಂಗಾರು ರಾಜು ಅವರನ್ನು ಉತ್ತಮ ಚಿಕಿತ್ಸೆಗಾಗಿ ಅಶ್ವಿನಿ ಆಸ್ಪತ್ರೆಯಿಂದ ತಿರುಪತಿಯ ಸ್ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶನಿವಾರ ಬೆಳಗ್ಗೆ ಸ್ವಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು.
ಬಳಿಕ ಆತನಿಗೆ ಪ್ರಜ್ಞೆ ಮರಳಿತ್ತು, ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ, ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ಸುತ್ತಮುತ್ತಲಿನ ರೋಗಿಗಳ ಸಂಬಂಧಿಕರು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ.
ಮತ್ತಷ್ಟು ಓದಿ: Kolkata Murder Case: ಕತ್ತಿನಲ್ಲಿ ಬ್ಲೂಟೂತ್, ಕೈಯಲ್ಲಿ ಹೆಲ್ಮೆಟ್ ಸೆಮಿನಾರ್ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ
ಈ ಸಂಪೂರ್ಣ ಘಟನೆ ವಾರ್ಡ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮತ್ತೊಂದೆಡೆ ಈ ಘಟನೆಯಿಂದ ಸ್ವಿಮ್ಸ್ ಆಸ್ಪತ್ರೆ ವೈದ್ಯರು ಆತಂಕಗೊಂಡಿದ್ದರು. ವೈದ್ಯರು ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Please respect doctors; no doctor wants their patient to die.
The system may be corrupt, with exorbitant fees for education and the influence of the pharmaceutical industry, but that doesn’t diminish the dedication of the doctors themselves.Happened in SVIMS, Tirupati, AP pic.twitter.com/wrw8FSLfTa
— Veda Saahitya Murthy 🏡:🇮🇳 🏬: 🇿🇦 (@SaahityaVeda) August 25, 2024
ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಹತ್ಯೆಯ ನಂತರ, ದೇಶಾದ್ಯಂತ ಆಸ್ಪತ್ರೆಗಳಲ್ಲಿ ವೈದ್ಯರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಅಲ್ಲದೆ, ಆಸ್ಪತ್ರೆಗಳಲ್ಲಿ ವೈದ್ಯರಿಗೆ ಬಿಗಿ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಗಳೂ ಶುರುವಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Mon, 26 August 24