ತಿರುಪತಿ: ದಕ್ಷಿಣ ಭಾರತದಲ್ಲಿ ವಾಸವಾಗಿರುವ ಹಿಂದೂ ಕುಟುಂಬಗಳಿಗೆ ಕನಿಷ್ಟ ಒಮ್ಮೆಯಾದರೂ ಇಡೀ ಭಾರತದಲ್ಲೇ ಅತ್ಯಂತ ಪವಿತ್ರ ಪುಣ್ಯಸ್ಥಳಗಳಲ್ಲಿ (pilgrimage) ಒಂದೆನಿಸಿಕೊಂಡಿರುವ ಮತ್ತು ತಿರುಮಲ ಬೆಟ್ಟದ (Tirumala Hills) ಶಿಖರದಲ್ಲಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು ಬಾಲಾಜಿಯ ದರ್ಶನ ಪಡೆಯಬೇಕೆಂಬ ಅದಮ್ಯ ಆಸೆಯಿರುತ್ತದೆ. ಈ ಸ್ಥಳದ ಮಹತ್ವ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ (cultural history) ಅನುಗುಣವಾಗಿಯೇ ಇಲ್ಲಿನ ರೇಲ್ವೇ ನಿಲ್ದಾಣದ ಮರುನಿರ್ಮಾಣ ಯೋಜನೆಯು ದ್ರಾವಿಡ ಶೈಲಿಯ ದೇವಸ್ಥಾನ ನಿರ್ಮಾಣದಿಂದ ಪ್ರೇರಿತಗೊಂಡಿದೆ.
ನಾವು ನಮ್ಮದು ಎಂಬ ಭಾವನೆಯನ್ನು ಹುಟ್ಟಿಸುವ ಉದ್ದೇಶದಿಂದ ನಿಲ್ದಾಣವನ್ನು ಗೋಪುರದಂತೆ ಗೋಚರಿಸುವ ಭವ್ಯ ಗೇಟ್ ಹೌಸ್ ನ ಹಾಗೆ ಮೊನಚಾದ ಆಯತಾಕಾರದ ರೂಪದಲ್ಲಿ ನಿರ್ಮಿಸಲಾಗುತ್ತದೆ.
Transforming Indian Railways!
Catch a glimpse of the graphical representation of redeveloped Tirupati Railway Station in Andhra Pradesh, SCR.
All contracts for the redevelopment project have been awarded. pic.twitter.com/AiWHnjPsMJ— Ministry of Railways (@RailMinIndia) May 31, 2022
ನೆಲಮಟ್ಟದಲ್ಲಿ ಅದ್ಭುತವಾದ ಕೆತ್ತನೆಯ ಮೂಲಕ ಗಮನ ಸೆಳೆಯುವ ದ್ವಾರಗಳಿವೆ
ಭಾರತದ ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿ ಅಭಿವೃದ್ಧಿಗೊಳ್ಳುತ್ತಿರುವ ತಿರುಪತಿ ನಗರದ ಹೃದಯಭಾಗದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿಸುವುದು ಕಟ್ಟಡ ನಿರ್ಮಾಣದಲ್ಲಿ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ದೇವಾಲಯದ ಕಲೆಯಿಂದ ಪ್ರೇರಿತವಾಗಿರುವ ಈ ಸುಂದರ ಮತ್ತು ನಯನ ಮನೋಹರ ಸ್ಥಳದ ನೋಟಕ್ಕೆ ಅನುಗುಣವಾಗಿ ನಿಲ್ದಾಣದ ಆವರಣದಲ್ಲಿ ಮತ್ತು ಸುತ್ತಲೂ ವೇದಭಾಗಗಳನ್ನು ಕೆತ್ತಿಸಿ ಜೋಡಿಸುವ ಯೋಜನೆಯೂ ಇದೆ . ಈ ಯೋಜನೆಯು ಅತ್ಯಾಧುನಿಕ ವಾಸ್ತುಶಿಲ್ಪವನ್ನು ಮಾತ್ರ ಒಳಗೊಂಡಿರದೆ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ ಮತ್ತು ಗಾಳಿ-ಉತ್ಪಾದಿತ ವಿದ್ಯುತ್ ಶಕ್ತಿ ಮತ್ತು ಬೆಳಕಿನ ಅವಶ್ಯಕತೆಗಳಿಗಾಗಿ ಸೌರ ಕೋಶ ಪ್ಯಾನೆಲ್ ಗಳ ವ್ಯವಸ್ಥೆಯನ್ನೂ ಮಾಡುತ್ತದೆ.
ಸೌರ ಶಕ್ತಿ ಸದ್ವಿನಿಯೋಗ ಮಾಡಿಕೊಳ್ಳಲು ಸೌರ ಫಲಕಗಳನ್ನು ಆರ್ಕೇಡ್ ನಲ್ಲಿ ಅಳವಡಿಸಲಾಗುವುದು. ಇವು ತಾಪಮಾನ ಹೀರಿಕೊಳ್ಳುವುದರಿಂದ, ಕಟ್ಟಡವು ತಂಪಾಗಿ ಆಹ್ಲಾದಕರ ವಾತಾವರಣವನ್ನು ಉಂಟು ಮಾಡುತ್ತದೆ ಮತ್ತು ಸಹಜವಾಗಿ ಶಕ್ತಿಯ ಕ್ಷಮತೆಯನ್ನು ಒದಗಿಸುವುದರ ಜೊತೆಗೆ ಸಾಂಪ್ರದಾಯಿಕತೆಯನ್ನು ಆಧುನಿಕತೆಯೊಂದಿಗೆ ಅದ್ಭುತವಾಗಿ ವಿಲೀನಗೊಳಿಸುತ್ತದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.