ರಕ್ತಚಂದನ ಕಳ್ಳಸಾಗಣೆದಾರರ ಅಟ್ಟಹಾಸ: ಕಾರು ಹತ್ತಿಸಿ ಕಾನ್‌ಸ್ಟೆಬಲ್ ಹತ್ಯೆ

Red Sandal Smugglers Crime: ಕಾನ್‌ಸ್ಟೆಬಲ್ ಗಣೇಶ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸತ್ಯಸಾಯಿ ಜಿಲ್ಲೆ ಧರ್ಮಾವರಂ ನಿವಾಸಿ ಗಣೇಶ್ ತಿರುಪತಿ ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ರಕ್ತಚಂದನ ಕಳ್ಳಸಾಗಣೆದಾರರ ಅಟ್ಟಹಾಸ: ಕಾರು ಹತ್ತಿಸಿ ಕಾನ್‌ಸ್ಟೆಬಲ್ ಹತ್ಯೆ
ರಕ್ತಚಂದನ ಕಳ್ಳಸಾಗಣೆದಾರರ ಅಟ್ಟಹಾಸ
ಸಾಧು ಶ್ರೀನಾಥ್​

Updated on: Feb 06, 2024 | 10:02 AM

ಅನ್ನಮಯ್ಯ ಜಿಲ್ಲೆಯಲ್ಲಿ ರಕ್ತಚಂದನ ಕಳ್ಳಸಾಗಣೆದಾರರ (Smugglers ) ಆಟಾಟೋಪ ಮಿತಿಮೀರಿದೆ. ಕಳ್ಳಕಾಕರ ಅಟ್ಟಹಾಸಕ್ಕೆ ಟಾಸ್ಕ್ ಫೋರ್ಸ್ ಕಾನ್‌ಸ್ಟೆಬಲ್ ಬಲಿಯಾಗಿದ್ದಾರೆ. ಕೂಂಬಿಂಗ್ ನಡೆಸುತ್ತಿದ್ದ ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ಸಿಬ್ಬಂದಿಯ (Tirupati Red Sandal Taskforce Police constable) ಮೇಲೆ ಕಳ್ಳಸಾಗಣೆದಾರರ ಕಾರು (Car) ದಾಳಿ ನಡೆಸಿದ್ದು, ಕಾನ್‌ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೆ.ವಿ. ಪಲ್ಲಿ ಮಂಡಲದ ಗುಂಡ್ರೆವಾರಿಪಲ್ಲಿ ಕ್ರಾಸ್‌ನಲ್ಲಿ ರಸ್ತೆಯಲ್ಲಿ ವೇಗವಾಗಿ ಬಂದ ಕಳ್ಳಸಾಗಣೆದಾರರ ಕಾರು ಟಾಸ್ಕ್ ಫೋರ್ಸ್ ಪೊಲೀಸರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಸಾಣಿಪಾಯಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿರುಪತಿಯಿಂದ ಬಂದಿದ್ದ ಟ್ರಾನ್ಸ್ ಫೋರ್ಸ್ ತಂಡ ಶ್ರೀಗಂಧ ಕಳ್ಳರನ್ನು ಹಿಡಿಯಲು ಯತ್ನಿಸಿತು. ಟಾಸ್ಕ್ ಫೋರ್ಸ್ ಪೊಲೀಸರು ಕೂಂಬಿಂಗ್ ನಡೆಸುತ್ತಿರುವುದನ್ನು ಅರಿತ ಕಳ್ಳಸಾಗಾಣಿಕೆದಾರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆ ವೇಳೆ ಕಾರಿನಲ್ಲಿ ಪರಾರಿಯಾಗುವಾಗ ಪೊಲೀಸರ ಮೇಲೆ ಕಾರು ಹತ್ತಿಸಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್ ಸಂಸದರ ‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ; ಸೋನಿಯಾ ಗಾಂಧಿ ಕ್ಷಮೆಯಾಚಿಸಲಿ: ಪ್ರಲ್ಹಾದ್‌ ಜೋಶಿ

ವೇಗವಾಗಿ ಬಂದ ಸ್ಮಗ್ಲರ್ ಕಾರಿಗೆ ಡಿಕ್ಕಿ ಹೊಡೆದು ಕಾನ್ ಸ್ಟೇಬಲ್ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಪೊಲೀಸರು ಕಳ್ಳಸಾಗಣೆದಾರರ ಕಾರನ್ನು ಹಿಂಬಾಲಿಸಿ ಕಳ್ಳಕಾಕರನ್ನು ಹಿಡಿದಿದ್ದಾರೆ. ಆದರೆ ಮೂವರು ಸ್ಮಗ್ಲರ್‌ಗಳು ಕಾರಿನಿಂದ ಇಳಿದು ಓಡಿಹೋದರು. ಸ್ಮಗ್ಲರ್‌ಗಳ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾರಿನಲ್ಲಿದ್ದ 7 ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಕಳ್ಳಸಾಗಣೆದಾರರನ್ನು ಟಾಸ್ಕ್ ಫೋರ್ಸ್ ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ಗಣೇಶ್ ಎಂಬ 30 ವರ್ಷದ ಕಾನ್‌ಸ್ಟೆಬಲ್ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾನ್‌ಸ್ಟೆಬಲ್ ಗಣೇಶ್ ಅವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸತ್ಯಸಾಯಿ ಜಿಲ್ಲೆ ಧರ್ಮಾವರಂ ನಿವಾಸಿ ಗಣೇಶ್ ತಿರುಪತಿ ರೆಡ್ ಸ್ಯಾಂಡಲ್ ಟಾಸ್ಕ್ ಫೋರ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಾರಿಯಾದ ಕಳ್ಳಸಾಗಾಣಿಕೆದಾರರಿಗಾಗಿ ಬಲೆ ಬೀಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us