ಟಿಎಂಸಿ ಸಂಸ್ಥಾಪನಾ ದಿನ: ಜನರ ಹಿತಕ್ಕಾಗಿ ಹೋರಾಟ ಮುಂದುವರಿಸುವೆ ಎಂದ ಮಮತಾ ಬ್ಯಾನರ್ಜಿ

ಬಂಗಾಳವನ್ನು ಉತ್ತಮ ಮತ್ತು ಶಕ್ತಿಯುತವಾಗಿ ಮಾಡುವುದಕ್ಕಾಗಿ ಪ್ರತಿದಿನವೂ ನಾವು ಹೋರಾಡುತ್ತೇವೆ. ತೃಣಮೂಲ ಕುಟುಂಬವು ಮುಂದಿನ ದಿನಗಳಲ್ಲಿಯೂ ಈ ಕಾರ್ಯವನ್ನು ಮುಂದುವರಿಸಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ.

ಟಿಎಂಸಿ ಸಂಸ್ಥಾಪನಾ ದಿನ: ಜನರ ಹಿತಕ್ಕಾಗಿ ಹೋರಾಟ ಮುಂದುವರಿಸುವೆ ಎಂದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)
Edited By:

Updated on: Jan 01, 2021 | 7:28 PM

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ 23ನೇ ಸಂಸ್ಥಾಪನಾ ದಿನವಾದ ಇಂದು  ಟ್ವೀಟ್ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜನರ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟು 1998 ಜನವರಿ 1ರಂದು ಮಮತಾ ಬ್ಯಾನರ್ಜಿ ಟಎಂಸಿ ಪಕ್ಷ ಹುಟ್ಟು ಹಾಕಿದ್ದರು.

ತೃಣಮೂಲ ಕಾಂಗ್ರೆಸ್​ಗೆ ಇವತ್ತು 23 ವರ್ಷ. 1998 ಜನವರಿ 1ರಿಂದ ಆರಂಭವಾದ ಈ ಪಯಣದ ಬಗ್ಗೆ ನಾನು ತಿರುಗಿ ನೋಡಿದರೆ ಅದು ಹೋರಾಟದ ವರ್ಷಗಳಾಗಿದ್ದವು. ಅಲ್ಲಿಂದ ಇಲ್ಲಿಯವರಿಗೆ ಜನರಿಗಾಗಿ ಮಾತ್ರ ನಾನು ಹೋರಾಟ ನಡೆಸಿದ್ದೇನೆ ಮತ್ತು ಹೋರಾಟ ಮುಂದುವರಿಸಲು ನಾನು ಬದ್ಧ ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

‘ಟಿಎಂಸಿ ಸಂಸ್ಥಾಪನಾ ದಿನವಾದ ಇಂದು ನಮ್ಮ ಮಾ-ಮಾಟಿ-ಮನುಷ್​ರಿಗೆ​ (ಅಮ್ಮ-ಭೂಮಿ-ಮನುಷ್ಯ) ನಾನು ಆಭಾರಿಯಾಗಿದ್ದೇನೆ. ಬಂಗಾಳವನ್ನು ಉತ್ತಮ ಮತ್ತು ಶಕ್ತಿಯುತವಾಗಿ ಮಾಡುವುದಕ್ಕಾಗಿ ಪ್ರತಿದಿನವೂ ನಮ್ಮ ಹೋರಾಟ ಮುಂದುವರಿಯಲಿದೆ. ತೃಣಮೂಲ ಕುಟುಂಬವು ಮುಂದಿನ ದಿನಗಳಲ್ಲಿಯೂ ಈ ಕಾರ್ಯವನ್ನು ಮುಂದುವರಿಸಲಿದೆ’ ಎಂದು ಅವರು ಹೇಳಿದ್ದಾರೆ.

ಸಂಸ್ಥಾಪನಾ ದಿನದ ಪ್ರಯುಕ್ತ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಟಿಎಂಸಿ ನಿರ್ದೇಶಿಸಿತ್ತು. ರಾಜ್ಯದ ಪ್ರಧಾನ ಕಾರ್ಯಾಲಯಲ್ಲಿ ಪಕ್ಷದ ಹಿರಿಯ ನೇತಾರರು ಪಕ್ಷದ ಧ್ವಜಾರೋಹಣ ಮಾಡಿ ಕಾರ್ಯಕರ್ತರ ಬಿಡುವಿಲ್ಲದ ದುಡಿಮೆಯನ್ನು ಶ್ಲಾಘಿಸಿದ್ದಾರೆ.

ಭೂ ವಿವಾದದಲ್ಲಿ ನೊಬೆಲ್​ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್; ಬೆಂಬಲಕ್ಕೆ ನಿಂತ ಮಮತಾ ಬ್ಯಾನರ್ಜಿಗೆ ಕೃತಜ್ಞತೆ