ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ ಸುವೇಂದು ಅಧಿಕಾರಿಯ ಕಿರಿಯ ಸಹೋದರ ಸೌಮೇಂದು
ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂಥಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ಸೌಮೇಂದು ಅಧಿಕಾರಿಯನ್ನು ಟಿಎಂಸಿ ಹುದ್ದೆಯಿಂದ ತೆಗೆದು ಹಾಕಿದ ಬೆನ್ನಲ್ಲೇ ಅವರು ಬಿಜೆಪಿ ಸೇರಿದ್ದಾರೆ.
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಂಗಾಳದ ಮಾಜಿ ಸಚಿವ ಸುವೇಂದು ಅಧಿಕಾರಿಯ ಕಿರಿಯ ಸಹೋದರ ಶುಕ್ರವಾರ ಟಿಎಂಸಿಯಿಂದ ಬಿಜೆಪಿ ಸೇರಿದ್ದಾರೆ.
ಪೂರ್ವ ಮಿಡ್ನಾಪುರ್ ಜಿಲ್ಲೆಯ ಕಾಂಥಿ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ಸೌಮೇಂದು ಅಧಿಕಾರಿಯನ್ನು ಕಳೆದ ವಾರ ಟಿಎಂಸಿ ಪ್ರಸ್ತುತ ಹುದ್ದೆಯಿಂದ ತೆಗೆದು ಹಾಕಿತ್ತು. ಶುಕ್ರವಾರ ಸುಮಾರು 12 ಮಂದಿ ತೃಣಮೂಲ ಕೌನ್ಸಿಲರ್ಗಳ ಜತೆ ಸೌಮೇಂದು ಬಿಜೆಪಿ ಸೇರಿದ್ದಾರೆ. ಅಧಿಕಾರಿ ಕುಟುಂಬದಲ್ಲಿ ಸುವೇಂದು ಅಧಿಕಾರಿ ಅವರ ಅಪ್ಪ ಸಿಸಿರ್ ಮತ್ತು ಸಹೋದರ ದಿಬ್ಯೇಂದು ಟಿಎಂಸಿ ಸಂಸದರಾಗಿದ್ದಾರೆ.
ಕಮಲ ನಮ್ಮ ಮನೆಯಲ್ಲಿ ಮಾತ್ರ ಅರಳುವುದಿಲ್ಲ ಕೊಲ್ಕತ್ತಾದ ಹರೀಶ್ ಮುಖರ್ಜಿ ಮತ್ತು ಹರೀಶ್ ಚಟರ್ಜಿ ರಸ್ತೆಗಳಲ್ಲಿಯೂ ಅರಳುತ್ತದೆ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸುವೇಂದು ಅಧಿಕಾರಿಯನ್ನು ಲೇವಡಿ ಮಾಡಿದಕ್ಕೆ ಸುವೇಂದು ಈ ರೀತಿ ಟಾಂಗ್ ನೀಡಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಮನೆ ಹರೀಶ್ ಮುಖರ್ಜಿ ರಸ್ತೆಯಲ್ಲಿದ್ದು ಸಿಎಂ ಮಮತಾ ಬ್ಯಾನರ್ಜಿಯವರ ನಿವಾಸ ಹರೀಶ್ ಚಟರ್ಜಿ ರಸ್ತೆಯಲ್ಲಿದೆ. ಎಲ್ಲರ ಮನೆಯಲ್ಲಿಯೂ ಕಮಲ ಅರಳುತ್ತದೆ ಎಂದು ಹೇಳುವ ಮೂಲಕ ಸೌಮೇಂದು ಬಿಜೆಪಿಗೆ ಸೇರುವ ಸೂಚನೆ ನೀಡಿದ್ದರು.
ಕಾಂಥಿ ಯಾರ ಕುಟುಂಬದ ಆಸ್ತಿಯೂ ಅಲ್ಲ: ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಕಿಡಿ