ಲೂಯಿಸ್ ವಿಟಾನ್ ಬ್ಯಾಗ್ ವಿವಾದ; ಜೋಲಾ ಲೇಕೆ ಆಯೇ ಥೇ ಎಂದು ಫೋಟೊ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ
Louis Vuitton bag ತನ್ನ ಬ್ಯಾಗ್ ಬಗ್ಗೆ ಟ್ವೀಟಿಗರು ಟ್ವೀಟ್ ದಾಳಿ ನಡೆಸುತ್ತಿದ್ದಂತೆ ಮೊಯಿತ್ರಾ, ವಿವಿಧ ಸಂದರ್ಭಗಳಲ್ಲಿ ಆಕೆ ಸಂಸತ್ ನಲ್ಲಿ ಅದೇ ಲೂಯಿಸ್ ವಿಟ್ಟಾನ್ ಬ್ಯಾಗ್ ತೆಗೆದುಕೊಂಡು ಬಂದಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ
ಸಂಸತ್ನಲ್ಲಿ ಸೋಮವಾರ ಬೆಲೆ ಏರಿಕೆ (price rise) ಚರ್ಚೆ ನಡೆಯುತ್ತಿದ್ದಾಗ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ತಮ್ಮ ಬಳಿ ಇದ್ದ ದುಬಾರಿ ಬೆಲೆಯ ಲೂಯಿಸ್ ವಿಟಾನ್ ಬ್ಯಾಗ್ (Louis Vuitton bag)ಅಡಗಿಸುತ್ತಿರುವುದು ಎಂಬ ವಿಡಿಯೊ ವೈರಲ್ ಆಗಿದೆ. ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಕಕೋಲಿ ಘೋಷ್ ದಸ್ತಿದಾರ್ ಮಾತನಾಡುತ್ತಿರುವಾಗ ಪಕ್ಕದಲ್ಲೇ ಮೊಯಿತ್ರಾ ಕುಳಿತಿರುವುದು ಕಾಣುತ್ತದೆ. ದಸ್ತಿದಾರ್ ಮೆಹಂಗಾಯಿ (ಬೆಲೆ ಏರಿಕೆ) ಎಂದು ಹೇಳುತ್ತಿದ್ದಾಗ ಮೊಯಿತ್ರಾ ತಮ್ಮ ಬಳಿ ಇದ್ದ ಬ್ಯಾಗ್ನ್ನು ನೆಲದಲ್ಲಿ ಇರಿಸುವಂತೆ ಕಾಣುತ್ತದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೊಯಿತ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ. ಬಿಜೆಪಿ ವಕ್ತಾರೆ ಶೈನಾ ನಾನ ಚುದಸಮ ಅಕಾ ಶೈನಾ ಎನ್ ಸಿ ಮಹುವಾ ಮೊಯಿತ್ರಾ ಅವರ ಲಕ್ಷ ರುಪಾಯಿ ಬೆಲೆ ಬಾಳುವ ಬ್ರಾಂಡೆಡ್ ಬ್ಯಾಗ್ ಬಗ್ಗೆ ಟೀಕಾಪ್ರಹಾರ ಮಾಡಿದ್ದು, ಔರ್ ಕಿತ್ನೇ ಅಚ್ಚೇ ದಿನ್ ಚಾಹಿಯೇ? ( ಇನ್ನೆಷ್ಟು ಒಳ್ಳೆಯ ದಿನ ಬೇಕು?) ಎಂದು ಕೇಳಿದ್ದಾರೆ.
ಮಹುವಾ ಮೊಯಿತ್ರಾ ಪ್ರತಿಕ್ರಿಯೆ ತನ್ನ ಬ್ಯಾಗ್ ಬಗ್ಗೆ ಟ್ವೀಟಿಗರು ಟ್ವೀಟ್ ದಾಳಿ ನಡೆಸುತ್ತಿದ್ದಂತೆ ಮೊಯಿತ್ರಾ, ವಿವಿಧ ಸಂದರ್ಭಗಳಲ್ಲಿ ಆಕೆ ಸಂಸತ್ ನಲ್ಲಿ ಅದೇ ಲೂಯಿಸ್ ವಿಟ್ಟಾನ್ ಬ್ಯಾಗ್ ತೆಗೆದುಕೊಂಡು ಬಂದಿರುವ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ. 2019ರಿಂದ ಜೋಲೇವಾಲಾ ಫಕೀರ್. ಜೋಲಾ ಲೇಕೆ ಆಯೇ ಥೇ, ಜೋಲಾ ಲೇಕೆ ಚಲ್ ಪಡೇಂಗೇ (2019ರಿಂದ ಜೋಳಿಗೆ ಹಾಕಿದ ಫಕೀರ, ಜೋಳಿಗೆ ಹಾಕಿ ಕೊಂಡು ಬಂದಿದ್ದೆ, ಜೋಳಿಗೆ ಹಾಕಿಯೇ ಹೋಗುವೆ) ಎಂದು ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ.
Jholewala fakir in Parliament since 2019.
Jhola leke aye the… jhola leke chal padenge… pic.twitter.com/2YOWst8j98
— Mahua Moitra (@MahuaMoitra) August 2, 2022
2016 ಡಿಸೆಂಬರ್ 3ರಂದು ಉತ್ತರಪ್ರದೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಹಮ್ ಫಕೀರ್ ಆದ್ಮಿ ಹೈ, ಜೋಲಾ ಲೇಕೆ ಚಲ್ ಪಡೇಂಗೇ ಎಂದು ಹೇಳಿದ್ದರು. ಮೊಯಿತ್ರಾ ಮೋದಿಯವರ ಅದೇ ಡೈಲಾಗ್ನ್ನು ಇಲ್ಲಿ ಹೇಳಿ ಟ್ರೋಲಿಗರಿಗೆ ಪ್ರತಿಕ್ರಿಯಿಸಿದ್ದಾರೆ.
ಮಹುವಾ ಮೊಯಿತ್ರಾ ಅದೇ ಬ್ಯಾಗ್ನ್ನು ಸಂಸತ್ಗೆ ಬರುವಾಗ ತರುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಟಿಎಂಸಿ ಸಂಸದೆಯನ್ನು ಬೆಂಬಲಿಸಿದ್ದಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೂಡಾ ಮಹುವಾ ಮೊಯಿತ್ರಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದೆ ಈ ಹಿಂದೆ ಕಾರ್ಪೊರೇಟ್ ವೃತ್ತಿಜೀವನವನ್ನು ಹೊಂದಿದ್ದರು. ಅವರು ತಮ್ಮ ಸ್ವಂತ ದುಡಿಮೆಯ ಹಣದಿಂದ ಬ್ರಾಂಡ್ ವಸ್ತುಗಳನ್ನು ಖರೀದಿಸಿದರು. ಸ್ವತಂತ್ರ ದನಿ ಹೊಂದಿರುವ ಮಹಿಳೆಯನ್ನು ಅಪಖ್ಯಾತಿಗೊಳಿಸಲು #Poopindia ಅವರ ಮತ್ತೊಂದು ಕಲ್ಪನಾರಹಿತ ಪ್ರಯತ್ನ. ಮಹುವಾ ಮೊಯಿತ್ರಾ ತಮ್ಮ ಬ್ರಾಂಡೆಂಡ್ ಬ್ಯಾಗ್ನ್ನು ಅಡಗಿಸಲು ಯಾವತ್ತೂ ಪ್ರಯತ್ನಿಸಿಲ್ಲ. ಆಕೆ ಕಾರ್ಪೊರೇಟ್ ವೃತ್ತಿ ಜೀವನ ಹೊಂದಿದ್ದವರು. ತಮ್ಮ ಸಂಪಾದನೆಯಿಂದಲೇ ಅವರು ಬ್ರಾಂಡೆಂಡ್ ವಸ್ತು ಖರೀದಿಸಿದ್ದಾರೆ. ಓಹ್ , ಎಷ್ಟು ವಿವಾದಾತ್ಮಕ ಅಲ್ವಾ ಎಂದು ಸ್ವರಾ ಟ್ವೀಟ್ ಮಾಡಿದ್ದಾರೆ.
Published On - 7:56 pm, Tue, 2 August 22