ಅಮಿತ್ ಶಾರನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ; ಎನ್‌ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸಲು ಮನವಿ

ಕೇರಳದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಕರ್ನಾಟಕದಲ್ಲಿನ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋರ ಅಪರಾಧಗಳನ್ನು ಎಸಗಲು ಮಂಗಳೂರಿನಂತಹ ಪ್ರದೇಶಗಳಿಗೆ ಹೇಗೆ ನುಗ್ಗಿವೆ ಎಂಬುದರ ಬಗ್ಗೆ ಶೋಭಾ ಅಮಿತ್ ಶಾರಿಗೆ ವಿವರಿಸಿದ್ದಾರೆ.

ಅಮಿತ್ ಶಾರನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ; ಎನ್‌ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸಲು ಮನವಿ
ಅಮಿತ್ ಶಾ- ಶೋಭಾ ಕರಂದ್ಲಾಜೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 02, 2022 | 6:59 PM

ದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru murder case) ತನಿಖೆಯನ್ನು ಎನ್‌ಐಎಗೆ (NIA) ಒಪ್ಪಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರನ್ನು ಭೇಟಿಯಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ  ಕರಂದ್ಲಾಜೆ ಧನ್ಯವಾದ ಅರ್ಪಿಸಿದ್ದಾರೆ. ಇದಕ್ಕಿಂತ ಮುಂಚೆ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕರಂದ್ಲಾಜೆ ಅವರು ಶಾ ಅವರಿಗೆ ಪತ್ರ ಬರೆದಿದ್ದರು. ಅಮಿತ್ ಶಾ ಅವರನ್ನು ಭೇಟಿಯಾದ ಶೋಭಾ ಕೇರಳದ ಗಡಿಭಾಗ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಿದ್ರೋಹಿ  ಚಟುವಟಿಕೆಗಳ ಬಗ್ಗೆ ತಿಳಿಸಿದ್ದಾರೆ . ಕೇರಳದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳು ಕರ್ನಾಟಕದಲ್ಲಿನ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋರ ಅಪರಾಧಗಳನ್ನು ಎಸಗಲು ಮಂಗಳೂರಿನಂತಹ ಪ್ರದೇಶಗಳಿಗೆ ಹೇಗೆ ನುಗ್ಗಿವೆ ಎಂಬುದರ ಬಗ್ಗೆ ಶೋಭಾ ಅಮಿತ್ ಶಾರಿಗೆ ವಿವರಿಸಿದ್ದಾರೆ.

ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಗಟ್ಟಲು ಮತ್ತು ಮಂಗಳೂರಿನಲ್ಲಿ ತ್ವರಿತ ತನಿಖೆಯ ಮೇಲೆ ನಿಗಾ ಇಡಲು ಎನ್‌ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸಲು ಶೋಭಾ ಅಮಿತ್ ಶಾಗೆ ಮನವಿ ಮಾಡಿದರು. ಕೇರಳದ ಸಮೀಪದಲ್ಲಿರುವ ಮಂಗಳೂರು ಇಸ್ಲಾಮಿಸ್ಟ್ ಗಳ ನೆಲವಾಗಿ ಮಾರ್ಪಾಡಾಗತ್ತಿದೆ . ಈ ಹಿಂದೆ ಭದ್ರತಾ ಏಜೆನ್ಸಿಗಳು ಮಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಸಂಘಟನೆಗಳನ್ನು ಬಿಚ್ಚಿಟ್ಟಿದ್ದವು. ಬೆಂಗಳೂರಿಗೆ ಎನ್ಐಎ ಕಚೇರಿ ವಿಸ್ತರಣೆ ಮಂಗಳೂರಿನಲ್ಲಿ ಜಿಹಾದಿಗಳನ್ನು ಮೊಳಕೆಯಲ್ಲೇ ಚಿವುಟಲು ಸಹಾಯ ಮಾಡುತ್ತದೆ.

Published On - 6:27 pm, Tue, 2 August 22