ಭಾರತದ ಕಾನೂನಿನ ದೃಷ್ಟಿಯಲ್ಲಿ ನನ್ನದು ಮದುವೆ ಅಲ್ಲವೇ ಅಲ್ಲ, ವಿಚ್ಛೇದನ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ: ನುಸ್ರತ್ ಜಹಾನ್

| Updated By: Digi Tech Desk

Updated on: Jun 10, 2021 | 4:32 PM

2019 ಸಾರ್ವತ್ರಿಕ ಚುನಾವಣೆಯಲ್ಲಿ ಬಸೀರತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಕೆಲವೇ ದಿನಗಳ ನಂತರ ನಸ್ರತ್ ಅವರು ನಿಖಿಲ್​ ಜೈನ್​ ಅವರನ್ನು ಟರ್ಕಿಯ ಬೋದ್ರಮ್​ ಎಂಬ ಸ್ಥಳದಲ್ಲಿ ಮದುವೆಯಾದರು ಎಂದು ವರದಿಯಾಗಿತ್ತು

ಭಾರತದ ಕಾನೂನಿನ ದೃಷ್ಟಿಯಲ್ಲಿ ನನ್ನದು ಮದುವೆ ಅಲ್ಲವೇ ಅಲ್ಲ, ವಿಚ್ಛೇದನ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ: ನುಸ್ರತ್ ಜಹಾನ್
ನಿಖಿಲ್​ ಜೈನ್​ರೊಂದಿಗೆ ನುಸ್ರತ್ ಜಹಾನ್
Follow us on

ಪತಿಯಿಂದ ಬೇರೆಯಾಗಿರುವ ಕುರಿತು ಬುಧವಾರ ಹೇಳಿಕೆಯೊಂದನ್ನು ನೀಡಿರುವ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ನುಸ್ರತ್ ಜಹಾನ್ ಅವರು ನಿಖಿಲ್ ಜೈನ್​ರೊಂದಿಗೆ ತನ್ನ ವಿವಾಹವು ಭಾರತದ ಕಾನೂನು ವ್ಯವಸ್ಥೆ ಅಡಿಯಲ್ಲಿ ಯಾವತ್ತೂ ಮಾನ್ಯವಾಗಿರದ ಕಾರಣ ವಿಚ್ಛೇದನ ಪಡೆಯುವ ಅಗತ್ಯ ಸೃಷ್ಟಿಯಾಗದು ಅಂತ ಹೇಳಿದ್ದಾರೆ. ತಮ್ಮ ಮದುವೆ ಅಂತರ್-ಧರ್ಮೀಯ ಮತ್ತು ಟರ್ಕಿ ದೇಶದ ಮದುವೆ ನಿಯಮಗಳ ಪ್ರಕಾರ ಆ ದೇಶದಲ್ಲಿ ನಡೆದಿದ್ದ ಕಾರಣ ಭಾರತದ ವಿಶೇಷ ಮದುವೆ ಕಾಯ್ದೆ ಅಡಿಯಲ್ಲಿ ಅದು ಅಮಾನ್ಯವಾಗುತ್ತದೆ ಎಂದು ಆಕೆ ಹೇಳಿದ್ದಾರೆ.

‘ಕಾನೂನಿನ ನ್ಯಾಯಾಲಯದ ಪ್ರಕಾರ ನಮ್ಮದು ಮದುವೆ ಆಗಿರದೆ, ಲಿವ್​-ಇನ್ ಸಂಬಂಧದ ಹಾಗೆ ಒಂದು ಸಂಬಂಧ ಮಾತ್ರ ಆಗಿತ್ತು. ಹಾಗಾಗಿ ವಿಚ್ಛೇದನ ಪಡೆಯುವ ಪ್ರಶ್ನೆಯೇ ಉದ್ಭವಿಸುವವುದಿಲ್ಲ. ನಾವಿಬ್ಬರು ಬೇರ್ಪಟ್ಟು ಬಹಳ ವರ್ಷಗಳಾಗಿವೆ. ಆದರೆ ನನ್ನ ಖಾಸಗಿ ಬದುಕಿನ ವಿಷಯಗಳನ್ನು ಕೇವಲ ನನ್ನಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲು ನಾನು ಬಯಸುವದರಿಂದ ಅದರ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಮದುವೆ ಕಾನೂನುಬದ್ಧ, ಅಂಗೀಕೃತ ಮತ್ತು ಸಮರ್ಥನೀಯ ಅಲ್ಲ. ಹಾಗಾಗಿ ಇದು ಕಾನೂನಿನ ದೃಷ್ಟಿಯಲ್ಲಿ ಮದುವೆ ಅಲ್ಲವೇ ಅಲ್ಲ, ಎಂದು ತಾವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನುಸ್ರತ್ ಹೇಳಿದ್ದಾರೆ.

2019 ಸಾರ್ವತ್ರಿಕ ಚುನಾವಣೆಯಲ್ಲಿ ಬಸೀರತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಕೆಲವೇ ದಿನಗಳ ನಂತರ ನಸ್ರತ್ ಅವರು ನಿಖಿಲ್​ ಜೈನ್​ ಅವರನ್ನು ಟರ್ಕಿಯ ಬೋದ್ರಮ್​ ಎಂಬ ಸ್ಥಳದಲ್ಲಿ ಮದುವೆಯಾದರು ಎಂದು ವರದಿಯಾಗಿತ್ತು. ರಾಜಕೀಯಕ್ಕೆ ಧುಮುಕುವ ಮೊದಲು ಆಕೆ ಬಂಗಾಳೀ ಸಿನಿಮಾ ರಂಗದಲ್ಲಿ ಸುಪ್ರಸಿದ್ಧ ನಟಿಯಾಗಿದ್ದರು.

ತಮ್ಮ ಹೇಳಿಕೆಯಲ್ಲಿ ಯಾರದೇ ಹೆಸರನ್ನು ಉಲ್ಲೇಖಿಸದೆ, ‘ತನ್ನನ್ನು ತಾನು ಶ್ರೀಮಂತನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ’ ತನ್ನ ಬ್ಯಾಂಕ್ ಖಾತೆಯಿಂದ ಹಣ ತೆಗೆಯುತ್ತಿದ್ದಾನೆ ಎಂದು ಹೇಳಿದ್ದಾರೆ. ‘ ಈ ವಿಷಯವನ್ನು ನಾನು ಈಗಾಗಲೇ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಮತ್ತು ಇಷ್ಟರಲ್ಲೇ ಪೊಲೀಸ ಕಂಪ್ಲೇಂಟ್​ ಸಹ ಸಲ್ಲಿಸಲಿದ್ದೇನೆ. ಇದಕ್ಕೆ ಮೊದಲು ನನ್ನ ಕುಟುಂಬದ ಎಲ್ಲ ಬ್ಯಾಂಕ್​ ಖಾತೆಗಳ ವಿವರಗಳನ್ನ ಅವನಿಗೆ ನೀಡಲಾಗಿತ್ತು ಮತ್ತು ಅವನ ಮನವಿಯ ಮೇರೆಗೆ ಈ ಖಾತೆಗಳಿಗೆ ಕುರಿತಂತೆ ಏನು ನಡೆಯತ್ತಿದೆ ಎನ್ನುವದನ್ನು ನನಗಾಗಲೀ ಆಥವಾ ನನ್ನ ಕುಟುಂಬದ ಯಾವುದೇ ಸದಸ್ಯನ ಗಮನಕ್ಕಾಗಲೀ ಬಾರದಂತೆ ನೋಡಿಕೊಳ್ಳಲಾಗಿತ್ತು. ನನ್ನ ಗೊತ್ತಾಗದ ಹಾಗೆ ಮತ್ತು ನನ್ನ ಸಮ್ಮತಿಯಿಲ್ಲದೆ ಅವನು ನನ್ನ ಬೇರೆ ಬೇರೆ ಖಾತೆಗಳಿಂದ ಹಣ ದುರುಪಯೋಗ ಪಡಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್​ನವರೊಂದಿಗೆ ನನ್ನ ಹೋರಾಟ ಜಾರಿಯಲ್ಲಿದೆ ಮತ್ತು ಅಗತ್ಯ ಬಿದ್ದರೆ ಇದರ ಪುರಾವೆ ಬಿಡುಗಡೆ ಮಾಡಲು ನಾನು ಸಿದ್ಧಳಿದ್ದೇನೆ,’ ಎಂದು ಆಕೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಒಡವೆ ಮತ್ತು ಆಭರಣಗಳನ್ನು ಸಹ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಆಕೆ ಹೇಳಿದ್ದಾರೆ.
ಕಠಿಣ ಪರಿಶ್ರಮದ ಮೂಲಕ ತಾನು ಬದುಕು ಕಟ್ಟಿಕೊಂಡಿರುವುದಾಗಿ ಹೇಳಿರುವ ನುಸ್ರತ್, ತಮ್ಮ ಖ್ಯಾತಿಯನ್ನು ಯಾವತ್ತೂ ಬೇರೆಯವರು ಹಂಚಿಕೊಳ್ಳಲು ಬಿಡಲಾರೆ ಎಂದು ಹೇಳಿದ್ದಾರೆ.

‘ನನ್ನ ವೈಯಕ್ತಿ ಬದುಕಿನ ಬಗ್ಗೆಯಾಗಲೀ ಅಥವಾ ನನಗೆ ಸಂಬಂಧಪಡದಿರುವವರ ಬಗ್ಗೆಯಾಗಲೀ ನಾನು ಯಾವತ್ತೂ ಮಾತಾಡುವುದಿಲ್ಲ. ಹಾಗಾಗಿ ತಮ್ಮನ್ನು ತಾವು ‘ನಾರ್ಮಲ್ ಜನ’ ಅಂತ ಕರೆದುಕೊಳ್ಳುವವರು ತಮಗೆ ಸಂಬಂಧಪಡದ ಯಾವುದೆ ವಿಷಯದಲ್ಲಿ ಮೂಗು ತೂರಿಸಬಾರದು,’ ಎಂದು ಆಕೆ ಹೇಳಿದ್ದಾರೆ.

ಬಹಳ ಸಮಯದವರಗೆ ತನ್ನ ಬದುಕಿನ ಭಾಗವಾಗಿದ್ದ ಒಬ್ಬ ಅಸಮರ್ಥ ವ್ಯಕ್ತಿಯ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕು ಎಂದು ಸಹ ನುಸ್ರತ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಸ್ಥಾನದಿಂದ ಆಲಾಪನ್ ಬಂದೋಪಧ್ಯಾಯ್ ನಿವೃತ್ತಿ; ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರರಾಗಿ ನೇಮಕ

Published On - 10:07 pm, Wed, 9 June 21