ಮುಂಬೈನಲ್ಲಿ 4 ಮಹಡಿ ಕಟ್ಟಡ ಕುಸಿತ, 11 ಜನರ ಸಾವು
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರನ್ನು ರಕ್ಷಿಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಜನರು ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಜನರನ್ನು ರಕ್ಷಿಸಲು ತಂಡಗಳು ಸಜ್ಜಾಗಿದ್ದು ರಕ್ಷಣಾ ಕಾರ್ಯದಲ್ಲಿ ಮುಳುಗಿದ್ದಾರೆ." ಎಂದು ಜೋನ್ 11, ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಶಾಲ್ ಠಾಕೂರ್ ಹೇಳಿದರು.
ಮುಂಬೈ: ಪಶ್ಚಿಮ ಮುಂಬೈನ ಮಲಾಡ್‌ನಲ್ಲಿ ನ್ಯೂ ಕಲೆಕ್ಟರ್ ಕಾಂಪೌಂಡ್ನಲ್ಲಿ ಬುಧವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. 4 ಮಹಡಿ ಕಟ್ಟಡ ಕುಸಿದು ಸುಮಾರು 11 ಜನ ಮೃತಪಟ್ಟಿದ್ದಾರೆ. ಹಾಗೂ 18 ಮಂದಿಗೆ ಗಾಯಗಳಾಗಿವೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ತಿಳಿಸಿದೆ.
ಬಿಎಂಸಿಯ ಪ್ರಕಾರ, ಹತ್ತಿರದ ಕಟ್ಟದ ನಿರ್ಮಾಣ ರಚನೆಯಿಂದಾಗಿ ಈ ಕಟ್ಟಡ ಕುಸಿದಿದೆ. ಹಾಗೂ ಸದ್ಯ ಈಗ ಅಪಾಯಯದ ಸ್ಥಿತಿ ಹೆಚ್ಚಿದೆ. ಈಗ ಬಿದ್ದಿರುವ ಕಟ್ಟಡದಿಂದಾಗಿ ಮತ್ತೊಂದು ಕಟ್ಟಡ ಕೂಡ ಬೀಳುವ ಪರಿಸ್ಥಿತಿಯಲ್ಲಿದೆ ಎಂದು ಪುರಸಭೆ ತಿಳಿಸಿದೆ. ಸದ್ಯ ಈಗ ಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿದವರಿಗಾಗಿ ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಬಿಡಿಬಿಎ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
#Maharashtra | A house collapsed in Malad West area of Mumbai at around 11 pm. Five people have been rescued safely. No injury reported so far. Rescue operation is underway: Brihanmumbai Municipal Corporation (BMC)
— ANI (@ANI) June 9, 2021
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರನ್ನು ರಕ್ಷಿಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಜನರು ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಜನರನ್ನು ರಕ್ಷಿಸಲು ತಂಡಗಳು ಸಜ್ಜಾಗಿದ್ದು ರಕ್ಷಣಾ ಕಾರ್ಯದಲ್ಲಿ ಮುಳುಗಿದ್ದಾರೆ.” ಎಂದು ಜೋನ್ 11, ಮುಂಬೈನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಶಾಲ್ ಠಾಕೂರ್ ಹೇಳಿದರು.
ಘಟನಾ ಸ್ಥಳಕ್ಕೆ ತಲುಪಿರುವ ಮಹಾರಾಷ್ಟ್ರ ಸಚಿವ ಅಸ್ಲಾಮ್ ಶೇಖ್, “ಮಳೆಯಿಂದಾಗಿ ಕಟ್ಟಡಗಳು ಕುಸಿದಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ಜನರು ಇದ್ದಾರೆಯೇ ಎಂದು ನೋಡಿ ಕಟ್ಟಡಗಳ ಅವಶೇಷಗಳನ್ನು ತೆಗೆದು ಜನರನ್ನು ರಕ್ಷಿಸಲಾಗುತ್ತಿದೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸ್ಥಳದಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.
“ರಾತ್ರಿ 10:15 ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳು ನಮ್ಮನ್ನು ಕಟ್ಟಡದಿಂದ ಹೊರಹೋಗುವಂತೆ ಹೇಳಿದ ನಂತರ ನಾನು ಹೊರಬಂದೆ. ನಾನು ಹೊರಗೆ ಓಡುತ್ತಿರುವಾಗ, ನಮ್ಮ ಕಟ್ಟಡದ ಬಳಿ ಡೈರಿ ಸೇರಿದಂತೆ ಮೂರು ಕಟ್ಟಡಗಳು ನೆಲಸಮಗೊಂಡಿರುವುದನ್ನು ನಾನು ನೋಡಿದೆ” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ದೇಗುಲಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆ ತಡೆಹಿಡಿಯಲು ಕೋಟ ಶ್ರೀನಿವಾಸ ಪೂಜಾರಿ ಆದೇಶ
Published On - 6:48 am, Thu, 10 June 21