ಬಾತ್​ರೂಂನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಂಡ ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್, ಆಸ್ಪತ್ರೆಗೆ ದಾಖಲು

|

Updated on: Jul 04, 2024 | 10:04 AM

ತೃಣಮೂಲ ಕಾಂಗ್ರೆಸ್​ನ ಹಿರಿಯ ನಾಯಕ ಮುಕುಲ್ ರಾಯ್​ ಬಾತ್​ ರೂಂನಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಜ್ಞೆ ಕಳೆದುಕೊಳ್ಳುವ ಮುನ್ನ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಬಾತ್​ರೂಂನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಂಡ ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್, ಆಸ್ಪತ್ರೆಗೆ ದಾಖಲು
ಮುಕುಲ್ ರಾಯ್
Follow us on

ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಮುಕುಲ್ ರಾಯ್(Mukul Roy) ತಮ್ಮ ಮನೆಯ ಬಾತ್​ರೂಂನಲ್ಲಿ ಜಾರಿ ಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರ ಪುತ್ರ ಸುಭ್ರಾಂಗು ರಾಯ್ ಈ ಕುರಿತು ಮಾಹಿತಿ ನೀಡಿದ್ದಾರೆ, ಬುಧವಾರ ಸಂಜೆ ಬಾತ್ ರೂಂನಲ್ಲಿ ಜಾರಿ ಬಿದ್ದು ಮುಕುಲ್ ರಾಯ್ ಅವರ ತಲೆಗೆ ಗಾಯವಾಗಿತ್ತು. ಆರೋಗ್ಯ ಸ್ಥಿರವಾಗಿದೆ ಅವರ ಮೇಲ್ವಿಚಾರಣೆಗೆ ವೈದ್ಯರ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.

ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 70 ವರ್ಷದ ನಾಯಕ ಪ್ರಜ್ಞೆ ತಪ್ಪುವ ಮುನ್ನ ವಾಂತಿ ಕೂಡ ಮಾಡಿಕೊಂಡಿದ್ದರು. ಅವರು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದು, ತೃಣಮೂಲ ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಅವರು 2017 ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರ ಉತ್ತರ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ನಂತರ ಅವರು ತೃಣಮೂಲ ಕಾಂಗ್ರೆಸ್‌ಗೆ ಮರಳಿದರು.

ಅವರಿಗೆ ಏನಾಗಿದೆ ಎಂಬುದು ವರದಿ ಬಂದ ಬಳಿಕ ತಿಳಿಯುತ್ತದೆ ಅದಾದ ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ವೈದ್ಯರು ಹೇಳಬಹುದು ಎಂದು ಪುತ್ರ ಹೇಳಿದ್ದಾರೆ. ಇದಕ್ಕೂ ಮುನ್ನ ಕಳೆದ ಏಪ್ರಿಲ್ ನಲ್ಲೂ ಮುಕುಲ್ ರೈ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಮತ್ತಷ್ಟು ಓದಿ: ಸಂಜೆ 4 ಗಂಟೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಏನಾಗುತ್ತೆ, ಏನಾದರೂ ಕಾಯಿಲೆ ಇದೆಯೇ?

ಇದಕ್ಕೂ ಮೊದಲು ಕಳೆದ ವರ್ಷ ಫೆಬ್ರವರಿ 2023 ರಲ್ಲಿ, ಅವರು ಅನಾರೋಗ್ಯಕ್ಕೆ ಒಳಗಾದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಮುಕುಲ್‌ನ ಆಪ್ತರು ಆತನ ತಲೆಯ ಮೇಲೆ ನೀರು ಸಂಗ್ರಹವಾಗಿದೆ ಮತ್ತು ಈ ಕಾಯಿಲೆ ದೀರ್ಘಕಾಲದ ಎಂದು ಹೇಳಿದ್ದರು.

ಕಳೆದ ಫೆಬ್ರವರಿ 2024 ರಲ್ಲಿ ಇಡಿ ಮುಕುಲ್ ಅವರಿಗೆ ನೋಟಿಸ್ ಕಳುಹಿಸಿತ್ತು. ನಂತರ ಅವರನ್ನು ಬಂಗಾಳದ ಹಳೆಯ ಚಿಟ್ ಫಂಡ್ ಪ್ರಕರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಕರೆಸಲಾಯಿತು, ಆದರೆ ಅವರ ಕುಟುಂಬವು ಇಡಿಗೆ ಪತ್ರ ಬರೆದು ಮುಕುಲ್ ಅವರ ಅನಾರೋಗ್ಯದ ಬಗ್ಗೆ ತಿಳಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ