AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಎನ್​ಕೌಂಟರ್​​ನಲ್ಲಿ ಸಾವು, 26 ಸಶಸ್ತ್ರ ದಾಳಿಗಳ ರೂವಾರಿ ಈತ

ಇಂದು ಬೆಳಗಿನ ಜಾವ ಆಂಧ್ರಪ್ರದೇಶದಲ್ಲಿ ನಡೆದ ಎನ್​ಕೌಂಟರ್​(Encounter)ನಲ್ಲಿ ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈತ 26 ಸಶಸ್ತ್ರ ದಾಳಿಗಳ ರೂವಾರಿಯಾಗಿದ್ದ.ಹಿಡ್ಮಾ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಹಲವಾರು ಮಾವೋವಾದಿ ಅಡಗುತಾಣಗಳನ್ನು ಹೊಂದಿರುವ ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ತ್ರಿ-ಜಂಕ್ಷನ್ ಬಳಿ ಈ ಎನ್‌ಕೌಂಟರ್ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಎನ್​ಕೌಂಟರ್​​ನಲ್ಲಿ ಸಾವು, 26 ಸಶಸ್ತ್ರ ದಾಳಿಗಳ ರೂವಾರಿ ಈತ
ಮಾಡ್ವಿ
ನಯನಾ ರಾಜೀವ್
|

Updated on: Nov 18, 2025 | 11:25 AM

Share

ಛತ್ತೀಸ್​ಗಢ, ನವೆಂಬರ್ 18: ಇಂದು ಬೆಳಗಿನ ಜಾವ ಆಂಧ್ರಪ್ರದೇಶದಲ್ಲಿ ನಡೆದ ಎನ್​ಕೌಂಟರ್​(Encounter)ನಲ್ಲಿ ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈತ 26 ಸಶಸ್ತ್ರ ದಾಳಿಗಳ ರೂವಾರಿಯಾಗಿದ್ದ.ಹಿಡ್ಮಾ ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಹಲವಾರು ಮಾವೋವಾದಿ ಅಡಗುತಾಣಗಳನ್ನು ಹೊಂದಿರುವ ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ರಾಜ್ಯಗಳ ತ್ರಿ-ಜಂಕ್ಷನ್ ಬಳಿ ಈ ಎನ್‌ಕೌಂಟರ್ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಕನಿಷ್ಠ ಆರು ಬಂಡುಕೋರರ ಮೃತದೇಹಗಳು ಪತ್ತೆಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. 1981 ರಲ್ಲಿ ಮಧ್ಯಪ್ರದೇಶದಲ್ಲಿದ್ದ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಅನ್ನು ಮುನ್ನಡೆಸಿದ್ದ ಮತ್ತು ಸಿಪಿಐ ಮಾವೋವಾದಿಗಳ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಸದಸ್ಯ ಕೂಡ ಆಗಿದ್ದ.

ಕೇಂದ್ರ ಸಮಿತಿಯಲ್ಲಿರುವ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯನಾಗಿದ್ದ. ಹಿಡ್ಮಾನನ್ನು ಹಿಡಿದುಕೊಟ್ಟವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕಾ ಕೂಡ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಪೊಲೀಸ್ ಎನ್​​ಕೌಂಟರ್, ಸಿಗ್ಮಾ ಗ್ಯಾಂಗ್​ನ ನಾಲ್ವರು ಮೋಸ್ಟ್​ ವಾಂಟೆಡ್ ಗ್ಯಾಂಗ್​​ಸ್ಟರ್​​ಗಳ ಹತ್ಯೆ

ಮಾಡ್ವಿ 1996ರಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ಆಗ ಆತನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಹಿಡ್ಮಾನನ್ನು ಹಿದ್​ಮಾಲು ಹಾಗೂ ಸಂತೋಷ್ ಹೆಸರಿನಿಂದ ಕೂಡ ಕರೆಯಲಾಗುತ್ತಿತ್ತು. ಈತ 150ಕ್ಕೂ ಅಧಿಕ ಸೈನಿಕರನ್ನು ಕೊಂದಿದ್ದ.

2021ರ ಏಪ್ರಿಲ್ 3 ರಂದು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಸೈನ್ಯದ ಬೆಟಾಲಿಯನ್ ನಂ. 1 ರ ಕಮಾಂಡರ್ ಹಿಡ್ಮಾನನ್ನು ಬಂಧಿಸಲು ಭದ್ರತಾ ಪಡೆಗಳು ಹೊರಟಿದ್ದವು ಆದರೆ ನಕ್ಸಲರು ಸೈನಿಕರ ಮೇಲೆ ದಾಳಿ ಮಾಡಿದ್ದರು, ಇದರ ಪರಿಣಾಮವಾಗಿ ನಂತರದ ಎನ್‌ಕೌಂಟರ್‌ನಲ್ಲಿ 22 ಸೈನಿಕರು ಸಾವನ್ನಪ್ಪಿದ್ದರು.

ಏತನ್ಮಧ್ಯೆ, ಏಪ್ರಿಲ್ 2017 ರಲ್ಲಿ ಬುರ್ಕಪಾಲ್ ದಾಳಿಯಲ್ಲಿ 24 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದರು. ದಂತೇವಾಡ ದಾಳಿಯಲ್ಲಿ 76 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು. ರಾಜ್ಯ ಪೊಲೀಸರ ಪ್ರಕಾರ, ದಂತೇವಾಡ ದಾಳಿಯಲ್ಲಿ ಹಿಡ್ಮಾ ಮುಂಚೂಣಿಯಲ್ಲಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ