ತಿರುಮಲದಲ್ಲಿ ಭಕ್ತರು ಇನ್ನು ಮುಂದೆ ಇದನ್ನು ಬಳಸುವಂತಿಲ್ಲ; ಸಂಪೂರ್ಣ ನಿಷೇಧ ಹೇರಿದ TTD
Plastic ban TTD: ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಗಡಿ ಮಾಲೀಕರು ಸಹಕರಿಸಬೇಕು, ಭಕ್ತರೂ ಸಹ ಇದಕ್ಕೆ ಸಹಕಾರ ನೀಡಬೇಕು. ಬೆಟ್ಟ ಹತ್ತುವ ಮೊದಲು ಅಲಿಪಿರಿ ಬಳಿ ಕರಾರುವಕ್ಕಾದ ಚೆಕ್ಕಿಂಗ್ ನಡೆಯಲಿದೆ.
ತಿರುಪತಿ: ಜಗದ್ವಿಖ್ಯಾತ ಶ್ರೀ ವೇಂಕಟೇಶ್ವರ ಸ್ವಾಮಿ ದೇಗುಲವಿರುವ ತಿರುಮಲದಲ್ಲಿ ಭಕ್ತರು ಇನ್ನು ಮುಂದೆ ಪ್ಲಾಸ್ಟಿಕ್ ಬಳಸುವಂತಿಲ್ಲ; ಅದಕ್ಕೆ ಸಂಪೂರ್ಣ ನಿಷೇಧ ಹೇರಿ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ (Tirumala Tirupati Devasthanams -TTD) ಆದೇಶ ಹೊರಡಿಸಿದೆ. ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್ ಇಂದು ಬುಧವಾರದಿಂದಲೇ (ಜೂನ್ 1) ಜಾರಿಗೆ ಬರಲಿದೆ. ಭಕ್ತಾದಿಗಳು ಬಾಟಲ್, ಬ್ಯಾಗ್, ಕೊನೆಗೆ ಶ್ಯಾಂಪೂ ಸ್ಯಾಷೆ ಸಹ ಬಳಸುವಂತಿಲ್ಲ ಎಂದು TTD ಎಸ್ಟೇಟ್ ಆಫಿಸರ್ ಮಲ್ಲಿಕಾರ್ಜುನ ಘೋಷಿಸಿದ್ದಾರೆ.
ಪ್ಲಾಸ್ಟಿಕ್ ಸಂಪೂರ್ಣ ಬ್ಯಾನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಗಡಿ ಮಾಲೀಕರು ಸಹಕರಿಸಬೇಕು, ಭಕ್ತರೂ ಸಹ ಇದಕ್ಕೆ ಸಹಕಾರ ನೀಡಬೇಕು. ಬೆಟ್ಟ ಹತ್ತುವ ಮೊದಲು ಅಲಿಪಿರಿ ಬಳಿ (Alipiri) ಕರಾರುವಕ್ಕಾದ ಚೆಕ್ಕಿಂಗ್ ನಡೆಯಲಿದೆ. ಬಟ್ಟೆಬರೆ, ಆಟದ ಸಾಮಾನುಗಳನ್ನು ಪ್ಯಾಕ್ ಮಾಡಲು ಅಂಗಡಿಯವರು ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹೀ ಬ್ಯಾಗ್ ಬಳಸಬೇಕು ಎಂದು ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಈ ಮಧ್ಯೆ, ಕಸ ವಿಂಗಡೆಯನ್ನು (segregate garbage) ಕಡ್ಡಾಯವಾಗಿ ಪಾಲಿಸಬೇಕು. ಅದನ್ನು ಪೌರ ಕಾರ್ಮಿಕ ಸಿಬ್ಬಂದಿಗೆ ನೀಡಬೇಕು ಎಂದು ಟಿಟಿಡಿ ಆರೋಗ್ಯಾಧಿಕಾರಿ ಡಾ. ಶ್ರೀದೇವಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಪ್ರತಿ ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೂ ಸಾಮೂಹಿಕ ಸ್ವಚ್ಛತಾ ಅಭಿಯಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಇನ್ನು ಟಿಟಿಡಿ ವಿಜಿಲೆನ್ಸ್ ಅಧಿಕಾರಿ ಬಾಲಿ ರೆಡ್ಡಿ ಆರೋಗ್ಯ, ವಿಜಿಲೆನ್ಸ್ ಮತ್ತು ಎಸ್ಟೇಟ್ ಅಧಿಕಾರಿಗಳು ಕಾಲಕಾಲಕ್ಕೆ ಇನ್ಸ್ ಪೆಕ್ಷನ್ ಗಳನ್ನು ನಡೆಸುತ್ತಾರೆ. ನಿಯಮ ಉಲ್ಲಂಘಿಸಿದ ಅಂಗಡಿಗಳ ಬಾಗಿಲು ಮುಚ್ಚುತ್ತಾರೆ. ಪ್ಲಾಸ್ಟಿಕ್ ಬ್ಯಾನ್ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Also Read: ಅಯೋಧ್ಯೆ ರಾಮ ಮಂದಿರ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರ
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:07 pm, Wed, 1 June 22