ಸೂರತ್ನ ರಾಸಾಯನಿಕ ಫ್ಯಾಕ್ಟರಿ ಸಮೀಪ ಟ್ಯಾಂಕರ್‌ನಿಂದ ವಿಷಾನಿಲ ಸೋರಿಕೆ; 6 ಮಂದಿ ಸಾವು, 22 ಮಂದಿ ಅಸ್ವಸ್ಥ
ಸಚಿನ್ ಜಿಐಡಿಸಿ ಪ್ರದೇಶದಲ್ಲಿರುವ ರಾಜಕಮಲ್ ಚಿಕ್ಕಡಿ ಪ್ಲಾಟ್ ನಂ. 362 ರ ಹೊರಗೆ 10 ಮೀಟರ್ ದೂರದಲ್ಲಿ ನಿಂತಿದ್ದ ರಾಸಾಯನಿಕ ಟ್ಯಾಂಕರ್‌ನಿಂದ 10 ಮೀಟರ್ ದೂರದಲ್ಲಿ ಹಲವು ಕಾರ್ಮಿಕರು ಮಲಗಿದ್ದರು.
ಗುಜರಾತ್ನ ಸೂರತ್ನಲ್ಲಿರುವ ಕೆಮಿಕಲ್ ಕಾರ್ಖಾನೆ(Chemical Tanker)ಯೊಂದರ ಸಮೀಪ ಇಂದು ಮುಂಜಾನೆ ಅನಿಲ ಸೋರಿಕೆ(Gas Leak)ಯಾಗಿ 6 ಮಂದಿ ಮೃತಪಟ್ಟಿದ್ದು, 22ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆರ್ರಿ ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸೋರಿಕೆಯಾದ ಪರಿಣಾಮ ಈ ಅವಘಢ ಉಂಟಾಗಿದೆ ಎಂದು ಹೇಳಲಾಗಿದೆ. ಗುಜರಾತ್ನ ಸೂರತ್ನಲ್ಲಿರುವ ಕೈಗಾರಿಕಾ ಪ್ರದೇಶ ಸಚಿನ್ ಜಿಐಡಿಸಿ ಎಂಬಲ್ಲಿರುವ ಕಾರ್ಖಾನೆಯಲ್ಲಿ ದುರಂತ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕದಳದವರು ಆಗಮಿಸಿದ್ದಾರೆ. ಅಲ್ಲಿಂದ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ಅಸ್ವಸ್ಥರಾದವರನ್ನೆಲ್ಲ ಸೂರತ್ ನ್ಯೂ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಚಿನ್ ಜಿಐಡಿಸಿ ಪ್ರದೇಶದಲ್ಲಿರುವ ರಾಜಕಮಲ್ ಚಿಕ್ಕಡಿ ಪ್ಲಾಟ್ ನಂ. 362 ರ ಹೊರಗೆ 10 ಮೀಟರ್ ದೂರದಲ್ಲಿ ನಿಂತಿದ್ದ ರಾಸಾಯನಿಕ ಟ್ಯಾಂಕರ್‌ನಿಂದ 10 ಮೀಟರ್ ದೂರದಲ್ಲಿ ಹಲವು ಕಾರ್ಮಿಕರು ಮಲಗಿದ್ದರು. ಈ ಟ್ಯಾಂಕರ್ ಸೋರಿಕೆಯಾಗಿದ್ದರಿಂದ ಅಲ್ಲಿ ಮಲಗಿದ್ದವರಿಗೆಲ್ಲ ಉಸಿರುಕಟ್ಟಿದೆ. ಸದ್ಯ 8 ಮಂದಿಗೆ ವೆಂಟಿಲೇಟರ್ ಸಪೋರ್ಟ್ ಕೊಟ್ಟಿಡಲಾಗಿದೆ.