ಹೈದರಾಬಾದ್: ಮದುವೆಯ ಸಂಭ್ರಮದಲ್ಲಿ ಜನ ತುಂಬಿಕೊಂಡು ಸಾಗುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಮೂವರು ದುರ್ಮರಣ ಹೊಂದಿದ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಬಿಚ್ಕುಂದ ಮಂಡಲಂನ ಚಿನ್ನ ದೇವಾಡ ಗ್ರಾಮದಲ್ಲಿ ನಡೆದಿದೆ.
ಟ್ರಾಕ್ಟರ್ನಲ್ಲಿ ಮದುವೆಗೆ ತೆರಳುತ್ತಿದ್ದರು. ಚಾಲಕನ ಹಿಡಿತ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ. ಸ್ಥಳದಲ್ಲೇ ಮೂವರು ದುರ್ಮರಣ ಹೊಂದಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದವರಿಗೆ ವಿಷಾದದ ಛಾಯೆ ಮೂಡಿದೆ. ಟ್ರಾಕ್ಟರ್ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆ ಬದಿ ಮಗುಗೆ ಮೂತ್ರ ಮಾಡಿಸ್ತಿದ್ದ ತಾಯಿಗೆ ಟ್ರಾಕ್ಟರ್ ಡಿಕ್ಕಿ, ತಾಯಿ ದುರ್ಮರಣ