ದೆಹಲಿ: ಕರ್ತವ್ಯ ನಿರತ ಪೇದೆಯನ್ನು ಚಾಲಕನೊಬ್ಬ ತನ್ನ ಕಾರಿನ ಮೇಲೆ ದರದರನೆ ಎಳೆದುಕೊಂಡು ಹೋಗಿರುವ ಘಟನೆ ಅಕ್ಟೋಬರ್ 12ರಂದು ರಾಷ್ಟ್ರ ರಾಜಧಾನಿ ದೆಹಲಿಯ ಧೌಲಾ ಕ್ವಾನ್ನಲ್ಲಿ ನಡೆದಿದೆ.
ಸಂಚಾರ ನಿಯಮ ಉಲ್ಲಂಘಸಿದ ಕಾರು ಚಾಲಕನನ್ನು ಸಂಚಾರಿ ಪೊಲೀಸ್ ಪೇದೆ ತಡೆಯಲು ಮುಂದಾಗಿದ್ದರು. ಈ ವೇಳೆ ಚಾಲಕ ಅಲ್ಲಿಂದ ತಪ್ಪಿಸಕೊಳ್ಳಲು ಯತ್ನಿಸುವ ವೇಳೆ ಪೇದೆಯನ್ನು ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ. ಈ ವೇಳೆ ಆಯತಪ್ಪಿ ಪೇದೆ ವಾಹನದಿಂದ ಕೆಳಗೆ ಅಪ್ಪಳಿಸಿದ್ದಾರೆ. ಅದೃಷ್ಟವಶಾತ್ ಹಿಂಬದಿಯಿಂದ ಬರುತ್ತಿದ್ದ ಇತರೆ ವಾಹನ ಸವಾರರು ತಮ್ಮ ಗಾಡಿಗಳನ್ನು ನಿಧಾನ ಗತಿಯಲ್ಲಿ ಚಲಾಯಿಸುತ್ತಿದ್ದುದ್ದರಿಂದ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಡೀ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಹನದ ಚಾಲಕ ಶುಭಂ ವಿರುದ್ಧ FIR ಸಹ ದಾಖಲಿಸಿದ್ದಾರೆ.
An FIR has been registered against the driver of the car, Shubham, at Delhi Cantt police station, South West Delhi. https://t.co/taOqRAPdOA
— ANI (@ANI) October 15, 2020