ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ಮೇಲೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿ: ಅಶ್ವಿನಿ ವೈಷ್ಣವ್
ಜಮ್ಮುವಿನ ರಿಯಾಸಿ ಜಿಲ್ಲೆಯಿಂದ ಕಾಶ್ಮೀರಕ್ಕೆ ರೈಲು ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಸಂಗಲ್ದನ್‌ನಿಂದ ರಿಯಾಸಿ(sangaldan-reasi) ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ, ಜೂ.16: ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ಮೇಲೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದೆ. ಜಮ್ಮುವಿನ ರಿಯಾಸಿ ಜಿಲ್ಲೆಯಿಂದ ಕಾಶ್ಮೀರಕ್ಕೆ ರೈಲು ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಸಂಗಲ್ದನ್‌ನಿಂದ ರಿಯಾಸಿ (sangaldan-reasi) ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ, ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ. ಇನ್ನು ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
1st trial train has successfully run from Sangaldan to Reasi, including crossing the Chenab Bridge.
All construction works for the USBRL are nearly finished, with only tunnel No.1 remaining partially incomplete. pic.twitter.com/s1AFNBYvn4
— Ashwini Vaishnaw (@AshwiniVaishnaw) June 16, 2024
ಸಂಗಲ್ದನ್‌ನಿಂದ ರಿಯಾಸಿ ನಡುವಿನ ಮೊದಲ ಪ್ರಾಯೋಗಿಕ ರೈಲು ಸಂಚಾರ ಚೆನಾಬ್ ಸೇತುವೆಯನ್ನು ದಾಟುವುದರೊಂದಿಗೆ ಯಶಸ್ವಿಯಾಗಿ ಸಂಚರಿಸಿದೆ. USBRL(Udhampur-Srinagar-Baramulla Rail link) ಗಾಗಿ ಎಲ್ಲಾ ನಿರ್ಮಾಣ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಆದರೆ, ಸುರಂಗ ಸಂಖ್ಯೆ 1 ಮಾತ್ರ ಭಾಗಶಃ ಅಪೂರ್ಣವಾಗಿ ಉಳಿದಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Amarnath Yatra: ಜೂನ್ ಅಂತ್ಯದಿಂದ ಅಮರನಾಥ ಯಾತ್ರೆ ಆರಂಭ; ಜಮ್ಮು ರೈಲು ನಿಲ್ದಾಣದಲ್ಲಿ ಭದ್ರತೆ ಹೆಚ್ಚಳ
ಕಳೆದ ತಿಂಗಳು ಉತ್ತರ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಶೋಭನ್ ಚೌಧುರಿ ಅವರು ಮೋಟಾರು ಟ್ರಾಲಿ ಮೂಲಕ ಸಂಗಲ್ದಾನ್ ನಿಲ್ದಾಣದವರೆಗಿನ ಚೆನಾಬ್ ಸೇತುವೆಯನ್ನು ಪರಿಶೀಲಿಸಿದ್ದರು. ಚೆನಾಬ್‌ನ ಮೇಲಿನ ವಿಶ್ವದ ಅತಿ ಎತ್ತರದ ರೈಲು ಸೇತುವೆ ಇದಾಗಿದ್ದು, ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿರುವ, ನದಿಪಾತ್ರದ ಮೇಲೆ 359 ಮೀಟರ್‌ಗಳಷ್ಟು ಎತ್ತರದಲ್ಲಿರುವ 1.3 ಕಿಮೀ ಉದ್ದದ ರೈಲು ಸೇತುವೆ ಇದು. ಇನ್ನು ಉಧಮ್‌ಪುರ-ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ