KMC polls ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: 132 ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿ ಕೆಎಂಸಿ ಮೇಲೆ ಹಿಡಿತ ಸಾಧಿಸಿದ ಟಿಎಂಸಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 21, 2021 | 8:05 PM

Kolkata Municipal Corporation Election Results ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಎಡರಂಗ ತಲಾ ಎರಡು, ಪಕ್ಷೇತರರು ಮೂರು ವಾರ್ಡ್‌ಗಳನ್ನು ಗೆದ್ದುಕೊಂಡರು. ಟಿಎಂಸಿಗೆ ಶೇ 72ರಷ್ಟು ಮತ, ಎಡಪಕ್ಷಗಳಿಗೆ ಶೇ 11.13, ಬಿಜೆಪಿಗೆ ಶೇ 8.94 ಮತ್ತು, ಕಾಂಗ್ರೆಸ್ ಪರ ಶೇ 4.47ಮತ ಚಲಾವಣೆ ಆಗಿದೆ.

KMC polls ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: 132 ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿ ಕೆಎಂಸಿ ಮೇಲೆ ಹಿಡಿತ ಸಾಧಿಸಿದ ಟಿಎಂಸಿ
ಟಿಎಂಸಿ ಸಂಭ್ರಮಾಚರಣೆ
Follow us on

ಕೊಲ್ಕತ್ತಾ: ಮಂಗಳವಾರ ತೃಣಮೂಲ ಕಾಂಗ್ರೆಸ್ (TMC) 144 ಸದಸ್ಯ ಬಲದ ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ(Kolkata Municipal Corporation Election) ಸುಮಾರು 72 ಶೇಕಡಾ ಮತಗಳನ್ನು ಗಳಿಸುವ ಮೂಲಕ ಹಿಡಿತ ಸಾಧಿಸಿದೆ. ಈ  ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ (Mamata Banerjee) ಪಕ್ಷ 132 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ (BJP) ಕೇವಲ ಮೂರು ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಎಡರಂಗ ತಲಾ ಎರಡು, ಪಕ್ಷೇತರರು ಮೂರು ವಾರ್ಡ್‌ಗಳನ್ನು ಗೆದ್ದುಕೊಂಡರು. ಟಿಎಂಸಿಗೆ ಶೇ 72ರಷ್ಟು ಮತ, ಎಡಪಕ್ಷಗಳಿಗೆ ಶೇ 11.13, ಬಿಜೆಪಿಗೆ ಶೇ 8.94 ಮತ್ತು, ಕಾಂಗ್ರೆಸ್ ಪರ ಶೇ 4.47ಮತ ಚಲಾವಣೆ ಆಗಿದೆ.  ದ್ವೇಷ ಮತ್ತು ಹಿಂಸಾಚಾರದ ರಾಜಕೀಯಕ್ಕೆ ಬಂಗಾಳದಲ್ಲಿ ಸ್ಥಾನವಿಲ್ಲ ಎಂದು ಕೋಲ್ಕತ್ತಾದ ಜನರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇಂತಹ ದೊಡ್ಡ ಜನಾದೇಶದೊಂದಿಗೆ ನಮಗೆ ಆಶೀರ್ವಾದ ಮಾಡಿದ್ದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳು. ನಾವು ನಿಜವಾಗಿಯೂ ವಿನಮ್ರರಾಗಿದ್ದೇವೆ ಮತ್ತು ನಿಮ್ಮ ಪ್ರಗತಿ ಕಡೆಗೆ ನಮ್ಮ ಗುರಿಗಳಿಗೆ ಯಾವಾಗಲೂ ಬದ್ಧರಾಗಿರುತ್ತೇವೆ ಎಂದು ಅಭಿಷೇಕ್ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.


ಶಾಂತಿಯುತ ಚುನಾವಣೆಯ ಭರವಸೆಯನ್ನು ಮಮತಾ ಬ್ಯಾನರ್ಜಿ ಮುರಿದಿದ್ದಾರೆ: ಅಧೀರ್ ರಂಜನ್ ಚೌಧರಿ
“ಚುನಾವಣೆ ಸಂದರ್ಭದಲ್ಲಿ ಹಲವಾರು ಹಿಂಸಾಚಾರದ ಘಟನೆಗಳು ನಡೆದಿವೆ. ಈ ರೀತಿಯ ಹಿಂಸೆಯ ಅಗತ್ಯವಿರಲಿಲ್ಲ. ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಜನರಿಗೆ ಭರವಸೆ ನೀಡಿದ್ದರು. ಆದರೆ ಅವರೇ ಅದನ್ನು ಮುರಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ) ಎಲ್ಲೂ ಇಲ್ಲ: ಮಮತಾ
ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಚುನಾವಣೆಯ ಮತಗಳ ಎಣಿಕೆಯ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಮುನ್ನಡೆ ಸಾಧಿಸುತ್ತಿದ್ದಂತೆ, ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಇದನ್ನು “ಪ್ರಚಂಡ ವಿಜಯ” ಎಂದು ಶ್ಲಾಘಿಸಿದರು. ಆಡಳಿತದಲ್ಲಿ ನಂಬಿಕೆ ಇರಿಸಿದ್ದಕ್ಕೆ ಕೊಲ್ಕತ್ತಾದ ಜನರಿಗೆ ಧನ್ಯವಾದ ಅರ್ಪಿಸಿದರು. “ಈ ಚುನಾವಣೆಯು ಪ್ರಜಾಪ್ರಭುತ್ವದ ವಿಜಯವಾಗಿದೆ, ಜನರು ನಮ್ಮ ಕೆಲಸವನ್ನು ಒಪ್ಪಿಕೊಂಡಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ)ಗಳನ್ನು ಜನರು ಸೋಲಿಸಿದ್ದಾರೆ, ಅದು ಜನಾದೇಶವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹೇಳಿದರು.

ಇದು ಕೊಲ್ಕತ್ತಾದ ಜನತೆಗೆ ಸಂದ ಜಯವಾಗಿದೆ ಏಕೆಂದರೆ ಅವರು ನಮ್ಮ ಮೇಲೆ ತಮ್ಮ ನಂಬಿಕೆಯನ್ನು ಇರಿಸಿದರು. ದೊಡ್ಡ ಗೆಲುವಿನೊಂದಿಗೆ ಹೆಚ್ಚು ಮತ್ತು ಹೆಚ್ಚಿನ ಜವಾಬ್ದಾರಿ ಬರುತ್ತದೆ. ಪಕ್ಷವು ಡಿ.23 ರಂದು ಸಭೆಯನ್ನು ಕರೆದಿದ್ದು, ಅಲ್ಲಿ ಮುಂದಿನ ಮೇಯರ್ ಅನ್ನು ನಿರ್ಧರಿಸಲಾಗುವುದು  ಎಂದು  ಕೊಲ್ಕತ್ತಾ ಮೇಯರ್ ಮತ್ತು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ಇದನ್ನೂ ಓದಿ:  Kolkata Municipal Corporation ಕೆಎಂಸಿ ಚುನಾವಣೆಯಲ್ಲಿ 17 ಸೀಟು ಗೆದ್ದ ಟಿಎಂಸಿ, 3 ವಾರ್ಡ್​​ಗಳಲ್ಲಿ ಬಿಜೆಪಿ ಮುನ್ನಡೆ

Published On - 7:50 pm, Tue, 21 December 21