Tripura civic polls ತ್ರಿಪುರಾದ 8 ಮುನ್ಸಿಪಲ್ ಕೌನ್ಸಿಲ್​​ಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಎಎಂಸಿ ಚುನಾವಣೆಯಲ್ಲಿ ಟಿಎಂಸಿಗೆ ಎರಡನೇ ಸ್ಥಾನ

ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ನ ಎಲ್ಲಾ ವಾರ್ಡ್‌ಗಳಲ್ಲಿ ತೃಣಮೂಲ ಕಾಂಗ್ರೆಸ್ (TMC) ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಆರಂಭಿಕ ಟ್ರೆಂಡ್ ಸೂಚಿಸುತ್ತವೆ. ಮಧ್ಯಾಹ್ನ 12 ಗಂಟೆಯವರೆಗಿನ ವರದಿಗಳ ಪ್ರಕಾರ ಎಎಂಸಿ ಕ್ಷೇತ್ರಗಳಲ್ಲಿ ಬಿಜೆಪಿ 58,821 ಮತಗಳನ್ನು ಪಡೆದಿದ್ದರೆ, ಟಿಎಂಸಿ 22,295 ಮತಗಳನ್ನು ಪಡೆದಿದೆ.

Tripura civic polls ತ್ರಿಪುರಾದ 8 ಮುನ್ಸಿಪಲ್ ಕೌನ್ಸಿಲ್​​ಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಎಎಂಸಿ ಚುನಾವಣೆಯಲ್ಲಿ ಟಿಎಂಸಿಗೆ ಎರಡನೇ ಸ್ಥಾನ
2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಬಹುಮತವನ್ನು ಪಡೆದಿತ್ತು. ಈ ಮೂಲಕ 10 ವರ್ಷಗಳ ನಂತರ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿತ್ತು. ಇನ್ನು 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿದೆ.
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 28, 2021 | 3:16 PM

ಅಗರ್ತಲಾ: ತ್ರಿಪುರಾ ನಾಗರಿಕ ಸಂಸ್ಥೆಗಳ ಚುನಾವಣೆಯ (Tripura civic polls)ಮತ ಎಣಿಕೆ ಮುಂದವರಿದಿದ್ದು ಮಧ್ಯಾಹ್ನದವರೆಗೆ ಲಭಿಸಿದ ಮಾಹಿತಿ ಪ್ರಕಾರ ಆಡಳಿತಾರೂಢ ಬಿಜೆಪಿ (BJP) ಎಂಟು ಮುನ್ಸಿಪಲ್ ಕೌನ್ಸಿಲ್​​ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಕುಮಾರ್‌ಘಾಟ್ ಮುನ್ಸಿಪಲ್ ಕೌನ್ಸಿಲ್, ಖೋವೈ ಮುನ್ಸಿಪಲ್ ಕೌನ್ಸಿಲ್, ತೆಲಿಯಮುರ ಮುನ್ಸಿಪಲ್ ಕೌನ್ಸಿಲ್, ಮೆಲಾಘರ್ ನಗರ ಪಂಚಾಯತ್, ಸೋನಾಮೂರ ನಗರ ಪಂಚಾಯತ್, ಅಮರಪುರ ನಗರ ಪಂಚಾಯತ್, ಸಬ್ರೂಮ್ ಮುನ್ಸಿಪಲ್ ಕೌನ್ಸಿಲ್ ಮತ್ತು ಜಿರಾನಿಯಾ ನಗರ ಪಂಚಾಯತ್ ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಜಿರಾನಿಯಾದಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಚುನಾವಣೆ ಮೂಲಕ ಬಿಜೆಪಿ ಗೆಲುವು ಗಳಿಸಿದ್ದು,ಉಳಿ ದವುಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ನವೆಂಬರ್ 25 ರಂದು ರಾಜ್ಯದ 20 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 14 ಕ್ಕೆ ಚುನಾವಣೆ ನಡೆದಿತ್ತು. ರಾಜ್ಯದ ಒಟ್ಟು 324 ಪುರಸಭೆ ಸ್ಥಾನಗಳ ಪೈಕಿ ಬಿಜೆಪಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಉಳಿದ 222 ಸ್ಥಾನಗಳಲ್ಲಿ ಶೇ.81.54ರಷ್ಟು ಮತದಾನವಾಗಿದೆ. ರಾಜ್ಯ ಚುನಾವಣಾ ಆಯೋಗದ (SEC) ಇತ್ತೀಚಿನ ನವೀಕರಣಗಳ ಪ್ರಕಾರ, ಎಂಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರ ಜತೆಗೆ ಉಳಿದ ಆರು ನಾಗರಿಕ ಸಂಸ್ಥೆಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (AMC) ನ ಎಲ್ಲಾ ವಾರ್ಡ್‌ಗಳಲ್ಲಿ ತೃಣಮೂಲ ಕಾಂಗ್ರೆಸ್ (TMC) ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಆರಂಭಿಕ ಟ್ರೆಂಡ್ ಸೂಚಿಸುತ್ತವೆ. ಮಧ್ಯಾಹ್ನ 12 ಗಂಟೆಯವರೆಗಿನ ವರದಿಗಳ ಪ್ರಕಾರ ಎಎಂಸಿ ಕ್ಷೇತ್ರಗಳಲ್ಲಿ ಬಿಜೆಪಿ 58,821 ಮತಗಳನ್ನು ಪಡೆದಿದ್ದರೆ, ಟಿಎಂಸಿ 22,295 ಮತಗಳನ್ನು ಪಡೆದಿದೆ. ಸಿಪಿಐ(ಎಂ) 15,960 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿತ್ತು. ಸಿಪಿಐ(ಎಂ) ಜೊತೆ ಮೈತ್ರಿಯಲ್ಲಿ ಮಾಡಿಕೊಂಡಿದ್ದ ಇತರ ಮೂರು ಎಡ ಪಕ್ಷಗಳು – ಸಿಪಿಐ,ಫಾರ್ವರ್ಡ್ ಬ್ಲಾಕ್ ಮತ್ತು ಆರ್​​ಎಸ್​​ಪಿ ಒಟ್ಟು 2,650 ಮತಗಳನ್ನು ಪಡೆದವು.

ಆದರೆ ಎಂಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಪಿಐ(ಎಂ) ಎರಡನೇ ಸ್ಥಾನದಲ್ಲಿ ಬಿಜೆಪಿಗಿಂತ ಹಿಂದೆ ಬಿದ್ದಿತ್ತು. ಅಗರ್ತಲಾ ಹೊರತುಪಡಿಸಿ ಎರಡು ನಗರ ಸಂಸ್ಥೆಗಳಲ್ಲಿ ಟಿಎಂಸಿ ಎರಡನೇ ಸ್ಥಾನ ಗಳಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಮೂರು ನಗರ ಸಂಸ್ಥೆಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಆರು ನಾಗರಿಕ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.

ಎಎಂಸಿಯ 38 ಸ್ಥಾನಗಳು, ಧರ್ಮನಗರ ಪುರಸಭೆಯ 14 ಸ್ಥಾನಗಳು ಮತ್ತು ಬೆಲೋನಿಯಾ ಪುರಸಭೆಯ ಎರಡು ಸ್ಥಾನಗಳ ಫಲಿತಾಂಶಗಳು ಇನ್ನೂ ಪ್ರಕಟವಾಗಬೇಕಿದೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಶನ್‌ನ 51 ವಾರ್ಡ್ ಪೈಕಿ 37 ವಾರ್ಡ್‌ಗಳನ್ನು ಬಿಜೆಪಿ ಗೆದ್ದಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸಿಪಿಐ(ಎಂ) ಪಾಣಿಸಾಗರ್, ಕೈಲಾಶಹರ್ ಮತ್ತು ಅಂಬಾಸಾ ಪುರಸಭೆಗಳಲ್ಲಿ ಮೂರು ಸ್ಥಾನಗಳನ್ನು ಗೆದ್ದಿದೆ. ಅಂಬಾಸಾ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಟಿಎಂಸಿ ಮತ್ತು ಸ್ವತಂತ್ರ ಅಭ್ಯರ್ಥಿ ತಲಾ ಒಂದು ಸ್ಥಾನವನ್ನು ಗೆದ್ದಿದ್ದಾರೆ.

ರಾಜಕೀಯ ವಲಯಗಳಲ್ಲಿ ಅನೇಕರು ಈಗಾಗಲೇ ನಾಗರಿಕ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಗಾಗಿ ಅಭಿನಂದಿಸಲು ಪ್ರಾರಂಭಿಸಿದ್ದಾರೆ. ಎಣಿಕೆಯ ಡೇಟಾವನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಮತ್ತು ಅಂತಿಮ ಫಲಿತಾಂಶಗಳನ್ನು ಘೋಷಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಎಸ್‌ಇಸಿ ಅಧಿಕಾರಿಗಳು ಹೇಳಿದ್ದಾರೆ.

ಎಣಿಕೆ ಕೇಂದ್ರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ತ್ರಿಪುರಾ ಪೊಲೀಸ್ ಮತ್ತು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್) ಸಿಬ್ಬಂದಿಯೊಂದಿಗೆ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಇತ್ತೀಚಿನ ವರದಿಗಳು ಬರುವವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಗುರುವಾರ ನಡೆದ ಮತದಾನದಲ್ಲಿಯೇ ಟಿಎಂಸಿ ಮತ್ತು ಸಿಪಿಐ(ಎಂ) ಮತ ದುರ್ಬಳಕೆ ಆರೋಪದ ಜೊತೆಗೆ ವಿವಿಧ ಪುರಸಭೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದರು. ಆದರೆ ಆಡಳಿತಾರೂಢ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿತ್ತು. ತ್ರಿಪುರಾದಲ್ಲಿ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ಸಮಿತಿಯಿಂದ ತನಿಖೆ ನಡೆಸುವಂತೆ ಕೋರಿ ಟಿಎಂಸಿ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಇದನ್ನೂಓದಿ: Tripura civic polls ತ್ರಿಪುರಾ ಸ್ಥಳೀಯ ಸಂಸ್ಥೆಗಳ ಚುನಾವಣೆ; ಬಿಗಿ ಭದ್ರತೆಯ ನಡುವೆ 222 ಸ್ಥಾನಗಳಿಗೆ ಮತ ಎಣಿಕೆ