ಆಗ್ರಾ ಡಿಸೆಂಬರ್ 27: ಪ್ರತಿ ಸಂಕಷ್ಟದಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಭಾರತೀಯರ ಸಾಮರ್ಥ್ಯ ಇಂದು ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ಪ್ರದರ್ಶನಗೊಂಡಿದೆ. ದಟ್ಟ ಮಂಜು ಕವಿದಿದ್ದರಿಂದ ಕಾರುಗಳು ಪರಸ್ಪರ ಗುದ್ದಿ ಅಪಘಾತ (Accident) ಸಂಭವಿಸಿದೆ. ಹೀಗೆ ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದಿದ್ದರಲ್ಲಿ ಟ್ರಕ್ ಕೂಡಾ ಇದ್ದು ಇದರಲ್ಲಿ ಕೋಳಿ ಸಾಗಿಸಲಾಗುತ್ತಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕನಿಷ್ಠ ಹನ್ನೆರಡು ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಅಪಘಾತದಲ್ಲಿ ಒಬ್ಬರು ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಕ್ರೇನ್ ಕರೆಸಿ ಹಾನಿಗೊಳಗಾದ ವಾಹನಗಳನ್ನು ತೆಗೆದು ರಸ್ತೆಯನ್ನು ತೆರವುಗೊಳಿಸಲಾಗಿದೆ.
ದಟ್ಟವಾದ ಮಂಜಿನಿಂದಾಗಿ ಉಂಟಾದ ಅಪಘಾತದಲ್ಲಿ ಟ್ರಕ್‌ಗಳು ಸೇರಿದಂತೆ ಕನಿಷ್ಠ ಮೂರು ವಾಹನಗಳು ಹಾನಿಗೊಳಗಾಗಿವೆ.
VIDEO | Passersby took away chickens after the truck carrying birds met with an accident on a highway in UP’s Agra, amid low visibility due to fog.
(Note: The exact time and location of the accident is yet to be ascertained.) pic.twitter.com/BynhGFn7S2
— Press Trust of India (@PTI_News) December 27, 2023
ವಾಹನವೊಂದು ಮಾಂಸ ಉತ್ಪಾದನೆಗಾಗಿ ಸಾಕಣೆ ಮಾಡಲಾಗಿದ್ದ ಬ್ರಾಯ್ಲರ್ ಕೋಳಿಯನ್ನು ಸಾಗಿಸುತ್ತಿತ್ತು ಈ ವಾಹನವೂ ಸಿಲುಕಿರುವುದನ್ನು ನೋಡಿದ ಜನರು ಟ್ರಕ್ ನಿಂದ ಕೋಳಿಗಳನ್ನು ಹೊರತೆಗೆದು ಮನೆಗಳಿಗೆ ಒಯ್ದಿದ್ದಾರೆ. ಅವರಲ್ಲಿ ಕೆಲವರು ಚೀಲಗಳೊಂದಿಗೆ ಬಂದರು.ಕೆಲವರು ನಡೆದುಕೊಂಡು ಹೋಗಿದ್ದರೆ ಇನ್ನು ಕೆಲವರು ವಾಹನಗಳಲ್ಲಿ ಬಂದು ಹೊತ್ತೊಯ್ದರು. ಲಾರಿಯಲ್ಲಿ ಸುಮಾರು 500 ಕೋಳಿಗಳಿದ್ದು, ಸುಮಾರು ₹ 1.5 ಲಕ್ಷ ಬೆಲೆ ಬಾಳುತ್ತಿತ್ತು.
ಇದನ್ನೂ ಓದಿ: ದಟ್ಟ ಮಂಜು: ಯಮುನಾ ಎಕ್ಸ್ಪ್ರೆಸ್ವೇನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ
ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿದ್ದು ಮಂಜು ಆವರಿಸಿದ್ದರಿಂದ ಜನರು ಪರದಾಡುವಂತಾಗಿದೆ. ದೆಹಲಿ, ಪಂಜಾಬ್ನಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, 110 ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ.
ರೈಲು, ವಾಹನ ಸಂಚಾರಕ್ಕೂ ಮಂಜು ಅಡ್ಡಿಯಾಗಿದೆ. 8 ಗಂಟೆಗೆ 40ಕ್ಕೂ ಹೆಚ್ಚು ವಿಮಾನಗಳು ದಟ್ಟವಾದ ಮಂಜಿನಿಂದಾಗಿ ಹಾರಾಟ ವಿಳಂಬ ಕಂಡಿವೆ. ದೆಹಲಿಯಲ್ಲಿ ತೀವ್ರ ಮಂಜಿನಿಂದಾಗಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ವಿಭಾದಲ್ಲೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500ರಷ್ಟಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ