ದಟ್ಟ ಮಂಜು: ಯಮುನಾ ಎಕ್ಸ್ಪ್ರೆಸ್ವೇನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ
ದಟ್ಟ ಮಂಜು ಕವಿದಿದ್ದರಿಂದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಬುಧವಾರ ಬೆಳಗ್ಗೆ ದಟ್ಟವಾದ ಮಂಜು ಕವಿದಿತ್ತು. ದೆಹಲಿ-ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಜು ಮುಸುಕಿದ ಮತ್ತು ಚಳಿ ಇದ್ದ ಕಾರಣ ಕೆಲವು ಸ್ಥಳಗಳಲ್ಲಿ ಶೂನ್ಯ ಗೋಚರತೆ ಇತ್ತು.

ಏತನ್ಮಧ್ಯೆ, ಗ್ರೇಟರ್ ನೋಯ್ಡಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಘಟನಾ ಸ್ಥಳಕ್ಕೆ ತೆರಳಿದ್ದರು. ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಇಂದು ಬೆಳಿಗ್ಗೆ ಕನಿಷ್ಠ 110 ವಿಮಾನಗಳು ಮತ್ತು 25 ರೈಲುಗಳ ಅಡೆತಡೆಗೆ ಕಾರಣವಾಗಿವೆ.
ದಟ್ಟವಾದ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣವು ಸರಿಸುಮಾರು 110 ವಿಮಾನಗಳ ಆಗಮನ ಮತ್ತು ನಿರ್ಗಮನದ ಮೇಲೆ ಪರಿಣಾಮ ಬೀರಿದೆ.
ಮತ್ತಷ್ಟು ಓದಿ: ಹಿಮಾಚಲ ಪ್ರದೇಶ: ಟ್ರಾಫಿಕ್ ಜಾಮ್ನಿಂದ ಬೇಸತ್ತು ನದಿಯಲ್ಲಿ ಮಹೀಂದ್ರಾ ಥಾರ್ ಓಡಿಸಿದ ಚಾಲಕನಿಗೆ ದಂಡ
ಉತ್ತರ ಭಾರತದಲ್ಲಿ ಚಳಿ ಹಾಗೂ ಮಂಜಿನ ಆಟ ಮುಂದುವರೆದಿದೆ, ಜನರು ಪರದಾಡುವಂತಾಗಿದೆ. ದೆಹಲಿ, ಪಂಜಾಬ್ನಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು, 110 ದೇಶಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬವಾಗಿದೆ.
ರೈಲು, ವಾಹನ ಸಂಚಾರಕ್ಕೂ ಮಂಜು ಅಡ್ಡಿಯಾಗಿದೆ. 8 ಗಂಟೆಗೆ 40ಕ್ಕೂ ಹೆಚ್ಚು ವಿಮಾನಗಳು ದಟ್ಟವಾದ ಮಂಜಿನಿಂದಾಗಿ ಹಾರಾಟ ವಿಳಂಬ ಕಂಡಿವೆ. ದೆಹಲಿಯಲ್ಲಿ ತೀವ್ರ ಮಂಜಿನಿಂದಾಗಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ವಿಭಾದಲ್ಲೇ ಉಳಿದಿದೆ. ಗಾಳಿಯ ಗುಣಮಟ್ಟ ಮಾಪಕದ 500ರಷ್ಟಿದೆ.
ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ಶೀತ ಅಲೆ ಮುಂದುವರೆದಿದೆ. ಶ್ರೀನಗರವು ಕನಿಷ್ಠ ತಾಪಮಾನ ದಾಖಲಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ