ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಬೈಕ್ ಅಪಘಾತಕ್ಕೀಡಾಗಿ ಬಾಂದ್ರಾದಲ್ಲಿ (Bandra) 40 ಅಡಿ ಎತ್ತರದ ಮೇಲ್ಸೇತುವೆಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ 18 ವರ್ಷದ ಯುವಕ ಮೃತಪಟ್ಟಿದ್ದು, ಬೈಕ್ ಸೈಡ್ ರೈಲಿಂಗ್‌ಗೆ ಡಿಕ್ಕಿ ಹೊಡೆದಿತ್ತು. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 17 ವರ್ಷದ ಸವಾರ ಪ್ರಜ್ಞಾಹೀನನಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಪೋಲೀಸರ ಪ್ರಕಾರ, ಈ ಜೋಡಿಯು ವೇಗವಾಗಿ ಬೈಕ್ ಚಲಾಯಿಸಿದ್ದುಹೆಲ್ಮೆಟ್ ಧರಿಸಿರಲಿಲ್ಲ.
ಬೈಕ್ ಚಲಾಯಿಸುತ್ತಿದ್ದ ಯುವಕ ಸೇತುವೆಯ ಮೇಲೆ ಪೊಲೀಸರನ್ನು ನೋಡಿ ಯು-ಟರ್ನ್ ಮಾಡಿದ್ದ. ಆ ಹೊತ್ತಿಗೆ ನಿಯಂತ್ರಣವನ್ನು ಕಳೆದುಕೊಂಡು ದ್ವಿಚಕ್ರ ವಾಹನವನ್ನು ರೇಲಿಂಗ್‌ಗೆ ಗುದ್ದಿ, ಇಬ್ಬರೂ ಮೇಲ್ಸೇತುವೆಯಿಂದ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಮಂಗಳವಾರ ಸಂಜೆ, ರಂಗ್ ಪಂಚಮಿಯ ಆಚರಣೆ ಮತ್ತು ಇಸ್ಲಾಮಿಕ್ ರಜಾದಿನವಾದ “ಬಡೀ ರಾತ್” ನಂತರ, ಬೈಕ್ ಚಾಲಕರ ತಪಾಸಣೆಗಾಗಿ ಪೊಲೀಸರು ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸೀ ಲಿಂಕ್ ದಿಕ್ಕಿನಲ್ಲಿ ಗಸ್ತು ಕರ್ತವ್ಯದಲ್ಲಿದ್ದರು.
ಬಾಂದ್ರಾದಲ್ಲಿ ಫ್ಲೈಓವರ್ ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರನಾಗಿದ್ದ ಅಬ್ದುಲ್ ಅಹದ್ ಶೇಖ್ (18) ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇಬ್ಬರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಅಪ್ರಾಪ್ತ ವಯಸ್ಸಿನ ಸವಾರನ ತಲೆಗೆ ಗಾಯವಾಗಿದ್ದು, ಭಾಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಮರಣ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ಲೇಖನ ಖಂಡಿಸಿದ ಅನುರಾಗ್ ಠಾಕೂರ್
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ವರದಿಯಾಗಿದೆ. ಸರಿಯಾದ ಪರವಾನಗಿ ಇಲ್ಲದೆ ಬಾಲಕ ಸವಾರಿ ಮಾಡುತ್ತಿದ್ದು, ಆತನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದಾಗಿ ಪೊಲೀಸರು ಹೇಳಿದ್ದಾರೆ. ಪೋಲೀಸರನ್ನು ನೋಡಿ ಮೋಟಾರು ಸೈಕಲ್ ಸವಾರನು ಎಸ್‌ವಿ ರಸ್ತೆಗೆ ವೇಗವಾಗಿ ಬಲಕ್ಕೆ ತಿರುಗಿದಾಗ ಅಪಘಾತ ಸಂಭವಿಸಿದೆ ಎಂದು ಸಬ್ ಇನ್‌ಸ್ಪೆಕ್ಟರ್ ಶಂಕರ ಪಾಟೀಲ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಚಾಲಕ ದಿಢೀರನೆ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿದ್ದು, ನಿಯಂತ್ರಣ ತಪ್ಪಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ