ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್ ಲೇಖನ ಖಂಡಿಸಿದ ಅನುರಾಗ್ ಠಾಕೂರ್
ವಿದೇಶಿ ಮಾಧ್ಯಮಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷವನ್ನು ಪೋಷಿಸುತ್ತಿದ್ದು, ನಮ್ಮ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ಸಮಾಜದ" ಬಗ್ಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಠಾಕೂರ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು(Press freedom in Kashmir) ನ್ಯೂಯಾರ್ಕ್ ಟೈಮ್ಸ್ನಲ್ಲಿ (The New York Times) ಪ್ರಕಟವಾದ ಅಭಿಪ್ರಾಯ ಲೇಖನವನ್ನು ಟೀಕಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ (Anurag Thakur), ಇದು “ಚೇಷ್ಟೆಯಿಂದ ಕೂಡಿದ” ಮತ್ತು “ಕಾಲ್ಪನಿಕ” ಎಂದಿದ್ದಾರೆ.ನ್ಯೂಯಾರ್ಕ್ ಟೈಮ್ಸ್ ಭಾರತದ ಬಗ್ಗೆ ಏನನ್ನೂ ಪ್ರಕಟಿಸುವಾಗ ತಟಸ್ಥತೆ ರೀತಿಯ ನಿಲುವುಗಳನ್ನು ಹಿಂದೆಯೇ ಕೈಬಿಟ್ಟಿತ್ತು. ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ನ್ಯೂಯಾರ್ಕ್ ಟೈಮ್ಸ್‌ನ ತಥಾಕಥಿತ ಅಭಿಪ್ರಾಯವು ಭಾರತ ಮತ್ತು ಅದರ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಮೌಲ್ಯಗಳ ಬಗ್ಗೆ ಅಪಪ್ರಚಾರವನ್ನು ಹರಡುವ ಏಕೈಕ ಉದ್ದೇಶದಿಂದ ಹಾನಿಯುಂಟು ಮಾಡಲು ಮತ್ತು ಕಾಲ್ಪನಿಕವಾಗಿ ಪ್ರಕಟಿಸಲಾಗಿದೆ. ಇದು NYT ಮತ್ತು ಇತರ ಕೆಲವು ಸಮಾನ ಮನಸ್ಕ ವಿದೇಶಿ ಮಾಧ್ಯಮಗಳು ಭಾರತ ಮತ್ತು ನಮ್ಮ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಪ್ರಧಾನಿ ನರೇಂದ್ರ ಮೋದಿಜಿಯವರ ಬಗ್ಗೆ ಸುಳ್ಳುಗಳನ್ನು ಹರಡುವುದರ ಮುಂದುವರಿಕೆಯಾಗಿದೆ. ಇಂತಹ ಸುಳ್ಳುಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಠಾಕೂರ್ ಸರಣಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ವಿದೇಶಿ ಮಾಧ್ಯಮಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷವನ್ನು ಪೋಷಿಸುತ್ತಿದ್ದು, ನಮ್ಮ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ಸಮಾಜದ” ಬಗ್ಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿವೆ ಎಂದು ಠಾಕೂರ್ ಹೇಳಿದ್ದಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ನಾವು ಜನರು ಬಹಳ ಪ್ರಬುದ್ಧರಾಗಿದ್ದೇವೆ. ಇಂತಹ ಅಜೆಂಡಾ-ಚಾಲಿತ ಮಾಧ್ಯಮಗಳಿಂದ ನಾವು ಪ್ರಜಾಪ್ರಭುತ್ವದ ವ್ಯಾಕರಣವನ್ನು ಕಲಿಯುವ ಅಗತ್ಯವಿಲ್ಲ. ಕಾಶ್ಮೀರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ NYT ಹರಡಿದ ಹಸಿ ಸುಳ್ಳುಗಳು ಖಂಡನೀಯ. ಅಂತಹ ಮನಸ್ಥಿತಿಯನ್ನು ಭಾರತೀಯರು ಅನುಮತಿಸುವುದಿಲ್ಲ. ಅಂತಹ ಮನಸ್ಥಿತಿಗಳನ್ನು ಭಾರತದ ನೆಲದಲ್ಲಿ ತಮ್ಮ ನಿರ್ಣಾಯಕ ಅಜೆಂಡಾ ನಡೆಸಲು ಭಾರತೀಯರು ಬಿಡುವುದಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಅಭಿಪ್ರಾಯ ಲೇಖನದಲ್ಲಿ, ದಿ ಕಾಶ್ಮೀರ್ ಟೈಮ್ಸ್‌ನ ಕಾರ್ಯನಿರ್ವಾಹಕ ಸಂಪಾದಕರಾದ ಅನುರಾಧಾ ಭಾಸಿನ್ ಅವರು, ಭಾರತದಾದ್ಯಂತ ಸೆನ್ಸಾರ್‌ಶಿಪ್‌ಗೆ ಭಯಪಡುತ್ತಾರೆ. ಯಾಕೆಂದರೆ ಭಾರತದ ಉಳಿದ ಭಾಗಗಳು ಕಾಶ್ಮೀರದಂತೆ ಆಗಿಬಿಡಬಹುದು ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ