TTD Online Ticket: ತಿರುಪತಿಯಲ್ಲಿ ನಡೆಯುವ ಅಂಗ ಪ್ರದಕ್ಷಿಣಂಗೆ ಇಂದಿನಿಂದ ಟಿಕೆಟ್ ವಿತರಣೆ ಆರಂಭ

Anga Pradakshinam Bookings: 2023ರ ಜನವರಿ 1ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನ ಮತ್ತು ಇತರ ಉತ್ಸವಗಳು ನಡೆಯಲಿವೆ. ತಿರುಪತಿ ದೇವಾಲಯಕ್ಕೆ ಪೂಜೆಗೆ ಬರುವ ಎಲ್ಲಾ ಯಾತ್ರಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು.

TTD Online Ticket: ತಿರುಪತಿಯಲ್ಲಿ ನಡೆಯುವ ಅಂಗ ಪ್ರದಕ್ಷಿಣಂಗೆ ಇಂದಿನಿಂದ ಟಿಕೆಟ್ ವಿತರಣೆ ಆರಂಭ
ತಿರುಪತಿ ದೇವಸ್ಥಾನImage Credit source: AFP
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 29, 2022 | 12:35 PM

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) 2023ರ ಜನವರಿ ತಿಂಗಳಿನ ‘ಅಂಗ ಪ್ರದಕ್ಷಿಣಂ’ಗೆ ಸಂಬಂಧಿಸಿದ ಟಿಕೆಟ್‌ಗಳ ವಿತರಣೆ ಇಂದಿನಿಂದ (ಡಿಸೆಂಬರ್ 29) ಆರಂಭವಾಗಲಿದೆ. ಭಕ್ತರು ತಿರುಪತಿ ತಿರುಮಲ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್​ಲೈನ್ ಟಿಕೆಟ್‌ಗಳನ್ನು ಪಡೆಯಬಹುದು.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, 2023ರ ಜನವರಿ 1ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನ ಮತ್ತು ಇತರ ಉತ್ಸವಗಳು ನಡೆಯಲಿವೆ. 2023ರ ಜನವರಿ 28ರಂದು ತಿರುಮಲದಲ್ಲಿ ರಥ ಸಪ್ತಮಿ ಆಚರಣೆಯ ಹಿನ್ನೆಲೆಯಲ್ಲಿ ಅಂಗ ಪ್ರದಖಿನಾಮ ಕೋಟಾದ ಟಿಕೆಟ್‌ಗಳು ಲಭ್ಯವಿರುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಅಂಗಪ್ರದಕ್ಷಿಣಂ ಎಂದರೇನು?: ಅಂಗ ಎಂದರೆ ಇಡೀ ದೇಹ, ಪ್ರದಕ್ಷಿಣಂ ಎಂದರೆ ದೇವಸ್ಥಾನವನ್ನು ಸುತ್ತುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ದೇಹದ ಉರುಳುಸೇವೆ ಮಾಡುತ್ತಾ ವೆಂಕಟೇಶ್ವರನನ್ನು ಸುತ್ತುವುದು ಎಂದು ಇದರರ್ಥ. ಇದನ್ನು ಭಕ್ತಿಯ ಒಂದು ರೂಪ, ಅತ್ಯಂತ ಪವಿತ್ರ ಸೇವೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

ಅಂಗಪ್ರದಕ್ಷಿಣಂ ಬಗ್ಗೆ ತಿಳಿಯಬೇಕಾದ ವಿಷಯಗಳು ಇಲ್ಲಿವೆ: – ಭಕ್ತರು ಆಧಾರ್ ಕಾರ್ಡ್ ಮತ್ತು ತಮ್ಮ ಪೂರ್ವ-ಬುಕ್ ಮಾಡಿದ ಟಿಕೆಟ್‌ಗಳನ್ನು ತೆಗೆದುಕೊಂಡು ಹೋಗಬೇಕು. ಅವುಗಳನ್ನು ಪಾಲಿಥಿನ್ ಕವರ್‌ನಲ್ಲಿ ಹಾಕಬೇಕು. ಇದರಿಂದ ಅವು ಒದ್ದೆಯಾಗುವುದಿಲ್ಲ.

– ಟಿಕೆಟ್ ಅನ್ನು ಹಿಂದಿನ ದಿನದಂದು ತೆಗೆದುಕೊಳ್ಳಬೇಕು. ಅಂದರೆ ನೀವು ಸೇವೆ ಮಾಡುವ ಹಿಂದಿನ ದಿನದಂದು ಟಿಕೆಟ್ ಪಡೆಯಬೇಕು.

– ಪ್ರತಿ ಭಕ್ತರಿಗೆ ನಿಗದಿತ ಸಮಯದ ಅಂತರದೊಂದಿಗೆ ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಪ್ರವೇಶಿಸಲು ದೇವಾಲಯದಲ್ಲಿ ಅನುಮತಿ ನೀಡಲಾಗುತ್ತದೆ.

– ತಿರುಪತಿ ದೇವಾಲಯಕ್ಕೆ ಪೂಜೆಗೆ ಬರುವ ಎಲ್ಲಾ ಯಾತ್ರಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು.

– ಭಕ್ತರು ದೇವಸ್ಥಾನದ ಮುಂಭಾಗಕ್ಕೆ ತೆರಳಿ ಪುಷ್ಕರಿಣಿಯಲ್ಲಿ ಮುಳುಗಿ, ಶುದ್ಧಗೊಳ್ಳುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ