ಡ್ರೋನ್ ದಾಳಿಯನ್ನು ತಪ್ಪಿಸಲು ಒಂದು ಹೊಸ ತಂತ್ರಜ್ಞಾನ ಅಳವಡಿಸಲು ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಮುಂದಾಗಿದೆ. ಹಾಗೊಮ್ಮೆ ಆ್ಯಂಟಿ-ಡ್ರೋನ್ ಟೆಕ್ನಾಲಜಿಯನ್ನು ಅದು ಯಶಸ್ವಿಯಾಗಿ ಅಳವಡಿಸಿದ್ದೇ ಆದರೆ, ಇಂಥದ್ದೊಂದು ತಂತ್ರಜ್ಞಾನ ಒಳಗೊಂಡ ದೇಶದ ಮೊದಲ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಆ್ಯಂಟಿ-ಡ್ರೋನ್ ಟೆಕ್ನಾಲಜಿಯನ್ನು ತಿರುಮಲ ದೇವಸ್ಥಾನಕ್ಕೂ ತರಲು, ದೇಗುಲ ನಿರ್ವಹಣೆ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಯೋಜನೆ ರೂಪಿಸುತ್ತಿದೆ.
ಇತ್ತೀಚೆಗೆ ಜಮ್ಮುವಿನ ವಾಯುನೆಲೆ ಮೇಲೆ ಡ್ರೋನ್ ದಾಳಿಯಾಗಿತ್ತು. ಅದಾದ ಬಳಿಕ ಜು.6ರಂದು ಡಿಆರ್ಡಿಒ ಕರ್ನಾಟಕದ ಕೋಲಾರದಲ್ಲಿ, ಮೂರು ಸೇವೆಗಳಲ್ಲಿ (ವಾಯು, ಭೂಮಿ ಮತ್ತು ಜಲ) ಆ್ಯಂಟಿ-ಡ್ರೋನ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿತ್ತು. ಈ ಆ್ಯಂಟಿ-ಡ್ರೋನ್ ಟೆಕ್ನಾಲಜಿ ಪ್ರದರ್ಶನದಲ್ಲಿ ಟಿಟಿಡಿ ಪಹರೆ ಮತ್ತು ಭದ್ರತಾ ವಿಭಾಗದ ಮುಖ್ಯಸ್ಥ ಗೋಪಿನಾಥ್ ಜಟ್ಟಿ ಪಾಲ್ಗೊಂಡಿದ್ದರು. ಡಿಆರ್ಡಿಒ ಪರಿಚಯಿಸಿದ ಈ ಸಿಸ್ಟಂ ಸುಮಾರು ನಾಲ್ಕು ಕಿಮೀ ದೂರದವರೆಗೆ ಪತ್ತೆ ಸಾಮರ್ಥ್ಯ ಹೊಂದಿದೆ. ಹಾಗೇ, ರೇಡಿಯೋ ಫ್ರಿಕ್ವೆನ್ಸಿ ಜ್ಯಾಮಿಂಗ್ ಮೂಲಕ ಸಾಫ್ಟ್ ಕಿಲ್ ಆಯ್ಕೆಯೊಂದಿಗೆ ಸಂವಹನವನ್ನು ನಿಷ್ಕ್ರಿಯಗೊಳಿಸಬಲ್ಲದಾಗಿದೆ. ಇದಕ್ಕೆ ಬರೋಬ್ಬರಿ 25 ಕೋಟಿ ರೂ.ವೆಚ್ಚ ಮಾಡಬೇಕಾಗುತ್ತದೆ.
ತಿರುಮಲ ದೇವಸ್ಥಾನವು ದೇಶದ ಅತ್ಯಂತ ಶ್ರೀಮಂತ ಹಿಂದು ದೇವಾಲಯಗಳಲ್ಲಿ ಒಂದಾಗಿದೆ. ವಾರ್ಷಿಕ ವರಮಾನ 3000 ಕೋಟಿ ರೂಪಾಯಿಯಷ್ಟಿದ್ದು, 14 ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ಕೆಲಸ ಮಾಡುತ್ತಾರೆ. ಹಾಗಾಗಿ, ಭವಿಷ್ಯದಲ್ಲಿ ಆಗಬಹುದಾದ ಯಾವುದೇ ತೊಂದರೆಗಳನ್ನು ತಪ್ಪಿಸಲು ಇಂಥದ್ದೊಂದು ಕ್ರಮಕ್ಕೆ ಟಿಟಿಡಿ ಮುಂದಾಗಿದೆ.
ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಯಾವಾಗ ಬಿಡುಗಡೆ ಎಂದಿದ್ದಕ್ಕೆ ಎಲಾನ್ ಮಸ್ಕ್ ನೀಡಿದ ಉತ್ತರ ಏನು ಗೊತ್ತಾ?
Karnataka Tourism: ನೀವು ಭೇಟಿ ನೀಡಲೇ ಬೇಕಾದ ಕರ್ನಾಟಕದ 15 ಪ್ರವಾಸಿ ತಾಣಗಳು ಇಲ್ಲಿವೆ!
TTD plans to deploy the Defence Research and Development Organisation’s anti-drone technology