Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ; Tv9-Polstrat ಸಮೀಕ್ಷೆ

|

Updated on: Apr 29, 2021 | 8:09 PM

Tamil Nadu Exit Poll Result 2021: Tv9 ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಶಗಳ ಪ್ರಕಾರ ಡಿಎಂಕೆ ಪಕ್ಷ 143ರ ರಿಂದ 153ಸೀಟುಗಳನ್ನು ಗಳಿಸುವ ಸಾಧ್ಯತೆ ಇದೆ. ಅದೇ ವೇಳೆ ಎಐಎಡಿಎಂಕೆ 75-80, ಇತರೆ ಪಕ್ಷಗಳು 20-12 ಸೀಟುಗಳಿಸುವ ಸಾಧ್ಯತೆ ಇದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 243 ಸೀಟುಗಳಿವೆ.

Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ;  Tv9-Polstrat ಸಮೀಕ್ಷೆ
ತಮಿಳುನಾಡು ಚುನಾವಣೆ
Follow us on

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ- ಎಐಎಡಿಎಂಕೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇಂದು ನಿನ್ನೆಯದಲ್ಲ. ಒಂದು ಬಾರಿ ಡಿಎಂಕೆ ಮತ್ತೊಮ್ಮೆ ಎಐಎಡಿಎಂಕೆ ಎಂಬ ರೀತಿಯಲ್ಲಿ ಅಧಿಕಾರ ನಡೆಸಿದ ಪ್ರಮುಖ ಪಕ್ಷಗಳಿವು.  ಈ ಬಾರಿ ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟವು ಗದ್ದುಗೇರಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. Tv9-Polstrat ಸಮೀಕ್ಷೆಯ ಪ್ರಕಾರ ಡಿಎಂಕೆ ಪರ ತಮಿಳುನಾಡಿನ ಜನ ಹೆಚ್ಚಿನ  ಒಲವು ತೋರಿಸಿದ್ದಾರೆ. Tv9 ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಶಗಳ ಪ್ರಕಾರ ಡಿಎಂಕೆ ಪಕ್ಷ 143ರ ರಿಂದ 153ಸೀಟುಗಳನ್ನು ಗಳಿಸುವ ಸಾಧ್ಯತೆ ಇದೆ. ಅದೇ ವೇಳೆ ಎಐಎಡಿಎಂಕೆ 75-80, ಇತರೆ ಪಕ್ಷಗಳು 20-12 ಸೀಟುಗಳಿಸುವ ಸಾಧ್ಯತೆ ಇದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 243 ಸೀಟುಗಳಿವೆ.

ಮತದಾರರು ಯಾವ ಪಕ್ಷಗಳು ಅಧಿಕಾರಕ್ಕೇರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದು, ಈ ಪೈಕಿ ಪುರುಷರಲ್ಲಿ ಶೇ 45.10 ಮಂದಿ ಡಿಎಂಕೆ, ಶೇ 36.70 ಮಂದಿ ಎಐಎಡಿಎಂಕೆ, ಶೇ 18.20 ಇತರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಮಹಿಳೆಯರಲ್ಲಿ ಶೇ44.90 ಮಂದಿ ಡಿಎಂಕೆ, ಶೇ36.80 ಮಂದಿ ಎಐಎಡಿಎಂಕೆ, ಶೇ 18.30 ಇತರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತದಾರರ ಲಿಂಗ ಪ್ರಕಾರ ಡಿಎಂಕೆ ಪರ  ಶೇ 44.90, ಎಐಎಡಿಎಂಕೆ ಪರ ಶೇ 36.80,ಇತರೆ ಶೇ 18.30 ಒಲವು ತೋರಿದ್ದಾರೆ.

ಮತದಾರರಲ್ಲಿ ಜಾತಿ/ಸಮುದಾಯವಾರು ನೋಡಿದರೆ ಎಸ್​ಸಿ ,ಎಸ್​ಟಿಯವರಲ್ಲಿ ಶೇ46.70, ಮುಸ್ಲಿಮರಲ್ಲಿ ಶೇ59.20 ಮತ್ತು ಇತರೆ ಜಾತಿಯ ಶೇ40.30 ಮಂದಿ ಡಿಎಂಕೆ ಅಧಿಕಾರಕ್ಕೇರಲಿದೆ ಎಂದುಹೇಳಿದ್ದಾರೆ.
ಎಐಎಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಎಸ್​ಸಿ ,ಎಸ್​ಟಿಯವರಲ್ಲಿ ಶೇ 36.40, ಮುಸ್ಲಿಮರಲ್ಲಿ ಶೇ 59.20 ,ಇತರೆ ಶೇ 40.30 ಮಂದಿ ಹೇಳಿದ್ದಾರೆ. ಇವೆರಡೂ ಪಕ್ಷಗಳಲ್ಲದೆ ಇತರ ಪಕ್ಷಗಳು ಗದ್ದುಗೇಯೇರಲಿದೆ ಎಂದು ಎಸ್​ಸಿ ,ಎಸ್​ಟಿಯವರಲ್ಲಿ ಶೇ 16.9, ಮುಸ್ಲಿಮರಲ್ಲಿ ಶೇ24.60 ಮತ್ತು ಇತರ ಪಕ್ಷಗಳ ಶೇ 20.80 ಮಂದಿ ಒಲವು ವ್ಯಕ್ತ ಪಡಿಸಿದ್ದಾರೆ.

ಡಿಎಂಕೆ ಪಕ್ಷಕ್ಕೆ ಶೇ 44.90, ಎಐಎಡಿಎಂಕೆ ಪಕ್ಷಕ್ಕೆ ಶೇ 36. 80, ಇತರ ಪಕ್ಷಗಳ ಪರ ಶೇ 18.30 ಮತ ಸಿಗಬಹುದೆಂದು ತಮಿಳುನಾಡಿನ ಮತದಾರರು ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ 133 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಡಿಎಂಕೆ 99 ಸೀಟುಗಳನ್ನು ಗಳಿಸಿದ್ದು ಡಿಎಂಡಿಕೆ ಮತ್ತು ಇತರ ಪಕ್ಷಗಳು ಖಾತೆ ತೆರೆಯಲಿಲ್ಲ.

ಇದನ್ನೂ ಓದಿ: Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ

Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್​ಡಿಎಫ್ Tv9-Polstrat ಸಮೀಕ್ಷೆ

(tv9 bharatvarsh exit poll results 2021 polstrat Tamilnadu assembly elections exit poll updates in Kannada)