ದೆಹಲಿ ಗಲಾಟೆ ಬಗ್ಗೆ ಆತುರದ ಟ್ವೀಟ್ ಮಾಡಿದ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿಗೆ 2 ವಾರ ಟಿವಿ ಪರದೆಯಿಂದ ದೂರ ಉಳಿಯುವಂತೆ ನಿರ್ಬಂಧ
ರೈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ದೆಹಲಿ: ಹಿರಿಯ ಪತ್ರಕರ್ತ ಹಾಗೂ ಪ್ರತಿಷ್ಠಿತ ವಾರ್ತಾ ವಾಹಿನಿಯ ನ್ಯೂಸ್ ಆಂಕರ್ ರಾಜ್ದೀಪ್ ಸರ್ದೇಸಾಯಿ ಅವರಿಗೆ ಎರಡು ವಾರಗಳ ಕಾಲ ವಾಹಿನಿಯ ತೆರೆಯ ಮೇಲೆ ಬರದಂತೆ ನಿರ್ಬಂಧ ಹಾಗೂ ಒಂದು ತಿಂಗಳ ಸಂಬಳವನ್ನು ಕಡಿತಗೊಳಿಸಿ ಇಂಡಿಯಾ ಟುಡೇ ಗ್ರೂಪ್ ಆದೇಶ ನೀಡಿದೆ.
ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಚಳುವಳಿಯಲ್ಲಿ, ರೈತನು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ರಾಜ್ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈಗ ಡಿಲೀಟ್ ಆಗಿರುವ ಟ್ವೀಟ್ನಲ್ಲಿ, ‘45 ವರ್ಷದ ನವ್ನೀತ್ ಎಂಬ ರೈತನೊಬ್ಬ, ಐಟಿಒ ಬಳಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ’ ಎಂದು ಸರ್ದೇಸಾಯಿ ಹೇಳಿದ್ದರು. ಈ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ ಎಂದೂ ರಾಜ್ದೀಪ್ ಸರ್ದೇಸಾಯಿ ಟ್ವಿಟ್ನಲ್ಲಿ ಬರೆದುಕೊಂಡಿದ್ದರು. ಇಂಡಿಯಾ ಟುಡೇ ವರದಿಗಾರನೊಂದಿಗೆ ಮಾತನಾಡುವ ವೇಳೆ, ನವ್ನೀತ್ ಸಿಂಗ್, ರೈತ ಚಳುವಳಿಯ ಗುರುತಾಗಿ ಉಳಿಯುತ್ತಾರೆ ಮತ್ತು ನವ್ನೀತ್ಗೆ ನ್ಯಾಯ ಸಿಗುವವರೆಗೂ ರೈತರು ತಮ್ಮ ಜಾಗ ಬಿಟ್ಟು ಕದಲುವುದಿಲ್ಲ ಎಂದು ಕೂಡ ಸರ್ದೇಸಾಯಿ ಹೇಳಿದ್ದರು.
ರಾಜ್ದೀಪ್ ಡಿಲೀಟ್ ಮಾಡಿದ್ದ ಟ್ವೀಟ್ ಇದು..
He posted (and later deleted) this tweet at such a sensitive time? Unbelievable pic.twitter.com/ZLUlbl54Ug
— Swati Goel Sharma (@swati_gs) January 26, 2021
ಇದನ್ನೂ ಓದಿ: Explainer | ಕೆಂಪುಕೋಟೆಯಲ್ಲಿ ರೈತ ಪ್ರತಿಭಟನಾಕಾರರು ಹಾರಿಸಿದ ಕೇಸರಿ ಧ್ವಜ ಯಾವುದು?
ಟ್ವೀಟ್ನ್ನು ನಿನ್ನೆಯೇ ಹಿಂಪಡೆದುಕೊಂಡಿದ್ದ ರಾಜ್ದೀಪ್ ಸರ್ದೇಸಾಯಿ, ಬಳಿಕ, ಟ್ರಾಕ್ಟರ್ ಮಗುಚಿ ರೈತ ಮೃತಪಟ್ಟಿದ್ದಾನೆ ಎಂದು ಸೂಚಿಸುವ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಚಳುವಳಿಗಾರರು ರೈತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ, ಪೊಲೀಸ್ ಬ್ಯಾರಿಕೇಡ್ಗಳನ್ನು ಉರುಳಿಸಲು ಹೊರಟಾಗ, ಟ್ರಾಕ್ಟರ್ ಮಗುಚಿ ಬಿದ್ದು ನವ್ನೀತ್ ಮೃತಪಟ್ಟಿದ್ದಾರೆ ಎಂದು ಈ ವೀಡಿಯೋ ಹೇಳುತ್ತಿದೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
While the farm protestors claim that the deceased Navneet Singh was shot at by Delhi police while on a tractor, this video clearly shows that the tractor overturned while trying to break the police barricades. The farm protestors allegations don’t stand. Post mortem awaited.? pic.twitter.com/JnuU05psgR
— Rajdeep Sardesai (@sardesairajdeep) January 26, 2021
ಜೊತೆಗೆ, ರೈತರು ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಪೊಲೀಸರು ಬಹು ತಾಳ್ಮೆ ವಹಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಹೊರತು, ರೈತರು ಹೇಳಿದಂತೆ ಗುಂಡಿನ ದಾಳಿ ನಡೆಸಿರುವ ಬಗ್ಗೆ ಸಾಕ್ಷಿ ಲಭ್ಯವಿಲ್ಲ ಎಂದು ಕೂಡ ತಿಳಿಸಿದ್ದರು.
ರೈತ ಮೃತಪಟ್ಟಿರುವ ಬಗ್ಗೆ ದೆಹಲಿ ಪೊಲೀಸರು ವೀಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನವ್ನೀತ್ ಸಿಂಗ್ ಟ್ರಾಕ್ಟರ್ ಮಗುಚಿ ಮೃತಪಟ್ಟಿರುವುದು ಕಂಡಿದೆ. ಜೊತೆಗೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆತನ ದೇಹದ ಎಡಭಾಗಕ್ಕೆ ಬಲವಾದ ಏಟಾದ ಕಾರಣ ಮೃತಪಟ್ಟಿದ್ದಾನೆ ಎಂದು ಖಚಿತವಾಗಿದೆ. ಇದೀಗ, ರಾಜ್ದೀಪ್ ಸರ್ದೇಸಾಯಿ ಮೇಲೆ ನಿರ್ಬಂಧ ಹೇರಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಚರ್ಚೆ ಆರಂಭಿಸಿದ್ದು. ಟ್ವಿಟರ್ನ ನ್ಯೂಸ್ ವಿಭಾಗದಲ್ಲಿ ಈ ವಿಚಾರವು ಟ್ರೆಂಡಿಂಗ್ನಲ್ಲಿದೆ.
ರಾಜ್ದೀಪ್ ಸರ್ದೇಸಾಯಿ.. ಸುಳ್ಳು ಸುದ್ದಿಯ ಸರದಾರ?: ಟ್ವಿಟರ್ನಲ್ಲಿ ಬಂಧನಕ್ಕೆ ಆಗ್ರಹ
Published On - 9:44 pm, Thu, 28 January 21