ನರ್ವಾಲ್: ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಅವಳಿ ಸ್ಫೋಟ (Twin blasts) ಸಂಭವಿಸಿದ್ದು 6 ಜನರಿಗೆ ಗಾಯಗೊಂಡಿದ್ದಾರೆ ಎಂದು ಎಡಿಜಿಪಿ ಮುಖೇಶ್ ಸಿಂಗ್, ಹೇಳಿದ್ದಾರೆ. ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ನಿಗೂಢ ಸ್ಫೋಟದ ಕಾರಣದ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಇಂದು ಬೆಳಗ್ಗೆ ಜಮ್ಮುವಿನಲ್ಲಿ ನಡೆದ ಎರಡು ಸ್ಫೋಟಗಳಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
#UPDATE | Twin blasts occurred in Narwal area of Jammu, 6 people injured: Mukesh Singh, ADGP Jammu Zone
(File photo) pic.twitter.com/CdxV62JcAm
— ANI (@ANI) January 21, 2023
ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಸ್ವರೂಪವನ್ನು ಬಗ್ಗೆ ನಿರ್ಧರಿಸಲು ಇದು ಈ ಮುಂಚೆಯೇ ಪ್ಲಾನ್ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಸ್ಫೋಟದಲ್ಲಿ ಗಾಯಗೊಂಡವರನ್ನು ಸುಹೇಲ್ ಇಕ್ಬಾಲ್ (35), ಸುಶೀಲ್ ಕುಮಾರ್ (26), ವಿಶ್ವ ಪ್ರತಾಪ್ (25), ವಿನೋದ್ ಕುಮಾರ್ (52), ಅರುಣ್ ಕುಮಾರ್, ಅಮಿತ್ ಕುಮಾರ್ (40) ಮತ್ತು ರಾಜೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಐಇಡಿ ಸ್ಫೋಟಗಳು ಉಧಮ್‌ಪುರ ಸ್ಫೋಟದಂತೆಯೇ ಇದ್ದವು ಮತ್ತು ಕಾರ್ಯಾಚರಣಾ ಕಾರ್ಯವು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದಂತೆಯೇ ತೋರುತ್ತದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತಪ್ಪಿತಸ್ಥರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ತುರ್ತು ಕ್ರಮಗಳನ್ನು ಕೋರಿದ್ದಾರೆ.
ಇಂತಹ ಹತಾಶ ಕೃತ್ಯಗಳು ಹೊಣೆಗಾರರ ಹತಾಶೆ ಮತ್ತು ಹೇಡಿತನವನ್ನು ಎತ್ತಿ ತೋರಿಸುತ್ತವೆ. ತಕ್ಷಣ ಮತ್ತು ದೃಢವಾದ ಕ್ರಮ ತೆಗೆದುಕೊಳ್ಳಿ. ಅಪರಾಧಿಗಳನ್ನು ನ್ಯಾಯಂಗದ ಮೂಲಕ ಅವರಿಗೆ ಶಿಕ್ಷೆ ನೀಡುವಂತೆ ಆಗಬೇಕು, ಅವರನ್ನು ರಕ್ಷಣೆ ಮಾಡುವ ಯಾವ ಪ್ರಯತ್ನಗಳನ್ನು ಮಾಡಬಾರದು. ಎಂದು ಲೆಫ್ಟಿನೆಂಟ್ ಗವರ್ನರ್ ಭದ್ರತಾ ಅಧಿಕಾರಿಗಳಿಗೆ ಹೇಳಿದರು. ಘಟನೆಯಲ್ಲಿ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಘೋಷಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:06 pm, Sat, 21 January 23