2047 ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪನೆಗಾಗಿ PFI ಸರ್ವಿಸ್ ಟೀಂ-ಹತ್ಯಾ ತಂಡಗಳ ರಚನೆ: NIA ನಿಂದ ಸ್ಪೋಟಕ ಮಾಹಿತಿ ಬಹಿರಂಗ

NIA: ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಗುರಿ ಹೊಂದಿರುವ ಈ ಸಂಘಟನೆ ತನ್ನ ಗುರಿ ತಲುಪಲು 'ಸರ್ವಿಸ್ ಟೀಮ್ '  ಮತ್ತು 'ಕಿಲ್ಲರ್ ಸ್ಕ್ವಾಡ್‌ಗಳು' ಎಂಬ ಗುಪ್ತ್​​ ಗುಪ್ತ ತಂಡಗಳನ್ನು ರಚಿಸಿಕೊಂಡಿದೆ.

2047 ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪನೆಗಾಗಿ PFI ಸರ್ವಿಸ್ ಟೀಂ-ಹತ್ಯಾ ತಂಡಗಳ ರಚನೆ: NIA ನಿಂದ ಸ್ಪೋಟಕ ಮಾಹಿತಿ ಬಹಿರಂಗ
ಎನ್ಐಎ
Follow us
TV9 Web
| Updated By: ಆಯೇಷಾ ಬಾನು

Updated on:Jan 21, 2023 | 11:49 AM

ದೆಹಲಿ: ಮಂಗಳೂರಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ವರ್ಷ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಚಾರ್ಜ್ ಶೀಟ್ ಸಲ್ಲಿಸಿದ್ದು ಅನೇಕ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಯಲು ಮಾಡಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ 2047ರ ಒಳಗೆ ಭಾರತದಲ್ಲಿ ಇಸ್ಲಾಮಿಕ ಆಡಳಿತವನ್ನು ತರಬೇಕೆಂದು ತಯಾರಿಸಿ ನಡೆಸಿದೆ. ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಸೃಷ್ಟಿಸುವ ಗುರಿ ಹೊಂದಿರುವ ಈ ಸಂಘಟನೆ ತನ್ನ ಗುರಿ ತಲುಪಲು ‘ಸರ್ವಿಸ್ ಟೀಮ್ ‘  ಮತ್ತು ‘ಕಿಲ್ಲರ್ ಸ್ಕ್ವಾಡ್‌ಗಳು’ ಎಂಬ ​ ಗುಪ್ತ ತಂಡಗಳನ್ನು ರಚಿಸಿಕೊಂಡಿದೆ. ಇವುಗಳ ಮೂಲಕ ತನ್ನ ಶತ್ರುಗಳನ್ನು ಟಾರ್ಗೆಟ್​ ಮಾಡಿಕೊಂಡು, ಕೊಲ್ಲುವ ಗುರಿ ಹೊಂದಿದೆ ಎಂದು ಎನ್​ಐಎ (NIA) ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ವರ್ಷ ಜುಲೈ 26ರಂದು ನಡೆದ ಬಿಜೆಪಿ ಯುವಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಈ ವಿಷಯ ಬಹಿರಂಗಪಡಿಸಿದೆ. ಜನರಲ್ಲಿ ಮತ್ತು ವಿಶೇಷವಾಗಿ ನಿರ್ದಿಷ್ಟ ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ನೆಟ್ಟಾರು ಅವರನ್ನು ಮಾರಣಾಂತಿಕ ಆಯುಧಗಳೊಂದಿಗೆ ಸಾರ್ವಜನಿಕವಾಗಿ ಕೊಲ್ಲಲಾಯಿತು.

ದಕ್ಷಿಣ ಕನ್ನಡದ ಜನರಲ್ಲಿ ಹಾಗೂ ನಿರ್ದಿಷ್ಟ ಸಮುದಾಯದ ಜನರಲ್ಲಿ ಭಯೋತ್ಪಾದನೆಯ ಬೀಜ ಬಿತ್ತಲು ಪ್ರವೀಣ್ ನೆಟ್ಟಾರನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಬಳಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. 20 ಪಿಎಫ್‌ಐ ಸದಸ್ಯರ ವಿರುದ್ಧ ಸಲ್ಲಿಸಲಾದ ಚಾರ್ಜ್‌ಶೀಟ್​ನಲ್ಲಿ ಈ ಪಿಎಫ್​​ಐ ಸಂಘಟನೆಯ ‘ಸರ್ವಿಸ್ ಟೀಮ್’ ಸದಸ್ಯರಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ದಾಳಿ ಮಾಡುವ ಬಗ್ಗೆ ತರಬೇತಿಗಳನ್ನು ನೀಡಲಾಗಿತ್ತಂತೆ. ಮತ್ತು ಕೆಲವು ಸಮುದಾಯಗಳು, ಗುಂಪುಗಳಲ್ಲಿನವರ ಮೇಲೆ ಟಾರ್ಗೆಟ್ ಮಾಡುವುದು, ಟಾರ್ಗೆಟೆಡ್ ವ್ಯಕ್ತಿಗಳ ಮೇಲೆ ನಿಗಾ ಇಡುವ ತಂತ್ರಗಳ ತರಬೇತಿಯನ್ನು ನೀಡಲಾಗಿತ್ತಂತೆ. ತಮ್ಮ ಶತ್ರುಗಳ ಪಟ್ಟಿ ಮಾಡುವ ಕೌಶಲ್ಯವನ್ನು ಹೇಳಿಕೊಡಲಾಗಿತ್ತು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: Praveen Nettaru: ಎನ್​ಐಎ ಚಾರ್ಜ್​ಶೀಟ್ ಸ್ಪೋಟಕ ಅಂಶ ಬಯಲು: PFI ಟಾರ್ಗೆಟ್​​ 4 ಜನ

ಹಾಗೂ ಹಿರಿಯ ಪಿಎಫ್‌ಐ ನಾಯಕರ ಸೂಚನೆಯ ಮೇರೆಗೆ ಗುರುತಿಸಲಾದ ಟಾರ್ಗೆಟೆಡ್ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಮತ್ತು ಅವರನ್ನು ಕೊಲ್ಲಲು ಈ ‘ಸರ್ವಿಸ್ ಟೀಮ್’ ಸದಸ್ಯರು ಹೆಚ್ಚಿನ ತರಬೇತಿ ಪಡೆದಿದ್ದರು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಬೆಂಗಳೂರು ನಗರ, ಸುಳ್ಯ ಟೌನ್ ಮತ್ತು ಬೆಳ್ಳಾರೆ ಗ್ರಾಮದಲ್ಲಿ ನಡೆದ ಪಿಎಫ್‌ಐ ಸದಸ್ಯರು ಮತ್ತು ಮುಖಂಡರ ಪಿತೂರಿ ಸಭೆಗಳಲ್ಲಿ ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರ್ ಅವರಿಗೆ ನಿರ್ದಿಷ್ಟ ಸದಸ್ಯರನ್ನು ಗುರುತಿಸಲು ಮತ್ತು ಗುರಿಯಾಗಿಸಲು ಸೂಚಿಸಲಾಗಿತ್ತಂತೆ.

“ಸೂಚನೆಗಳ ಪ್ರಕಾರ ನಾಲ್ವರನ್ನು ಗುರುತಿಸಲಾಗಿದ್ದು ಅವರಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು ಕಳೆದ ವರ್ಷ ಜುಲೈ 26 ರಂದು ಸಾರ್ವಜನಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಿರುವ 20 ಪಿಎಫ್‌ಐ ಸದಸ್ಯರಲ್ಲಿ ಆರು ಮಂದಿ ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಸಹಾಯ ಮಾಡುವ ಅಥವಾ ಸುಳಿವು ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Sat, 21 January 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ