Praveen Nettaru: ಎನ್​ಐಎ ಚಾರ್ಜ್​ಶೀಟ್ ಸ್ಪೋಟಕ ಅಂಶ ಬಯಲು: PFI ಟಾರ್ಗೆಟ್​​ 4 ಜನ

ಪಿಎಫ್ಐ ಮಸೂದ್ ಕೊಲೆ ರಿವೇಂಜ್​ ತೆಗೆದುಕೊಳ್ಳಲು ಮಸೂದ್ ಅಂತ್ಯಕ್ರಿಯೆ ಜಾಗದಲ್ಲಿ ಮೃತದೇಹದ ಎದುರು ಶಪತ ಮಾಡಿತ್ತು. ಹಿಂದು ಸಂಘಟನೆ, ಬಿಜೆಪಿಯಲ್ಲಿ ಗುರುತಿಸಿಕೊಂಡವರನ್ನು ಹತ್ಯೆ ಮಾಡಲು ಪ್ಲಾನ್ ರೂಪಿಸಿತ್ತು.

Praveen Nettaru: ಎನ್​ಐಎ ಚಾರ್ಜ್​ಶೀಟ್ ಸ್ಪೋಟಕ ಅಂಶ ಬಯಲು: PFI ಟಾರ್ಗೆಟ್​​ 4 ಜನ
ಮೃತ ಪ್ರವೀಣ್ ನೆಟ್ಟಾರು (ಸಂಗ್ರಹ ಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on: Jan 21, 2023 | 10:57 AM

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣ (Praveen Nettaru Murder Case) ಸಂಬಂಧ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ (Charge Sheet) ಸಲ್ಲಿಕೆ ಮಾಡಿದ್ದಾರೆ. 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿರುವ ಒಟ್ಟು 1,500 ಪುಟಗಳ ಚಾರ್ಜ್​ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇನ್ನು ಈ ಚಾರ್ಜ್​ಶೀಟ್​​ನಲ್ಲಿ​​ ಹಲವು ಅಂಶಗಳು ಉಲ್ಲೇಖಿಸಲಾಗಿದೆ. ಗ್ಯಾಂಗ್ ಪ್ರವೀಣ್ ನೆಟ್ಟಾರು ಸೇರಿ ನಾಲ್ವರನ್ನು ಟಾರ್ಗೆಟ್ ಮಾಡಿತ್ತು ಎಂದು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 20 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ NIA

ಪ್ರವೀಣ್ ನೆಟ್ಟಾರು ಅಲ್ಲದೆ ಮತ್ತೊಬ್ಬ ಸಂಘಟನೆಯ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗಿತ್ತು. ವ್ಯಕ್ತಿ ಮೇಲೆ ದಾಳಿ ನಡೆಸಲು ಸರ್ವಿಸ್ ಅಥವಾ ಕಿಲ್ಲರ್ ಟೀಮ್ ಎಂಬ ಹೆಸರಿನ ಸದ್ಯಸ್ಯರ ತಂಡ ಸಿದ್ಧಗೊಂಡಿದ್ದವು. ಎರಡು ತಂಡಕ್ಕೆ ತಲಾ ಇಬ್ಬರನ್ನು ವಾಚ್ ಮಾಡಲು ಟಾಸ್ಕ್ ನೀಡಲಾಗಿತ್ತು. ನಾಲ್ವರಲ್ಲಿ ಒಬ್ಬನನ್ನು ಕೊಲ್ಲಲು ಪಿಎಫ್ಐ ಹೇಳಿತ್ತು. ಮೊದಲ ವ್ಯಕ್ತಿ ಸಿಗದಿದ್ದರೇ 2ನೇ ಟಾರ್ಗೆಟ್​ ಪ್ರವೀಣ್ ನೆಟ್ಟಾರು ಆಗಿದ್ದನು.

ಪಿಎಫ್ಐ ಮಸೂದ್ ಕೊಲೆ ರಿವೇಂಜ್​ ತೆಗೆದುಕೊಳ್ಳಲು ಮಸೂದ್ ಅಂತ್ಯಕ್ರಿಯೆ ಜಾಗದಲ್ಲಿ ಮೃತದೇಹದ ಎದುರು ಶಪತ ಮಾಡಿತ್ತು. ಹಿಂದು ಸಂಘಟನೆ, ಬಿಜೆಪಿಯಲ್ಲಿ ಗುರುತಿಸಿಕೊಂಡವರನ್ನು ಹತ್ಯೆ ಮಾಡಲು ಪ್ಲಾನ್ ರೂಪಿಸಿತ್ತು. ಪಿಎಫ್ಐ‌ ಮಸೂದ್ ಕೊಲೆಯನ್ನು ತನ್ನ ಮಿಷನ್​ಗೆ ಬಳಸುಕೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ