ಗಾಂಜಾ ಲೋಕದಲ್ಲಿ ಮಂಗಳೂರು ವೈದ್ಯರು: ಇನ್ನೂ 2 ವೈದ್ಯರು, 2 ವಿದ್ಯಾರ್ಥಿನಿಯರು, 5 ವಿದ್ಯಾರ್ಥಿಗಳ ಬಂಧನ

ಗಾಂಜಾ ಲೋಕದಲ್ಲಿ ಮಂಗಳೂರು ವೈದ್ಯರು ಪ್ರಕರಣದಲ್ಲಿ ಇಬ್ಬರು ವೈದ್ಯರು ಹಾಗೂ 7 ವೈದ್ಯಯಕೀಯ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ.

ಗಾಂಜಾ ಲೋಕದಲ್ಲಿ ಮಂಗಳೂರು ವೈದ್ಯರು: ಇನ್ನೂ 2 ವೈದ್ಯರು, 2 ವಿದ್ಯಾರ್ಥಿನಿಯರು, 5 ವಿದ್ಯಾರ್ಥಿಗಳ ಬಂಧನ
Follow us
TV9 Web
| Updated By: ಆಯೇಷಾ ಬಾನು

Updated on:Jan 21, 2023 | 2:56 PM

ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಪ್ರಕರಣದಲ್ಲಿ ವೈದ್ಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವೈದ್ಯರು ಹಾಗೂ 7 ವೈದ್ಯಯಕೀಯ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. ನಿನ್ನೆ (ಜ.20) ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಇಬ್ಬರು ವೈದ್ಯರು ಸೇರಿ ಒಂಬತ್ತು ಮಂದಿಯನ್ನು ಅಮಾನತು ಮಾಡಿತ್ತು. ಈಗ ಈ ಪ್ರಕರಣದಲ್ಲಿ ಮತ್ತೆ 9 ಮಂದಿ ಅರೆಸ್ಟ್ ಆಗಿದ್ದಾರೆ.

ಶ್ರೀನಿವಾಸ ಆಸ್ಪತ್ರೆಯ ಡಾ‌.ಸಿದ್ಧಾರ್ಥ್​ ಪವಸ್ಕರ್(29), ದುರ್ಗಾ ಸಂಜೀವಿನಿ ಆಸ್ಪತ್ರೆಯ ಡಾ.ಸುಧೀಂದ್ರ(34) ಎಂಬ ಇಬ್ಬರು ವೈದ್ಯರು ಅರೆಸ್ಟ್ ಆಗಿದ್ದಾರೆ. ಹಾಗೂ ಕೆಎಂಸಿ ಮೆಡಿಕಲ್ ಕಾಲೇಜಿನ ಉತ್ತರ ಪ್ರದೇಶದ ಡಾ.ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳದ ಡಾ.ಸೂರ್ಯಜಿತ್ ದೇವ್(20), ಡಾ.ಆಯೇಷಾ ಮಹಮ್ಮದ್(23), ತೆಲಂಗಾಣದ ಡಾ.ಪ್ರಣಯ್ ನಟರಾಜ್(24),ಡಾ.ಚೈತನ್ಯಾ(23), ಉತ್ತರ ಪ್ರದೇಶದ ಡಾ.ಇಶ್ ಮಿದ್ದ(24) ಬಂಧಿತ ವಿದ್ಯಾರ್ಥಿಗಳು. ಸದ್ಯ ಈಗ ಗಾಂಜಾ ಕೇಸ್​​ನಲ್ಲಿ ಈವರೆಗೂ 24 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜತೆ ವೈದ್ಯರು: ಇದು ಮಂಗಳೂರು ಡಾಕ್ಟರ್​ಗಳ ಗಾಂಜಾ ಲೋಕದ ಕತೆ!

ಡ್ರಗ್ಸ್ ಮಾಫಿಯಾದ ಹಿಂದೆ ಬಿದ್ದಿದ್ದ ಮಂಗಳೂರು ಪೊಲೀಸರು ಕಳೆದ ಜನವರಿ‌ 11 ರಂದು ಹೈ ಪ್ರೋಪೈಲ್ ಡ್ರಗ್ಸ್ ಜಾಲವನ್ನು ಭೇದಿಸಿದ್ದರು. ಈ ವೇಳೆ ಇಬ್ಬರು ವೈದ್ಯರು ಸೇರಿ ಹತ್ತಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಇವರೆಲ್ಲ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನವರಾಗಿದ್ದು ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇದಾದ ನಂತರ ನಿನ್ನೆ ಈ ಜಾಲದಲ್ಲಿದ್ದ ಕೆಎಂಸಿ ಮೆಡಿಕಲ್ ಕಾಲೇಜಿನ ಇಬ್ಬರು ವೈದ್ಯರುಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಗೇಟ್ ಪಾಸ್ ನೀಡಿತ್ತು. ಅವರ ಗುತ್ತಿಗೆಯನ್ನು ರದ್ದುಪಡಿಸಿ ಅವರನ್ನು ಟರ್ಮಿನೇಟ್ ಮಾಡಲಾಗಿದೆ. ಜೊತೆಗೆ ಇದೇ ಕೆಎಂಸಿ ಕಾಲೇಜಿನ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಕಾಲೇಜಿನ‌ ಆಡಳಿತ ಮಂಡಳಿ ಈ ಕ್ರಮಕೈಗೊಂಡು ಪೊಲೀಸ್ ಕಮಿಷನರ್ ಕಚೇರಿಗೆ ದೌಡಾಯಿಸಿ ಈ ಶಿಸ್ತುಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವತಃ ಕೆಎಂಸಿ‌ ವೈದ್ಯಕೀಯ ಕಾಲೇಜಿನ ಡೀನ್ ಉನ್ನಿಕೃಷ್ಣನ್ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್ ಶಶಿಕುಮಾರ್ ಅವರಿಗೆ ಮಾಹಿತಿ ನೀಡಿದ್ರು. ಇಂತಹ ಮಾದಕ ಜಾಲದಲ್ಲಿ ಭಾಗಿಯಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಪಾರದರ್ಶಕ ತನಿಖೆಗೆಗಾಗಿ ಅವರನ್ನು ಕಾಲೇಜಿನಿಂದ ಕಳಿಸಲಾಗಿದೆ. ತನಿಖೆಗೆ ಬೇಕಾದ ಎಲ್ಲಾ ಸಹಕಾರವನ್ನು ಕೆಎಂಸಿ ಆಸ್ಪತ್ರೆಯ ಕಡೆಯಿಂದ ನೀಡಲಾಗುವುದು ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ. ಕಾಲೇಜು‌ ಆಡಳಿತ‌ ಮಂಡಳಿಯ ಈ ನಿರ್ಧಾರ ಪೊಲೀಸರ‌ ಮುಂದಿನ ತನಿಖೆಗೂ ಸಹಕಾರಿಯಾಗಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:56 pm, Sat, 21 January 23

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ