ಪ್ರಧಾನಿ ಮೋದಿಯನ್ನು ದ್ವೇಷಿಸುವ ಕಾರಣದಿಂದಲೇ ಕಾಂಗ್ರೆಸ್,ಡಿಎಂಕೆ ಜತೆಯಾಗಿದೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್

ತಮಿಳುನಾಡಿಗೆ ಕಾವೇರಿ ನೀರಿನ ಬಾಕಿ ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಕುರುವಾಯಿ ಭತ್ತದ ಬೆಳೆಯನ್ನು ಉಳಿಸುವಲ್ಲಿ ಕಾವೇರಿ ಡೆಲ್ಟಾದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ ಎಂಬ ಟ್ವೀಟ್ ರಿಟ್ಲೀಟ್ ಮಾಡಿ ರಾಜೀವ್ ಚಂದ್ರಶೇಖರ್ ಈ ರೀತಿ ಬರೆದಿದ್ದಾರೆ.

ಪ್ರಧಾನಿ ಮೋದಿಯನ್ನು ದ್ವೇಷಿಸುವ ಕಾರಣದಿಂದಲೇ ಕಾಂಗ್ರೆಸ್,ಡಿಎಂಕೆ ಜತೆಯಾಗಿದೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್
ರಾಜೀವ್ ಚಂದ್ರಶೇಖರ್
Follow us
ರಶ್ಮಿ ಕಲ್ಲಕಟ್ಟ
|

Updated on:Aug 04, 2023 | 4:14 PM

ದೆಹಲಿ  ಆಗಸ್ಟ್ 04:  I.N.D.I.A ಮೈತ್ರಿಕೂಟದಲ್ಲಿನ ವಂಶಾಡಳಿತ ಪಕ್ಷಗಳಾದ ಕಾಂಗ್ರೆಸ್ (Congress) ಮತ್ತು ಡಿಎಂಕೆ (DMK) ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ದ್ವೇಷಿಸುವ ಕಾರಣದಿಂದಲೇ ಜತೆಯಾಗಿದ್ದಾರೆ. ಅವರಿಗೆ ವಿವಾದವನ್ನು ಪರಿಹರಿಸಲು ಸಾಧ್ಯವಾಗದೇ ಇರುವ ಕಾರಣ ತಮ್ಮ ವಂಶಾಡಳಿತವನ್ನು ರಕ್ಷಿಸುವುದಕ್ಕಾಗಿ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜನರ ಸಮಸ್ಯೆಗಳನ್ನು ಅವರು ಪರಿಹರಿಸಬಲ್ಲರು ಎಂದು ಮತದಾರರು ನಂಬುವಂತೆ ಇವರು ಬಯಸುತ್ತಾರೆ. ಆದರೆ ಈ ಜೋಕರ್​​ಗಳಿಗೆ ಅವರ ಸಮಸ್ಯೆಗಳನ್ನೇ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರಿನ ಬಾಕಿ ಹಂಚಿಕೆಗೆ ಕರ್ನಾಟಕಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಕುರುವಾಯಿ ಭತ್ತದ ಬೆಳೆಯನ್ನು ಉಳಿಸುವಲ್ಲಿ ಕಾವೇರಿ ಡೆಲ್ಟಾದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ಪತ್ರಕರ್ತ ವಿಜಯ್ ಕುಮಾರ್ ಎಸ್ ಅವರ ಟ್ವೀಟ್ ನ್ನು ರಾಜೀವ್ ಚಂದ್ರಶೇಖರ್ ರೀಟ್ವೀಟ್ ಮಾಡಿದ್ದಾರೆ.

ನಿಗದಿತ ಅವಧಿಯಂತೆ ರಾಜ್ಯಕ್ಕೆ ನೀಡಬೇಕಾದ ಕಾವೇರಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಮತ್ತು 28.8 ಸಾವಿರ ಮಿಲಿಯನ್ ಟಿಎಂಸಿ ಅಡಿ ಕೊರತೆಯನ್ನು ತೆರವುಗೊಳಿಸಲು ಕರ್ನಾಟಕಕ್ಕೆ ಸಲಹೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರಧಾನಿಗೆ ಸ್ಟಾಲಿನ್ ಬರೆದ ಪತ್ರದಲ್ಲೇನಿದೆ?

ಮೋದಿಗೆ ಪತ್ರ ಬರೆದಿರುವ ಸ್ಟಾಲಿನ್, ಕರ್ನಾಟಕವು ತಮಿಳುನಾಡಿಗೆ ನೀಡಬೇಕಾದ ನೀರಿನ ಪಾಲನ್ನು ಅಂತಾರಾಜ್ಯ ಗಡಿಯಲ್ಲಿರುವ ಬಿಲ್ಲಿಗುಂಡುಲು ಎಂಬಲ್ಲಿ ಮಾಸಿಕ ವೇಳಾಪಟ್ಟಿಯಂತೆ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ದುರದೃಷ್ಟವಶಾತ್, ಕರ್ನಾಟಕವು ಆದೇಶವನ್ನು ಗೌರವಿಸುತ್ತಿಲ್ಲ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ನಿರ್ದೇಶನಗಳನ್ನು ಅನುಸರಿಸುತ್ತಿಲ್ಲ.

ಪ್ರಸಕ್ತ 2023-2024ರ ಜಲ ವರ್ಷದಲ್ಲಿ ಕರ್ನಾಟಕವು 2023ರ ಜೂನ್ 1 ರಿಂದ ಜುಲೈ 31 ರವರೆಗೆ ಬಿಳಿಗುಂಡಲ 40.4 ಟಿಎಂಸಿ ಅಡಿ ನೀರು ಹರಿಸಬೇಕಿದ್ದಲ್ಲಿ ಕೇವಲ 11.6 ಟಿಎಂಸಿ ಅಡಿ ನೀರನ್ನು ಮಾತ್ರ ಬಿಡುಗಡೆ ಮಾಡಿದೆ. ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ 91 ಟಿಎಂಸಿ ಅಡಿಗಳ ಒಟ್ಟು ಸಂಗ್ರಹವನ್ನು ಹೊಂದಿದ್ದರೂ, ಅವುಗಳ ಸಂಪೂರ್ಣ ಸಂಗ್ರಹಣಾ ಸಾಮರ್ಥ್ಯದ 114.6 ಟಿಎಂಸಿ ಅಡಿಗಳ ವಿರುದ್ಧ 28.8 ಟಿಎಂಸಿ ಅಡಿಗಳಷ್ಟು ದೊಡ್ಡ ಕೊರತೆಯನ್ನು ತಮಿಳುನಾಡಿನ ಮೇಲೆ ಹೇರಲಾಗಿದೆ.

ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಶಿಕ್ಷೆಗೆ ಮಧ್ಯಂತರ ತಡೆ ನೀಡಿದ ಸುಪ್ರೀಂಕೋರ್ಟ್

ಮತ್ತೊಂದೆಡೆ ಕಾವೇರಿ ಡೆಲ್ಟಾದ ಜೀವನಾಡಿಯಾಗಿರುವ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 2023 ರ ಆಗಸ್ಟ್ 2 ರಂತೆ ಕೇವಲ 26.6 ಟಿಎಂಸಿ ಅಡಿಗಳಷ್ಟು ಶೇಖರಣಾ ಸ್ಥಾನವನ್ನು ಹೊಂದಿದೆ. ಕುಡಿಯುವ ನೀರು ಮತ್ತು ಇತರ ಅಗತ್ಯದ ನೀರು ಒದಗಿಸಿದ ನಂತರ, ಲಭ್ಯವಿರುವ ನೀರು ಕುರುವಾಯಿ (ಅಲ್ಪಾವಧಿಯ) ಬೆಳೆಗೆ ಬಳಸಬಹುದು. 15 ದಿನಗಳ ಬೆಳೆ ಎಂದು ಕೇಳುವ ಕುರುವಾಯಿ ಪಕ್ವತೆಗಾಗಿ 45ದಿನ ಮತ್ತಷ್ಟು ನೀರು ಬೇಕಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Fri, 4 August 23