ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎನ್ನಬೇಡಿ ‘ಘಮಂಡಿಯಾ‘ ಎಂದು ಕರೆಯಿರಿ: ನರೇಂದ್ರ ಮೋದಿ
ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ಕರೆಯಬೇಡಿ ಬದಲಾಗಿ ಘಮಂಡಿಯಾ ಎಂದು ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಮಾತಿನ ಛಾಟಿ ಬೀಸಿದ್ದಾರೆ.
ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ(INDIA) ಎಂದು ಕರೆಯಬೇಡಿ ಬದಲಾಗಿ ‘ಘಮಂಡಿಯಾ’ ಎಂದು ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ವಿಪಕ್ಷಗಳ ವಿರುದ್ಧ ಮಾತಿನ ಛಾಟಿ ಬೀಸಿದ್ದಾರೆ. ಹಿಂದಿಯಲ್ಲಿ ಘಮಂಡ್ ಎಂದರೆ ಅಹಂಕಾರ ಎಂದರ್ಥ. ಇತ್ತೀಚಿನ ದಿನಗಳಲ್ಲಿ ವಿಪಕ್ಷಗಳು ತಮ್ಮ ಒಕ್ಕೂಟವನ್ನು ಇಂಡಿಯಾ ಎಂದು ಕರೆದುಕೊಳ್ಳುತ್ತಿರುವುದಕ್ಕೆ ಪದೇ ಪದೇ ಪ್ರಧಾನಿ ಮೋದಿ ಕಿಡಿಕಾರುತ್ತಲೇ ಇದ್ದಾರೆ.
ವಿಶೇಷವಾಗಿ ಕಾಂಗ್ರೆಸ್, ಹಿಂದಿನ ಯುಪಿಎ ಅಥವಾ ಯುನೈಟೆಡ್ ಪ್ರೋಗ್ರೆಸ್ಸೀವ್ ಅಲೈಯನ್ಸ್ ಎಂದು ಹಿಂದಿನ ದಾಖಲೆಗೆ ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿವೆ.
ಇಂಡಿಯಾ ಎಂದು ಕರೆದುಕೊಳ್ಳುವುದು ದೇಶಪ್ರೇಮದಿಂದಲ್ಲ ದೇಶವನ್ನು ದೋಚುವ ಉದ್ದೇಶದಿಂದ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ಯೋಜನೆಗಳನ್ನು ಎನ್‌ಡಿಎ ಸರ್ಕಾರದ ಯೋಜನೆಗಳು ಎಂದು ವಿವರಿಸಲು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು ಮತ್ತು ಎನ್‌ಡಿಎ ಮಾತ್ರ ಸ್ಥಿರ ಸರ್ಕಾರವನ್ನು ನೀಡುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಸೂಚಿಸಿದ್ದಾರೆ.
ಮತ್ತಷ್ಟು ಓದಿ: ಇಂಡಿಯಾ ವಿಪಕ್ಷಗಳ ಮೈತ್ರಿಕೂಟದ ವಿರುದ್ಧದ ಅಮಿತ್ ಶಾ ಆರೋಪಗಳಿಗೆ ಉತ್ತರಕೊಟ್ಟ ಮಮತಾ ಬ್ಯಾನರ್ಜಿ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಲ್ಲೇಖಿಸಿದ ಮಾತನಾಡಿರುವ ಮೋದಿ, ನಿತೀಶ್ ಕುಮಾರ್ ಅವರು ಕಡಿಮೆ ಸ್ಥಾನ ಗಳಿಸಿದ್ದರು, ಮುಖ್ಯಮಂತ್ರಿಯಾಗಲೂ ಅರ್ಹರಿರಲಿಲ್ಲ ಆದರೂ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಇದು ಎನ್ಡಿಎಯ ತ್ಯಾಗದ ಮನೋಭಾವ. ಅಟಲ್ ಬಿಹಾರಿ ವಾಜಪೇಯಿ ಹಾಗೂ ಸುಶ್ಮಾ ಸ್ವರಾಜ್ ಅವರ ವಾಕ್ಚಾತುರ್ಯದ ಕುರಿತು ಮಾತನಾಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ