ಭಾರತ ಸರ್ಕಾರ ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ನಿರ್ಬಂಧ ಹೇರಿದ್ದೇಕೆ?: ಸದ್ಯದಲ್ಲೇ ಲ್ಯಾಪ್‌ಟಾಪ್‌ಗಳ ಬೆಲೆ ಹೆಚ್ಚಳ?

ದಿಢೀರ್ ಆಗಿ ಭಾರತ ಸರ್ಕಾರ ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ನಿರ್ಬಂಧ ಹೇರಲು ವಿವಿಧ ಕಾರಣಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿ ಮುಖ್ಯ ಕಾರಣ ನಾಗರಿಕರ ಸುರಕ್ಷತೆಯನ್ನು ರಕ್ಷಿಸುವುದಾಗಿದೆ ಎಂದಿದ್ದಾರೆ.

ಭಾರತ ಸರ್ಕಾರ ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ನಿರ್ಬಂಧ ಹೇರಿದ್ದೇಕೆ?: ಸದ್ಯದಲ್ಲೇ ಲ್ಯಾಪ್‌ಟಾಪ್‌ಗಳ ಬೆಲೆ ಹೆಚ್ಚಳ?
Laptops
Follow us
Vinay Bhat
|

Updated on: Aug 04, 2023 | 12:14 PM

ಭದ್ರತಾ ಕಾರಣಗಳಿಗಾಗಿ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು (Central government) ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕೆಲ ಕಂಪ್ಯೂಟರ್‌ಗಳ (Computer) ಆಮದಿನ ಮೇಲೆ ತತ್‌ಕ್ಷಣಕ್ಕೆ ಅನ್ವಯವಾಗುವಂತೆ ನಿರ್ಬಂಧಗಳನ್ನು ವಿಧಿಸಿದೆ. ಇದರಿಂದಾಗಿ ಚೀನಾ (China) ಮತ್ತು ಕೊರಿಯಾದಂತಹ ದೇಶಗಳಿಂದ ಒಳಬರುವ ಸರಕುಗಳ ಸಾಗಣೆಯನ್ನು ಮೊಟಕುಗೊಳಿಸುತ್ತದೆ ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ಈ ವಸ್ತುಗಳ ಆಮದುದಾರರು ತಮ್ಮ ಒಳಬರುವ ಸಾಗಣೆಗೆ ಸರ್ಕಾರದಿಂದ ಅನುಮತಿ ಅಥವಾ ಪರವಾನಗಿಯನ್ನು ಪಡೆಯಬೇಕಾಗುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ಭಾರತ ಏಕೆ ನಿರ್ಬಂಧ ವಿಧಿಸಿದೆ?:

ದಿಢೀರ್ ಆಗಿ ಈರೀತಿಯ ನಿರ್ಬಂಧ ಹೇರಲು ವಿವಿಧ ಕಾರಣಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಲ್ಲಿ ಮುಖ್ಯ ಕಾರಣ ನಾಗರಿಕರ ಸುರಕ್ಷತೆಯನ್ನು ರಕ್ಷಿಸುವುದಾಗಿದೆ ಎಂದಿದ್ದಾರೆ. “ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ. ನಮ್ಮದು ಆಮದುಗಳನ್ನು ನಿಷೇಧಿಸುವ ಆಲೋಚನೆಯಲ್ಲ. ಈ ಸರಕುಗಳ ಒಳಬರುವ ಸಾಗಣೆಯನ್ನು ನಿಯಂತ್ರಿಸುವುದು ನಮ್ಮ ಉದ್ದೇಶ. ಸರ್ಕಾರದ ಮುಖ್ಯ ಆದ್ಯತೆ ಸುರಕ್ಷತೆ ಆಗಿದೆ. ಮತ್ತು ಈ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯುಟಿಒ) ನಿಯಮಗಳಿಗೆ ಅನುಸಾರವಾಗಿದೆ,” ಎಂದು ಹೇಳಿದರು.

HP Dragonfly G4: ಹೈಬ್ರಿಡ್ ಕೆಲಸದ ಅನುಭವಕ್ಕಾಗಿ ಎಚ್​ಪಿಯಿಂದ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್​ಟಾಪ್ ಬಿಡುಗಡೆ

ಇದನ್ನೂ ಓದಿ
Image
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿ
Image
Redmi 12 4G: ಶಓಮಿ ರೆಡ್ಮಿ ಹೊಸ ಫೋನ್ ಬೆಲೆ ₹8,999! ಬೆಸ್ಟ್ ಆಫರ್ ಇಲ್ಲಿದೆ..
Image
Redmi SonicBass: ಶಓಮಿ ರೆಡ್ಮಿ ಹೊಸ ವೈರ್​ಲೆಸ್ ನೆಕ್​ಬ್ಯಾಂಡ್ ಬಿಡುಗಡೆ
Image
Amazon Great Freedom Festival sale: ಅಮೆಜಾನ್​ನಲ್ಲಿ ಶುರುವಾಗಿದೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್: ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

“ದೇಶದಲ್ಲಿ ಇಂಟರ್ನೆಟ್ ಇಂದು ದೊಡ್ಡ ರೀತಿಯಲ್ಲಿ ವ್ಯಾಪಿಸಿದೆ. ಈರೀತಿಯ ಸಂದರ್ಭದಲ್ಲಿ ಭದ್ರತಾ ಅಪಾಯಗಳನ್ನು ಹೊಂದಿರುವ ಯಂತ್ರಗಳು ಅಥವಾ ಉಪಕರಣಗಳು ಕೂಡ ಹೆಚ್ಚಾಗುತ್ತವೆ. ಕೆಲವು ಹಾರ್ಡ್‌ವೇರ್‌ಗಳು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು ಮತ್ತು ಸೂಕ್ಷ್ಮ ಅಥವಾ ವೈಯಕ್ತಿಕ ಡೇಟಾವನ್ನು ಕದಿಯಬಹುದು. ನಾವು ಅಂತಹ ಕೆಲವು ಸರಕುಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ,” ಎಂದು ಅವರು ಹೇಳಿದರು.

ಆಮದುದಾರರು ಆಗಸ್ಟ್ 4 ರಿಂದ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಪರವಾನಗಿ ಪಡೆಯಲು ವ್ಯಾಪಾರಿ ನಿಯಮಿತ ಆಮದುದಾರರಾಗಿರಬೇಕು.

ಇದು ಲ್ಯಾಪ್‌ಟಾಪ್‌ಗಳ ದೇಶೀಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆಯೇ?:

ಒಂದು ವೇಳೆ ಈ ಕ್ರಮವು ದೇಶೀಯ ಬೆಲೆಗಳ ಮೇಲೆ ಪರಿಣಾಮ ಬೀರಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ, ಅಧಿಕಾರಿ “ಇಲ್ಲ” ಎಂದು ಹೇಳಿದ್ದಾರೆ. ಆದಾಗ್ಯೂ, ಉದ್ಯಮದ ತಜ್ಞರು ಹೇಳುವ ಪ್ರಕಾರ, ಈ ಬೆಳವಣಿಗೆ ಸದ್ಯದಲ್ಲೇ ಲ್ಯಾಪ್​ಟಾಪ್​ಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದಿದ್ದಾರೆ.

ಲ್ಯಾಪ್‌ಟಾಪ್‌ಗಳ ಮೇಲಿನ ಆಮದು ನಿರ್ಬಂಧ ಯಾವರೀತಿ ಪರಿಣಾಮ ಬೀರುತ್ತೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಆ್ಯಪಲ್ ಮತ್ತು ಲೆನೊವೊದಂತಹ ಕಂಪನಿಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿರುವ ಲ್ಯಾಪ್‌ಟಾಪ್‌ಗಳ ಬೆಲೆಯನ್ನು ಬದಲಾಯಿಸದಿದ್ದರೂ, ಆಮದು ನಿರ್ಬಂಧವು ಚಿಲ್ಲರೆ ವ್ಯಾಪಾರಿಗಳು ಮತ್ತು ಕಂಪನಿಗಳು ಕಾಲಕಾಲಕ್ಕೆ ನೀಡುವ ಮಾರಾಟ ಮತ್ತು ರಿಯಾಯಿತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಲ್ಯಾಪ್​ಟಾಪ್​ಗಳಿಗೆ ಬೇಡಿಕೆ ಹೆಚ್ಚಾದರೆ, ಇದರ ಮೇಲೆ ಯಾವುದೇ ರಿಯಾಯಿತಿ ಕೂಡ ಇರುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ