HP Dragonfly G4: ಹೈಬ್ರಿಡ್ ಕೆಲಸದ ಅನುಭವಕ್ಕಾಗಿ ಎಚ್​ಪಿಯಿಂದ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್​ಟಾಪ್ ಬಿಡುಗಡೆ

ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್​ಟಾಪ್ 5MP ಕ್ಯಾಮೆರಾದ 88 ಫೀಲ್ಡ್-ಆಫ್-ವ್ಯೂ ಜೊತೆಗೆ ವಿಶಾಲವಾದ ಶಾಟ್ (ದೃಶ್ಯ)ಗಳನ್ನು ಸೆರೆಹಿಡಿಯಬಹುದಾಗಿದೆ. ಅದೇ ರೀತಿ ನ್ಯಾಚುರಲ್ ಟೋನ್ ತಂತ್ರಜ್ಞಾನ ಇರುವುದರಿಂದ ಯಾವುದೇ ಬೆಳಕಿನಲ್ಲಿ ಉತ್ತಮವಾಗಿ ಕಾಣುವಂತೆ ಮಾಡುತ್ತದೆ.

HP Dragonfly G4: ಹೈಬ್ರಿಡ್ ಕೆಲಸದ ಅನುಭವಕ್ಕಾಗಿ ಎಚ್​ಪಿಯಿಂದ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್​ಟಾಪ್ ಬಿಡುಗಡೆ
hp dragonfly g4 laptop
Follow us
Vinay Bhat
|

Updated on: Aug 03, 2023 | 3:47 PM

ಎಚ್ ಪಿ (HP) ಇಂದು ಹೈಬ್ರೀಡ್ ಕಾರ್ಯ ನಿರ್ವಹಣೆಯ ವಾತಾವರಣದಲ್ಲಿ ಕೆಲಸ ಮಾಡುವ ಪ್ರೀಮಿಯಂ ಬಳಕೆದಾರ ಅನುಭವವನ್ನು ನೀಡುವ ಎಚ್ ಪಿ ಡ್ರ್ಯಾಗನ್ ಫ್ಲೈ ಜಿ4 (HP Dragonfly G4) ಲ್ಯಾಪ್​ಟಾಪ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 1 ಕೆಜಿಗಿಂತಲೂ ಕಡಿಮೆ ತೂಕದ ಈ ಹೊಸ ಡ್ರ್ಯಾಗನ್ ಫ್ಲೈ ಲ್ಯಾಪ್​ಟಾಪ್​ಗಳು (Laptop) 13 ನೇ ಪೀಳಿಗೆಯ ಇಂಟೆಲ್® ಕೋರ್™ ಪ್ರೊಸೆಸರ್ ನಿಂದ ಚಾಲಿತವಾಗಲಿವೆ. ಈ ಮೂಲಕ ಮೊಬೈಲ್ ಟೆಕ್-ಫಾರ್ವರ್ಡ್ ನಾಯಕರ ಅಗತ್ಯತೆಗಳನ್ನು ಪೂರೈಸಲಿದೆ. ಎಚ್ ಪಿ ಡ್ರ್ಯಾಗನ್ ಫ್ಲೈ ಜಿ4 ಉತ್ಪಾದಕತೆ, ಸಹಯೋಗ, ಭದ್ರತೆ ಮತ್ತು ಸುಸ್ಥಿರತೆಗೆ ಆದ್ಯತೆ ನೀಡುತ್ತದೆ. ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಬ್ಯುಸಿನೆಸ್ ಲ್ಯಾಪ್ ಟಾಪ್ ಗಳಿಗೆ ಹೊಸ ಮಾನದಂಡವನ್ನು ಹೊಂದಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ.

ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾದ ಹಿರಿಯ ನಿರ್ದೇಶಕ (ಪರ್ಸನಲ್ ಸಿಸ್ಟಮ್ಸ್) ವಿಕ್ರಂ ಬೇಡಿ ಅವರು, ಹೈಬ್ರಿಡ್ ಕಾರ್ಯಶೈಲಿಯು ಭಾರತದಲ್ಲಿ ವಾಸ್ತವ ರೂಪದಲ್ಲಿದೆ. ಕಾರ್ಯನಿರ್ವಹಣೆ ಮತ್ತು ಸಮಯದ ಅಂತರವನ್ನು ಕಡಿಮೆಗೊಳಿಸುವ ಅವಕಾಶಗಳನ್ನು ಗುರುತಿಸಿ ಎಚ್ ಪಿ ಭಾರತದ ಮಾರುಕಟ್ಟೆಯ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಹೊಸ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲೂ, ಯಾವುದೇ ಹೈಬ್ರಿಡ್ ಕೆಲಸಗಳ ಪರಿಹಾರಗಳನ್ನು ನೀಡುವುದರೊಂದಿಗೆ ತಡೆರಹಿತ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ನಾವೀನ್ಯತೆಯನ್ನು ನೀಡುತ್ತಾ ಬರುತ್ತಿದೆ.’’ ಎಂದರು.

Lava Yuva 2: ಕೇವಲ 6,999 ರೂ. ಗೆ ಬಿಡುಗಡೆ ಆಗಿದೆ ನಮ್ಮ ಭಾರತದ ಸ್ಮಾರ್ಟ್​ಫೋನ್: ಯಾವುದು ನೋಡಿ

ಇದನ್ನೂ ಓದಿ
Image
Amazon Great Freedom Festival sale: ಪ್ರೈಮ್ ಬಳಕೆದಾರರಿಗೆ ಅಮೆಜಾನ್ ಗ್ರೇಡ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭ: ಈ ಫೋನ್ ಮೇಲೆ ಭರ್ಜರಿ ಆಫರ್
Image
Infinix GT 10 Pro: 108MP ಕ್ಯಾಮೆರಾದ ಇನ್ಫಿನಿಕ್ಸ್ GT 10 ಪ್ರೊ ಬಿಡುಗಡೆ: ಬ್ಯಾಕ್ ಪ್ಯಾನೆಲ್ ಕಂಡು ಟೆಕ್ ಜಗತ್ತು ಶಾಕ್
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸಿದಾಗ ‘ಚಾರ್ಜ್ ಫುಲ್ ಮಾಡಿ ಉಪಯೋಗಿಸಿ’ ಎಂದು ಹೇಳುತ್ತಾರೆ: ಯಾಕೆ ಗೊತ್ತೇ?
Image
Independence Day sale: ಭರ್ಜರಿ ಸೇಲ್ ಕಾಣುತ್ತಿರುವ ಹೊಸ ನಥಿಂಗ್ ಫೋನ್ 2 ಮೇಲೆ ಬಂಪರ್ ಡಿಸ್ಕೌಂಟ್
  • ಅತ್ಯಂತ ಹಗುರ ಮತ್ತು ಪೋರ್ಟಬಲ್, 1 ಕೆಜಿಗಿಂತ ಕಡಿಮೆ ತೂಕ
  • ನ್ಯಾಚುರಲ್ ಸಿಲ್ವರ್ ಅಥವಾ ಸ್ಲೇಟ್ ಬ್ಲೂ ಬಣ್ಣಗಳಲ್ಲಿ ಸ್ಟೈಲಿಶ್ ಆದ ಲ್ಯಾಪ್​ಟಾಪ್​ ಲಭ್ಯ
  • ಟಚ್ ಸ್ಕ್ರೀನ್ ವೈಶಿಷ್ಟ್ಯತೆಯೊಂದಿಗೆ ಸುಧಾರಿತ ನ್ಯಾವಿಗೇಶನ್
  • ಎಚ್ ಪಿ ಶ್ಯೂರ್ ವ್ಯೂ ಕೀ, ಹೊಂದಾಣಿಕೆ ಮಾಡಬಹುದಾದ ಬ್ಯಾಕ್ ಲೈಟ್ ಹೊಳಪು ಮತ್ತು ದೊಡ್ಡ ಟಚ್ ಪ್ಯಾಡ್​ನೊಂದಿಗೆ ಕಸ್ಟಮೈಸ್ಡ್ ಕೀಬೋರ್ಡ್​ಗಳ ಆಯ್ಕೆಗಳು
  • ಸ್ವಚ್ಛ ಮತ್ತು ಸರಳ ಪೋರ್ಟ್ ಕಾನ್ಫಿಗರೇಶನ್
  • ಟಾಪ್ ಕವರ್, ಪಾಮ್ ರೆಸ್ಟ್ ಕವರ್ ಮತ್ತು ಬಾಟಂ ಕವರ್​ನಲ್ಲಿ ಶೇ. 90 ರಷ್ಟು ಮರುಬಳಕೆಯ ಮೆಗ್ನೀಸಿಯಂ ಹಾಗೂ ಶೇ. 100 ರಷ್ಟು ಸುಸ್ಥಿರವಾದ ಔಟರ್ ಬಾಕ್ಸ್ ಮತ್ತು ಪ್ಯಾಕೇಜಿಂಗ್
  • 5MP ಕ್ಯಾಮೆರಾದ 88 ಫೀಲ್ಡ್-ಆಫ್-ವ್ಯೂ ಜೊತೆಗೆ ವಿಶಾಲವಾದ ಶಾಟ್ (ದೃಶ್ಯ)ಗಳನ್ನು ಸೆರೆಹಿಡಿಯಬಹುದಾಗಿದೆ. ಅದೇ ರೀತಿ ನ್ಯಾಚುರಲ್ ಟೋನ್ ತಂತ್ರಜ್ಞಾನ ಇರುವುದರಿಂದ ಯಾವುದೇ ಬೆಳಕಿನಲ್ಲಿ ಉತ್ತಮವಾಗಿ ಕಾಣುವಂತೆ ಮಾಡುತ್ತದೆ.
  • ಹೊಂದಾಣಿಕೆಯ ಬ್ಯಾಕ್ ಗ್ರೌಂಡ್ ಬ್ಲರ್ ನೊಂದಿಗೆ ಚಿತ್ರಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಅವಕಾಶ
  • ಮಲ್ಟಿ-ಕ್ಯಾಮೆರಾ ಅನುಭವ, ಡ್ಯುಯೆಲ್ ವಿಡಿಯೋ ಸ್ಟ್ರೀಮ್ ಮತ್ತು ಕ್ಯಾಮೆರಾ ಸ್ವಿಚಿಂಗ್​ಗೆ ಬೆಂಬಲ ನೀಡುತ್ತದೆ
  • ಆಟೋ ಕ್ಯಾಮೆರಾ ಸೆಲೆಕ್ಟ್ ಬಳಕೆದಾರರ ಮುಖವನ್ನು ಅತ್ಯಂತ ಚಾಕಚಕ್ಯತೆಯಿಂದ ಟ್ರ್ಯಾಕ್ ಮಾಡುತ್ತದೆ ಮತ್ತು ಯಾವುದೇ ಅಡ್ಡಿ ಇಲ್ಲದೇ ವಿಡಿಯೋ ಅನುಭವವನ್ನು ನೀಡಲು ಸೂಕ್ತವಾದ ಕ್ಯಾಮೆರಾವನ್ನು ಆಯ್ಕೆ ಮಾಡಿಕೊಳ್ಳುವ ವೈಶಿಷ್ಟ್ಯತೆಯನ್ನು ಹೊಂದಿದೆ
  • ಎಚ್ ಪಿ ಕೀಸ್ಟೋನ್ ಕರೆಕ್ಷನ್ ನೊಂದಿಗೆ ವೈಟ್ ಬೋರ್ಡ್​ಗಳು ಅಥವಾ ಭೌತಿಕ ದಾಖಲೆಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು
  • ಎಚ್ ಪಿ ಬೀ ರೈಟ್ ಬ್ಯಾಕ್ ಅನ್ನು ಬಳಸಿಕೊಂಡು ಮೀಟಿಂಗ್​ಗಳಿಗೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದ ರೀತಿಯಲ್ಲಿ ವಿರಾಮ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನಿಮ್ಮ ವಿಡಿಯೋ ಫೀಡ್ ಅನ್ನು ಸ್ಟಿಲ್ ಪಿಕ್ಚರ್ ಆಗಿ ಬದಲಾಯಿಸಿಕೊಳ್ಳಬಹುದು
  • ಬ್ಯಾಂಗ್ & ಒಲುಫ್ಸೆನ್ ಜೊತೆಗೆ ಪ್ರೀಮಿಯಂ ಆಡಿಯೋದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದಾಗಿದೆ
  • 3 ಮೀಟರ್ ವ್ಯಾಪ್ತಿಯಲ್ಲಿ ಎಚ್ ಪಿ ಎಐ-ಆಧಾರಿತ ನಾಯ್ಸ್ ರಿಡಕ್ಷನ್ ಮತ್ತು ಡೈನಾಮಿಕ್ ವಾಯ್ಸ್ ಲೆವೆಲ್ಲಿಂಗ್ ನೊಂದಿಗೆ ವಾಯ್ಸ್ ಸ್ಪಷ್ಟತೆಯನ್ನು ಗರಿಷ್ಠಗೊಳಿಸುತ್ತದೆ
  • ತಡೆರಹಿತವಾದ ಮಲ್ಟಿ ಟಾಸ್ಕಿಂಗ್ ಮತ್ತು ಉತ್ಪಾದಕತೆಗಾಗಿ ಐಚ್ಛಿಕವಾದ vPro®2 ಮತ್ತು Windows 11 Pro[i] ಜೊತೆಗೆ Core™ i7ವರೆಗೆ 13 ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ನೊಂದಿಗೆ ಶಕ್ತಿಯುತವಾದ ಕಾರ್ಯಕ್ಷಮತೆಯನ್ನು ಹೊಂದಿದೆ
  • ಎಚ್ ಪಿ ಸ್ಮಾರ್ಟ್ ಸೆನ್ಸ್ ಮತ್ತು ಸಿಸ್ಟಂನ ನಿಯಂತ್ರಣದೊಂದಿಗೆ ಪಿಸಿಯ ಕಾರ್ಯಕ್ಷಮತೆಯನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು
  • ಇಂಟಲಿಜೆಂಟ್ ಹೈಬರ್ನೇಟ್ ಮತ್ತು ಒಎಲ್ಇಡಿ ಪವರ್ ಸೇವಿಂಗ್ ಮೋಡ್ ನೊಂದಿಗೆ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು
  • ಎಚ್ ಪಿ ಆಟೋ ಲಾಕ್ ಮತ್ತು ಅವೇಕ್ ಜೊತೆಗೆ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಮತ್ತು ಎಚ್ ಪಿ ಕಾಂಟೆಕ್ಸ್ಟ್ ಅವೇರ್ ಜೊತೆಗೆ ವೈಯಕ್ತೀಕರಿಸಿದ ಪಿಸಿ ಅನುಭವವನ್ನು ಪಡೆಯಬಹುದು
  • ಎಚ್ ಪಿ ವೂಲ್ಫ್ ಸೆಕ್ಯುರಿಟಿಯಿಂದ ಎಚ್ ಪಿ ಶ್ಯೂರ್ ಸ್ಟಾರ್ಟ್ ಅನ್ನು ಸೆಲ್ಫ್ ಹೀಲಿಂಗ್ ಬಿಐಒಎಸ್ ಗೆ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ. ಇದಲ್ಲದೇ, ಐಟಿ ಇಂಟರ್ ವೆನ್ಷನ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೇ ತ್ವರಿತವಾಗಿ ಒಎಸ್ ಪಡೆದುಕೊಳ್ಳಲು ಎಚ್ ಪಿ ಶ್ಯೂರ್ ರಿಕವರ್ ಜೆನ್4 ಸಹಾಯ ಮಾಡಲಿದೆ.

ಬೆಲೆ ಮತ್ತು ಲಭ್ಯತೆ:

ಎಚ್ ಪಿ ಡ್ರ್ಯಾಗನ್ ಫ್ಲೈ ಜಿ4 ನ ಬೆಲೆ 2,20,000 ರೂಪಾಯಿಗಳಿಂದ ಆರಂಭವಾಗಲಿದ್ದು, ಎಲ್ಲಾ ಎಚ್ ಪಿ ಆನ್ ಲೈನ್ ಸ್ಟೋರ್ ಗಳು ಮತ್ತು ಎಚ್ ಪಿ ವರ್ಲ್ಡ್ ಸ್ಟೋರ್​ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ