Independence Day sale: ಭರ್ಜರಿ ಸೇಲ್ ಕಾಣುತ್ತಿರುವ ಹೊಸ ನಥಿಂಗ್ ಫೋನ್ 2 ಮೇಲೆ ಬಂಪರ್ ಡಿಸ್ಕೌಂಟ್
Nothing Phone 2: ಮಧ್ಯಮ ಬೆಲೆಗೆ ನೀವು ಒಂದೊಳ್ಳೆ ಪ್ರೀಮಿಯಂ ಅನುಭವ ನೀಡುವ ಫೋನನ್ನು ಖರೀದಿಸಬೇಕು ಎಂದಿದ್ದಲ್ಲಿ ನಥಿಂಗ್ ಫೋನ್ 2 ಅತ್ಯುತ್ತಮ ಆಯ್ಕೆ ಆಗಿದೆ. ಈ ಫೋನಿನ ಆಫರ್, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದೇಶದ ಪ್ರಸಿದ್ಧ ನಥಿಂಗ್ (Nothing) ಕಂಪನಿ ಇತ್ತೀಚೆಗಷ್ಟೆ ತನ್ನ ಎರಡನೇ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಕಂಪನಿ ಈ ಫೋನ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಣೆ ಮಾಡಿದೆ. ಇಂಡಿಪೆಂಡೆನ್ಸ್ ಡೇ ಸೇಲ್ನಲ್ಲಿ (Independence Day sale) ನಥಿಂಗ್ ಫೋನ್ 2 ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಮಧ್ಯಮ ಬೆಲೆಗೆ ನೀವು ಒಂದೊಳ್ಳೆ ಪ್ರೀಮಿಯಂ ಅನುಭವ ನೀಡುವ ಫೋನನ್ನು ಖರೀದಿಸಬೇಕು ಎಂದಿದ್ದಲ್ಲಿ ನಥಿಂಗ್ ಫೋನ್ 2 (Nothing Phone (2)) ಅತ್ಯುತ್ತಮ ಆಯ್ಕೆ ಆಗಿದೆ. ಈ ಫೋನಿನ ಆಫರ್, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನಥಿಂಗ್ ಫೋನ್ (2) ಮೂಲಬೆಲೆ 44,999 ರೂ. ರಿಂದ ಪ್ರಾರಂಭವಾಗುತ್ತದೆ, ಆದರೆ ನೀವು ರಿಯಾಯಿತಿಯ ಕೊಡುಗೆಯೊಂದಿಗೆ ಇನ್ನೂ ಕಡಿಮೆ ಬೆಲೆಗೆ ಪಡೆಯಬಹುದು. ICICI, Kotak ಮತ್ತು HDFC ಬ್ಯಾಂಕ್ ಕಾರ್ಡ್‌ಗಳಲ್ಲಿ 3,000 ಕ್ಯಾಶ್‌ಬ್ಯಾಕ್ ಕೊಡುಗೆ ಇದೆ. ಇದರಿಂದ ಬೆಲೆ 41,999 ರೂ. ಗೆ ಇಳಿಕೆಯಾಗಿದೆ. ಇದಲ್ಲದೆ, ನಥಿಂಗ್ ಫೋನ್ (2) ಗಾಗಿ ಕೆಲವು ಬಿಡಿಭಾಗಗಳನ್ನು ಸಹ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
iPhone 15 Pro: ಆ್ಯಪಲ್ ಐಫೋನ್ 15 ಪ್ರೊ ಮತ್ತಷ್ಟು ದುಬಾರಿ ಬೆಲೆ ಸಾಧ್ಯತೆ
ನಥಿಂಗ್ ಫೋನ್ ಕೇಸ್‌ಗೆ 499 ರೂಪಾಯಿ ವೆಚ್ಚವಾಗಲಿದೆ ಮತ್ತು ಚಾರ್ಜಿಂಗ್ ಅಡಾಪ್ಟರ್ (45W) ಅನ್ನು 1,999 ರೂಪಾಯಿಗಳಿಗೆ ಖರೀದಿಸಬಹುದು. ನಥಿಂಗ್ ಫೋನ್ (1) ಮತ್ತು ಫೋನ್ (2) ಖರೀದಿಸುವವರಿಗೆ, ಕಂಪನಿಯು ನಥಿಂಗ್ ಇಯರ್ (ಸ್ಟಿಕ್) TWS ಇಯರ್‌ಫೋನ್‌ಗಳನ್ನು 4,250 ರೂಪಾಯಿಗಳ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಇತರ ಗ್ರಾಹಕರು ಇದನ್ನು 4,999 ರೂಪಾಯಿಗಳ ಬೆಲೆಯಲ್ಲಿ ಪಡೆಯಬಹುದು.
ನಥಿಂಗ್ ಫೋನ್ (2) ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ಹೊಂದಿದೆ. ಇದು ಮೂರು ಪ್ರಮುಖ ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ, ಪ್ರಸ್ತುತ Android 14ನ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಬೇಕಿದೆ.
ಈ ಸಾಧನವು ವಿವಿಧ ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುವ 4,700mAh ಬ್ಯಾಟರಿಯನ್ನು ಹೊಂದಿದೆ: 45W ವೇಗದ ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಇದೆ. ಇದು 6.7-ಇಂಚಿನ ಪೂರ್ಣ-HD+ OLED ಡಿಸ್ ಪ್ಲೇಯನ್ನು ಹೊಂದಿದೆ. LTPO ಪ್ಯಾನೆಲ್ ಅನ್ನು ಒಳಗೊಂಡಿರುವ ಈ ಡಿಸ್‌ಪ್ಲಯು ರಿಫ್ರೆಶ್ ದರವನ್ನು 1Hz ನಿಂದ 120Hz ವರೆಗೆ ನೀಡಲಾಗಿದೆ.
ಕ್ಯಾಮೆರಾ ವಿಷಯಕ್ಕೆ ಬಂದರೆ, ಡ್ಯುಯಲ್ ರಿಯರ್ ಸೆಟಪ್ ಅನ್ನು ಒಳಗೊಂಡಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಅನ್ನು ಬೆಂಬಲಿಸುವ Sony IMX890 ಸಂವೇದಕದ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಸಹ ಇದೆ. ಇದು ಸ್ಯಾಮ್‌ಸಂಗ್ JN1 ಸಂವೇದಕದ EIS ಅನ್ನು ಹೊಂದಿದೆ. ಮುಂಭಾಗದಲ್ಲಿ, 32-ಮೆಗಾಪಿಕ್ಸೆಲ್ ಕ್ಯಾಮೆರಾವು ಸೆಲ್ಫಿಗಾಗಿ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ