Infinix GT 10 Pro: 108MP ಕ್ಯಾಮೆರಾದ ಇನ್ಫಿನಿಕ್ಸ್ GT 10 ಪ್ರೊ ಬಿಡುಗಡೆ: ಬ್ಯಾಕ್ ಪ್ಯಾನೆಲ್ ಕಂಡು ಟೆಕ್ ಜಗತ್ತು ಶಾಕ್
20,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಫೋನ್ನಲ್ಲಿ ಫೀಚರ್ಸ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಇನ್ಫಿನಿಕ್ಸ್ GT 10 ಪ್ರೊ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಕಳೆದ ಕೆಲವು ವಾರಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡಿದ್ದ ಇನ್ಫಿನಿಕ್ಸ್ (Infinix) ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಇನ್ಫಿನಿಕ್ಸ್ GT 10 ಪ್ರೊ (Infinix GT 10 Pro) ಇಂದು ಭಾರತದಲ್ಲಿ ಅನಾವರಣಗೊಂಡಿದೆ. ಅಂದುಕೊಂಡಂತೆ ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಫೋನಿನ ಬ್ಯಾಕ್ ಪ್ಯಾನೆಲ್ ಅದ್ಭುತವಾಗಿದ್ದು, ಸ್ಮಾರ್ಟ್ಫೋನ್ (Smartphone) ಪ್ರಿಯರು ಇದಕ್ಕೆ ಮನಸೋತಿದ್ದಾರೆ. 20,000 ರೂ. ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ನಲ್ಲಿ ಫೀಚರ್ಸ್ ಕೂಡ ಆಕರ್ಷಕವಾಗಿದೆ. ಹಾಗಾದರೆ ಇನ್ಫಿನಿಕ್ಸ್ GT 10 ಪ್ರೊ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ GT 10 ಪ್ರೊ ಬೆಲೆ ಎಷ್ಟು?:
ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್ಫೋನ್ನ ಬೇಸ್ ಮಾಡೆಲ್ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 19,999 ರೂ. ನಿಗದಿ ಮಾಡಲಾಗಿದೆ. ಇದು ಸೈಬರ್ ಬ್ಲಾಕ್ ಮತ್ತು ಮಿರಾಜ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇಂದಿನಿಂದಲೇ ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಐಸಿಐಸಿಐ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಪಾವತಿಗಳ ಮೇಲೆ 2,000 ರೂ. ಡಿಸ್ಕೌಂಟ್ ಇದೆ. ಫ್ಲಿಪ್‌ಕಾರ್ಟ್ ಆರು ತಿಂಗಳ ನೊ-ಕಾಸ್ಟ್ ಇಎಂಐ ಆಯ್ಕೆಗಳನ್ನು ಒದಗಿಸುತ್ತಿದೆ.
JioBook 2023: ಬಜೆಟ್ ದರಕ್ಕೆ ಬೆಸ್ಟ್ ರಿಲಯನ್ಸ್ ಜಿಯೋಬುಕ್ 2023
ಇನ್ಫಿನಿಕ್ಸ್ GT 10 ಪ್ರೊ ಫೀಚರ್ಸ್ ಏನಿದೆ?:
ಡ್ಯುಯಲ್ ಸಿಮ್ (ನ್ಯಾನೋ) ಹೊಂದಿರುವ ಇನ್ಫಿನಿಕ್ಸ್ GT 10 ಪ್ರೊ ಆಂಡ್ರಾಯ್ಡ್ 13 ಆಧಾರಿತ XOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎರಡು ವರ್ಷಗಳ ಭದ್ರತಾ ಅಪ್‌ಡೇಟ್ ಜೊತೆಗೆ ಆಂಡ್ರಾಐ್ಡ್ 14 ಗೆ ಅಪ್‌ಗ್ರೇಡ್ ಅನ್ನು ಸ್ವೀಕರಿಸಲು ದೃಢೀಕರಿಸಲಾಗಿದೆ. ಇದು 6.67-ಇಂಚಿನ ಪೂರ್ಣ-HD+ 10-ಬಿಟ್ AMOLED LTPS ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನು ಪಡೆದುಕೊಂಡಿದೆ.
ಇನ್ಫಿನಿಕ್ಸ್ನ ಈ ಗೇಮಿಂಗ್ ಹ್ಯಾಂಡ್‌ಸೆಟ್ ಮೀಡಿಯಾಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್ನಲ್ಲಿ ರನ್ ಆಗುತ್ತದೆ. ಇದನ್ನು 8GB LPDDR4X RAM ಮತ್ತು 256GB USF 3.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಹೆಚ್ಚುವರಿ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಲಭ್ಯವಿರುವ RAM ಅನ್ನು 16GB ವರೆಗೆ ವಿಸ್ತರಿಸಬಹುದು. ಗೇಮಿಂಗ್ ಆಡುವಾಗ ಬಿಸಿ ಆಗದಿರಲು ಡಬಲ್-ಆಕ್ಸಿಸ್ ಲೀನಿಯರ್ ಮೋಟಾರ್ ಅಳವಡಿಸಲಾಗಿದೆ. ಇದಲ್ಲದೆ, ಹ್ಯಾಂಡ್‌ಸೆಟ್ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನ ಪಕ್ಕದಲ್ಲಿ ಮಿನಿ ಎಲ್ಇಡಿ ಲೈಟ್ಗಳಿದ್ದು, ಥೇಟ್ ನಥಿಂಗ್ ಫೋನ್ ಮಾದರಿಯಲ್ಲಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇನ್ಫಿನಿಕ್ಸ್ GT 10 ಪ್ರೊ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಎರಡು 2-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಇನ್ಫಿನಿಕ್ಸ್ GT 10 ಪ್ರೊ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಇದು ಕಂಪನಿಯ ಆಂತರಿಕ ಬೈಪಾಸ್ ಚಾರ್ಜಿಂಗ್ ಮೋಡ್‌ನೊಂದಿಗೆ ಬರುತ್ತದೆ, ಇದು ಗೇಮಿಂಗ್ ಸೆಷನ್‌ಗಳಲ್ಲಿ 7 ಡಿಗ್ರಿ ಸೆಲ್ಸಿಯಸ್‌ನವರೆಗೆ ಅಧಿಕ ತಾಪವನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿದೆ.
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, NFC, 3.5mm ಆಡಿಯೋ ಜ್ಯಾಕ್, FM ರೇಡಿಯೋ, GPS, USB ಟೈಪ್-ಸಿ ಪೋರ್ಟ್, ಬ್ಲೂಟೂತ್, ಮತ್ತು Wi-Fi a/b/g/n/ac/x ಸೇರಿವೆ. ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವಿದೆ. ಇದು DTS ಆಡಿಯೋ ತಂತ್ರಜ್ಞಾನ ಮತ್ತು ಹೈ-ರೆಸ್ ಆಡಿಯೋ ಪ್ರಮಾಣೀಕರಣದ ಸ್ಟಿರಿಯೊ ಡ್ಯುಯಲ್ ಸ್ಪೀಕರ್‌ಗಳೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ