Amazon Great Freedom Festival sale: ಪ್ರೈಮ್ ಬಳಕೆದಾರರಿಗೆ ಅಮೆಜಾನ್ ಗ್ರೇಡ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭ: ಈ ಫೋನ್ ಮೇಲೆ ಭರ್ಜರಿ ಆಫರ್

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್​ನಲ್ಲಿ ಐಫೋನ್ 14, ಒನ್​ಪ್ಲಸ್ ನಾರ್ಡ್ CE 3, ಐಕ್ಯೂ ನಿಯೋ 7 ಪ್ರೊ, ಒನ್​​ಪ್ಲಸ್ 11R, ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಸೇರಿದಂತೆ ಹಲವಾರು ಫೋನ್‌ಗಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರಿಯಾಯಿತಿಗಳನ್ನು ಪಡೆದಿವೆ.

Amazon Great Freedom Festival sale: ಪ್ರೈಮ್ ಬಳಕೆದಾರರಿಗೆ ಅಮೆಜಾನ್ ಗ್ರೇಡ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭ: ಈ ಫೋನ್ ಮೇಲೆ ಭರ್ಜರಿ ಆಫರ್
Amazon Great Freedom Festival sale
Follow us
|

Updated on: Aug 03, 2023 | 2:59 PM

ಭಾರತದಲ್ಲಿ ಪ್ರೈಮ್ ಬಳಕೆದಾರರಿಗಾಗಿ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival sale) ಪ್ರಾರಂಭವಾಗಿದೆ. ಉಳಿದ ಸದಸ್ಯರಿಗೆ ಜುಲೈ 4 ರಿಂದ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಖರೀದಿಸಲು ಈ ಸೇಲ್ ಸಿಗಲಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಮೆಜಾನ್ ಈ ಮೇಳ ಹಮ್ಮಿಕೊಂಡಿದ್ದು, ಆಗಸ್ಟ್ 8ರ ವರೆಗೆ ನಡೆಯಲಿದೆ. ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ (Smartphones) ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಐಫೋನ್ 14 (iPhone 14), ಒನ್​ಪ್ಲಸ್ ನಾರ್ಡ್ CE 3, ಐಕ್ಯೂ ನಿಯೋ 7 ಪ್ರೊ, ಒನ್​​ಪ್ಲಸ್ 11R, ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಸೇರಿದಂತೆ ಹಲವಾರು ಫೋನ್‌ಗಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ರಿಯಾಯಿತಿಗಳನ್ನು ಪಡೆದಿವೆ.

ಐಫೋನ್ 14 ಪ್ರಸ್ತುತ 66,999 ರೂ. ಗೆ ಸೇಲ್ ಆಗುತ್ತಿದೆ. ಇದರ ಮೂಲ ಬೆಲೆ 79,900 ರೂ. ಆಗಿದೆ. ಬಳಕೆದಾರರು 12,901 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಬ್ಯಾಂಕ್ ಕೊಡುಗೆಯನ್ನು ಉಪಯೋಗಿಸಿದರೆ 66,249 ರೂ. ಗೆ ಖರೀದಿಸಬಹುದು. ಈ ಬೆಲೆ 128GB ಸ್ಟೋರೇಜ್ ಮಾದರಿಯದ್ದು.

AudioCraft: ಆಡಿಯೋ ಕ್ರಾಫ್ಟ್ ಎಂಬ ಹೊಸ ಓಪನ್ ಸೋರ್ಸ್ ಎಐ ಟೂಲ್ ಪರಿಚಯಿಸಿದ ಮೆಟಾ: ಏನಿದರ ಉಪಯೋಗ?

ಇದನ್ನೂ ಓದಿ
Image
Infinix GT 10 Pro: 108MP ಕ್ಯಾಮೆರಾದ ಇನ್ಫಿನಿಕ್ಸ್ GT 10 ಪ್ರೊ ಬಿಡುಗಡೆ: ಬ್ಯಾಕ್ ಪ್ಯಾನೆಲ್ ಕಂಡು ಟೆಕ್ ಜಗತ್ತು ಶಾಕ್
Image
Tech Tips: ಹೊಸ ಸ್ಮಾರ್ಟ್​ಫೋನ್ ಖರೀದಿಸಿದಾಗ ‘ಚಾರ್ಜ್ ಫುಲ್ ಮಾಡಿ ಉಪಯೋಗಿಸಿ’ ಎಂದು ಹೇಳುತ್ತಾರೆ: ಯಾಕೆ ಗೊತ್ತೇ?
Image
Independence Day sale: ಭರ್ಜರಿ ಸೇಲ್ ಕಾಣುತ್ತಿರುವ ಹೊಸ ನಥಿಂಗ್ ಫೋನ್ 2 ಮೇಲೆ ಬಂಪರ್ ಡಿಸ್ಕೌಂಟ್
Image
Lava Yuva 2: ಕೇವಲ 6,999 ರೂ. ಗೆ ಬಿಡುಗಡೆ ಆಗಿದೆ ನಮ್ಮ ಭಾರತದ ಸ್ಮಾರ್ಟ್​ಫೋನ್: ಯಾವುದು ನೋಡಿ

ಒನ್​ಪ್ಲಸ್ ನಾರ್ಡ್ CE 3 ಅನ್ನು ಇತ್ತೀಚೆಗೆ ಭಾರತದಲ್ಲಿ 26,999 ರೂ. ಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್‌ನಲ್ಲಿ 24,999 ರೂ. ಗೆ ಲಭ್ಯವಿದೆ. ರೆಡ್ಮಿ 12 5G 10,999 ರೂ. ಗೆ ಸೇಲ್ ಆಗುತ್ತಿದೆ. ಐಕ್ಯೂ ನಿಯೋ 7 ಪ್ರೊ 5G ಬೆಲೆ ರೂ. 32,499 ಆಗಿದೆ. ಐಕ್ಯೂ Z6 Lite ಅನ್ನು 13,249 ರೂ. ಗಳ ಕಡಿಮೆ ಬೆಲೆಗೆ ಖರೀದಿಸಬಹುದು.

ಇನ್ನು ಸ್ಯಾಮ್‌ಸಂಗ್ ಮೊನ್ನೆಯಷ್ಟೆ ಅನಾವರಣ ಮಾಡಿದ ತನ್ನ ಹೊಸ ಗ್ಯಾಲಕ್ಸಿ Z Fold 5 5G ಸ್ಮಾರ್ಟ್‌ಫೋನ್ 512GB ಸ್ಟೋರೇಜ್ ಮಾದರಿಗೆ 1,64,999 ರೂ. ಇದೆ. ಈ ಫೋಲ್ಡಬಲ್ ಫೋನ್ ಈಗ 1,46,999 ರೂ. ಗೆ ಖರೀದಿಸಬಹುದು. 1.30 ಲಕ್ಷಕ್ಕಿಂತ ಹೆಚ್ಚು ಹಣವನ್ನು ಫೋನ್‌ಗಾಗಿ ಖರ್ಚು ಮಾಡುವವರಿಗೆ ಇದು ಉತ್ತಮ ಆಯ್ಕೆ ಆಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G 12,490 ರೂ. ಮತ್ತು ರೆಡ್ಮಿ K50i 19,499 ರೂ. ಗೆ ಖರೀದಿಸಬಹುದು. ನೀವು 30,000 ರೂಪಾಯಿಗಿಂತ ಕಡಿಮೆ ಬಜೆಟ್ ಹೊಂದಿದ್ದರೆ, ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆ. ಇದರ ಬೆಲೆ 27,999 ರೂ. ಆದರೆ, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ 26,499 ರೂ. ಗೆ ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ