Amazon Great Freedom Festival sale: ಅಮೆಜಾನ್​ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಷ್ಟು ಡಿಸ್ಕೌಂಟ್

ಆಗಸ್ಟ್ 5 ರಿಂದ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಪ್ರಾರಂಭವಾಗುತ್ತದೆ ಎಂದು ಹೇಳಿದ್ದು, ಇದು ಐದು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 9ಕ್ಕೆ ಕೊನೆಗೊಳ್ಳಲಿದೆ. ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ಒಂದು ದಿನ ಮುಂಚಿತವಾಗಿ ಈ ಸೇಲ್​ನ ಲಾಭ ಪಡೆಯಬಹುದು.

Amazon Great Freedom Festival sale: ಅಮೆಜಾನ್​ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಷ್ಟು ಡಿಸ್ಕೌಂಟ್
Amazon Great Freedom Festival sale
Follow us
|

Updated on: Jul 28, 2023 | 11:56 AM

ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಅಮೆಜಾನ್ ಇಂಡಿಯಾ (Amazon India) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಮಾರಾಟ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival sale) ನಡೆಸುವ ಬಗ್ಗೆ ಘೋಷಣೆ ಮಾಡಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಸ್ಟ್ 5 ರಿಂದ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಪ್ರಾರಂಭವಾಗುತ್ತದೆ ಎಂದು ಹೇಳಿದ್ದು, ಇದು ಐದು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 9ಕ್ಕೆ ಕೊನೆಗೊಳ್ಳಲಿದೆ. ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಿದ್ದರೆ, ಒಂದು ದಿನ ಮುಂಚಿತವಾಗಿ ಈ ಸೇಲ್​ನ ಲಾಭ ಪಡೆಯಬಹುದು. ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್ (Smartphone) ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ.

SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಗ್ರಾಹಕರು 10 ಪ್ರತಿಶತ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮಾರಾಟದ ಟೀಸರ್ ಮೂಲಕ ಬಹಿರಂಗವಾಗಿದೆ. ಅಮೆಜಾನ್ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ತಮ ಡಿಸ್ಕೌಂಟ್​ನಲ್ಲಿ ನೀಡುವ ಭರವಸೆ ಕೊಟ್ಟಿದೆ ಅಂದರೆ ಸ್ಯಾಮ್​ಸಂಗ್, ಒನ್​ಪ್ಲಸ್, ರಿಯಲ್ ಮಿ ಮತ್ತು ವಿವಿಧ ಬ್ರಾಂಡ್‌ಗಳ ಹಲವಾರು ಸ್ಮಾರ್ಟ್​ಫೋನ್​ಗಳ ಮೇಲೆ 40 ಪ್ರತಿಶತದಷ್ಟು ರಿಯಾಯಿತಿಗಳನ್ನು ನಿರೀಕ್ಷಿಸಬಹುದು.

Tech Tips: ನಿಮ್ಮ ಸ್ಮಾರ್ಟ್​ಫೋನ್ ಹೆಚ್ಚು ಸಮಯ ಚಾರ್ಜ್ ಬರಬೇಕಾ?: ಹಾಗಿದ್ರೆ ಈ ಆ್ಯಪ್ ಇನ್​ಸ್ಟಾಲ್ ಮಾಡಿ

ಇದನ್ನೂ ಓದಿ
Image
WhatsApp Video Message: ವಾಟ್ಸ್​ಆ್ಯಪ್ ಚಾಟ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ
Image
Sony WF-1000XM5 TWS: ಸ್ಪಷ್ಟ ಮತ್ತು ಆರಾಮದಾಯಕ ಮ್ಯೂಸಿಕ್ ಆಲಿಸಲು ಬೆಸ್ಟ್ ಸೋನಿ ಬಡ್ಸ್
Image
Samsung Galaxy Z Fold 5: ಸ್ಯಾಮ್​ಸಂಗ್ ಮತ್ತೊಂದು ಫೋಲ್ಡಿಂಗ್ ಸ್ಮಾರ್ಟ್​ಫೋನ್ ಬಿಡುಗಡೆ
Image
Samsung Galaxy Z Flip 5: ಸ್ಯಾಮ್​ಸಂಗ್ ಸ್ಟೈಲಿಶ್ ಫ್ಲಿಪ್​ ಫೋನ್​ ನೋಡಿ..

ನೀವು ಲ್ಯಾಪ್‌ಟಾಪ್ ಅಥವಾ ಹೊಸ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಖರೀದಿಸಲು ಬಯಸುವವರಾಗಿದ್ದರೆ, ಇನ್ನೂ ಕೆಲವು ದಿನಗಳವರೆಗೆ ಕಾಯುವುದು ಒಳಿತು. ಯಾಕೆಂದರೆ ಅಮೆಜಾನ್​ನ ಟೀಸರ್​ನಲ್ಲಿ ಲ್ಯಾಪ್‌ಟಾಪ್‌ಗಳು, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಇರುತ್ತದೆ ಎಂದು ಹೇಳಿದೆ. ಅಮೆಜಾನ್ ಪ್ರಕಾರ, ಆ್ಯಪಲ್ ಮತ್ತು ಇತರ ಕಂಪನಿಗಳ ಟ್ಯಾಬ್ಲೆಟ್‌ಗಳ ಮೇಲೆ 50 ಪ್ರತಿಶತದಷ್ಟು ರಿಯಾಯಿತಿ ಇದೆಯಂತೆ.

ಹೆಚ್ಚುವರಿಯಾಗಿ, ಲ್ಯಾಪ್‌ಟಾಪ್‌ಗಳ ಮೇಲೆ 40,000 ರಿಯಾಯಿತಿ ಮತ್ತು ಹೆಡ್‌ಫೋನ್‌ಗಳು, ಸ್ಪೀಕರ್‌ಗಳ ಮೇಲೆ 75 ಪ್ರತಿಶತದವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇದರ ಜೊತೆಗೆ ಬ್ಯಾಂಕ್ ಕಾರ್ಡ್‌ಗಳ ಆಫರ್ ಕೂಡ ಇರಲಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಈವೆಂಟ್‌ನಲ್ಲಿ ಸ್ಮಾರ್ಟ್ ಟಿವಿಗಳು ಸಹ ಮಾರಾಟವಾಗುತ್ತವೆ ಮತ್ತು ಕೆಲವು 4K ಟಿವಿಗಳಲ್ಲಿ 60 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತದಂತೆ.

ವಾಷಿಂಗ್ ಮೆಶಿನ್, ರೆಫ್ರಿಜರೇಟರ್‌ಗಳು ಮತ್ತು ಇತರ ಉಪಕರಣಗಳು ಸಹ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತವೆ. ಗೇಮಿಂಗ್‌ಗೆ ಸಂಬಂಧಿಸಿದಂತೆ, ಸೋನಿಯ ಪ್ಲೇಸ್ಟೇಷನ್ 5 ಮತ್ತು ಇತರ ಉತ್ಪನ್ನಗಳ ಮೇಲೆ 50 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡುವುದಾಗಿ ಹೇಳಿದೆ. ಅಮೆಜಾನ್ ಇಲ್ಲಿಯವರೆಗೆ ಕಡಿಮೆ ಬೆಲೆಗೆ ಮಾರಾಟದಲ್ಲಿ ಲಭ್ಯವಿರುವ ಯಾವುದೇ ಉತ್ಪನ್ನಗಳ ನಿಖರವಾದ ಬೆಲೆಯನ್ನು ಬಹಿರಂಗಪಡಿಸಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್