WhatsApp Video Message: ವಾಟ್ಸ್ಆ್ಯಪ್ ಚಾಟ್ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ
WhatsApp New Feature: ಈ ವಿಡಿಯೋ ಮೆಸೇಜ್ ಫೀಚರ್ ಎಂಡ್-ಟು-ಎಂಡು ಎನ್ಕ್ರಿಪ್ಟೆಡ್ ಆಗಿದೆ. ಬಳಕೆದಾರ ರಿಸೀಸ್ ಮಾಡಿಕೊಂಡ ವಿಡಿಯೋ ಮೆಸೇಜ್ ಅನ್ನು ಫಾರ್ವಡ್ ಮಾಡಲು ಸಾಧ್ಯವಿಲ್ಲ.
ಮೆಟಾ (Meta) ಸಿಇಒ ಮಾರ್ಕ್ ಜುಕರ್‌ಬರ್ಗ್ ತನ್ನ ವಾಟ್ಸ್ಆ್ಯಪ್ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಫೀಚರ್ ನೀಡುವ ಬಗ್ಗೆ ಘೋಷಣೆ ಮಾಡುತ್ತಲೇ ಇರುತ್ತಾರೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾರಕ್ಕೊಂದು ಫೀಚರ್ ಬಿಡುಗಡೆ ಮಾಡುತ್ತಿರುವ ವಾಟ್ಸ್ಆ್ಯಪ್ (WhatsApp) ಇದೀಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹೊಸ ಆಯ್ಕೆ ಬಳಕೆದಾರರಿಗೆ 60 ಸೆಕೆಂಡುಗಳ ಕಿರು ವಿಡಿಯೋ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಈಗಾಗಲೇ ಈ ಫೀಚರ್ ಕೆಲ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಸಿಗುತ್ತಿದೆ. ಕೆಲವು ದಿನಗಳಲ್ಲಿ ಎಲ್ಲ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುತ್ತದಂತೆ.
“ಯಾರಿಗಾದರು ಜನ್ಮದಿನದ ಶುಭಾಶಯಗಳನ್ನು ಕೋರಬೇಕಾದರೆ, ಖುಷಿಯಲ್ಲಿ ನಗುವುದು ಅಥವಾ ಒಳ್ಳೆಯ ಸುದ್ದಿಯನ್ನು ಹೇಳಲು, ವಿಡಿಯೋ ಮೂಲಕ ಎಲ್ಲಾ ಭಾವನೆಗಳೊಂದಿಗೆ ನಿಮ್ಮ ಕ್ಷಣಗಳನ್ನು ಹಂಚಿಕೊಳ್ಳಲು ಇದು ಒಳ್ಳೆಯ ಮಾರ್ಗವಾಗಿದೆ,” ಎಂದು ವಾಟ್ಸ್ಆ್ಯಪ್ ಹೇಳಿದೆ.
Honor 90: ಭಾರತಕ್ಕೆ ಬರುತ್ತಿದೆ 200MP ಕ್ಯಾಮೆರಾದ ಮತ್ತೊಂದು ಸ್ಮಾರ್ಟ್ಫೋನ್: ಯಾವುದು?, ಬೆಲೆ ಎಷ್ಟು?
ಈ ವಿಡಿಯೋ ಮೆಸೇಜ್ ಫೀಚರ್ ಎಂಡ್-ಟು-ಎಂಡು ಎನ್ಕ್ರಿಪ್ಟೆಡ್ ಆಗಿದೆ. ಬಳಕೆದಾರ ರಿಸೀಸ್ ಮಾಡಿಕೊಂಡ ವಿಡಿಯೋ ಮೆಸೇಜ್ ಅನ್ನು ಫಾರ್ವಡ್ ಮಾಡಲು ಸಾಧ್ಯವಿಲ್ಲ. ಹಾಗೆಯೆ ಇದು ಗ್ಯಾಲರಿಯಲ್ಲಿ ಸೇವ್ ಆಗುವುದಿಲ್ಲ. ನಿಮಗೆ ಆ ವಿಡಿಯೋ ಬೇಕಿದ್ದಲ್ಲಿ ಸ್ಕ್ರೀನ್ ರೆಕಾರ್ಡ್ ಆಯ್ಕೆಯ ಮೂಲಕ ಸೇವ್ ಮಾಡಿಕೊಳ್ಳಬಹುದು.
ಸೇವ್ ಮಾಡದೆ ಅನೌನ್ ನಂಬರ್ಗೆ ಮೆಸೇಜ್ ಮಾಡಿ:
ಈ ಹಿಂದೆ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಆನೌನ್ ನಂಬರ್ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಆ ಸಂಖ್ಯೆಯನ್ನು ಕಾಂಟೆಕ್ಟ್ ಲಿಸ್ಟ್ನಲ್ಲಿ ಸೇವ್ ಮಾಡಬೇಕಿತ್ತು. ಈ ಸಮಸ್ಯೆಯನ್ನು ಮನಗಂಡು ನೂತನ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇನ್ನುಂದೆ ವಾಟ್ಸ್ಆ್ಯಪ್ನ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಆನೌನ್ ನಂಬರ್ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಎಂದಿಲ್ಲ. ಬದಲಾಗಿ ನೇರವಾಗಿ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ.
ಇದಕ್ಕಾಗಿ ನೀವು ವಾಟ್ಸ್ಆ್ಯಪ್ ತೆರೆದು ‘ಸ್ಟಾರ್ಟ್ ನ್ಯೂ ಚಾಟ್’ ಬಟನ್ ಮೇಲೆ ಟ್ಯಾಪ್ ಮಾಡಬೇಕು. ಸರ್ಚ್ ಬಾರ್ನಲ್ಲಿ ಅನೌನ್ ನಂಬರ್ ಅನ್ನು ಟೈಪ್ ಮಾಡಿದ ನಂತರ ಆ ಕಾಂಟೆಕ್ಟ್ ಅನ್ನು ಹುಡುಕಿ ಮೆಸೇಜ್ ಕಳುಹಿಸಲು ಆಯ್ಕೆ ಕೇಳುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ