WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್: ಸೇವ್ ಮಾಡದೆ ಅನೌನ್ ನಂಬರ್​ಗೆ ಮೆಸೇಜ್ ಮಾಡಿ

ಇನ್ನುಂದೆ ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಆನೌನ್ ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಎಂದಿಲ್ಲ. ಬದಲಾಗಿ ನೇರವಾಗಿ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್: ಸೇವ್ ಮಾಡದೆ ಅನೌನ್ ನಂಬರ್​ಗೆ ಮೆಸೇಜ್ ಮಾಡಿ
WhatsApp New Feature
Follow us
Vinay Bhat
|

Updated on: Jul 20, 2023 | 1:54 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ದಿನಕ್ಕೊಂದು ನೂತನ ಫೀಚರ್​ಗಳನ್ನು ಘೋಷಣೆ ಮಾಡುತ್ತಿದೆ. ಬಳಕೆದಾರರ ನೆಚ್ಚಿನ ಆ್ಯಪ್ ಆಗಿ ಗುರುತಿಸಿಕೊಂಡಿರುವ ಈ ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ಈ ಹಿಂದೆ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ (WhatsApp) ಆನೌನ್ ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಆ ಸಂಖ್ಯೆಯನ್ನು ಕಾಂಟೆಕ್ಟ್ ಲಿಸ್ಟ್​ನಲ್ಲಿ ಸೇವ್ ಮಾಡಬೇಕಿತ್ತು. ಈ ಸಮಸ್ಯೆಯನ್ನು ಮನಗಂಡು ನೂತನ ಫೀಚರ್ ಅನ್ನು ಬಿಡುಗಡೆ ಮಾಡಿದೆ.

ಇನ್ನುಂದೆ ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಆನೌನ್ ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಎಂದಿಲ್ಲ. ಬದಲಾಗಿ ನೇರವಾಗಿ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ. ಇದಕ್ಕಾಗಿ ನೀವು ವಾಟ್ಸ್​ಆ್ಯಪ್ ತೆರೆದು ‘ಸ್ಟಾರ್ಟ್ ನ್ಯೂ ಚಾಟ್’ ಬಟನ್ ಮೇಲೆ ಟ್ಯಾಪ್ ಮಾಡಬೇಕು. ಸರ್ಚ್ ಬಾರ್​ನಲ್ಲಿ ಅನೌನ್ ನಂಬರ್ ಅನ್ನು ಟೈಪ್ ಮಾಡಿದ ನಂತರ ಆ ಕಾಂಟೆಕ್ಟ್ ಅನ್ನು ಹುಡುಕಿ ಮೆಸೇಜ್ ಕಳುಹಿಸಲು ಆಯ್ಕೆ ಕೇಳುತ್ತದೆ.

Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?

ಇದನ್ನೂ ಓದಿ
Image
WhatsApp Down: ಮಧ್ಯರಾತ್ರಿ ವಾಟ್ಸ್​ಆ್ಯಪ್ ಬಳಕೆದಾರರಿಂದ ಏಕಾಏಕಿ ದೂರು: ಬೆಳಗಾಗುವಷ್ಟರಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದ ಕಂಪನಿ
Image
Netflix: ಭಾರತದ ಬಳಕೆದಾರರಿಗೆ ನೆಟ್​ಫ್ಲಿಕ್ಸ್​ನಿಂದ ಶಾಕ್: ಇನ್ನುಂದೆ ಪಾಸ್​ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ
Image
Realme C53: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ರಿಯಲ್ ಮಿ C53 ಫೋನ್: ಬೆಲೆ ಕೇವಲ …
Image
Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್​ಬುಕ್

ಹೆಚ್ಚಿನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಲಭ್ಯವಿದೆ. ನಿಮಗೆ ಸಿಗುತ್ತಿಲ್ಲ ಎಂದಾದರೆ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್​ಗೆ ತೆರಳು ವಾಟ್ಸ್​ಆ್ಯಪ್ ನೂತನ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಿ. ವಾಟ್ಸ್​ಆ್ಯಪ್ ವೈಶಿಷ್ಟ್ಯದ ಕುರಿತು ಎಲ್ಲ ಮಾಹಿತಿಯನಗನು ಹಂಚಿಕೊಳ್ಳುವ WaBetaInfo ಈ ಬಗ್ಗೆ ಮಾಹಿತಿ ನೀಡಿದೆ.

ನಿಮ್ಮ ಮೊಬೈಲ್ ನಂಬರ್ ಹೈಡ್ ಮಾಡಿ:

ವಾಟ್ಸ್​ಆ್ಯಪ್ ಸದ್ಯದಲ್ಲೇ ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್​ಮೆಂಟ್ ಗ್ರೂಪ್​ನಲ್ಲಿ ಕೊಡಲಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್​ಮೆಂಟ್ ಗ್ರೂಪ್​ನಲ್ಲಿ ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ಫೀಚರ್ ಮೂಲಕ, ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರ ಗೋಚರಿಸುತ್ತದೆ. ಗ್ರೂಪ್​ನಲ್ಲಿ ಇರುವ ಇತರೆ ಸದಸ್ಯರಿಂದ ತಮ್ಮ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಆದಾಗ್ಯೂ, ಕಮ್ಯೂನಿಟಿ ಅಡ್ಮಿನ್​ಗಳಿಗೆ ಫೋನ್ ಸಂಖ್ಯೆ ಯಾವಾಗಲೂ ಗೋಚರಿಸುತ್ತದೆ. ಜೊತೆಗೆ ಈ ಆಯ್ಕೆ ಗ್ರೂಪ್​ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕಮ್ಯೂನಿಟಿಗಳಿಗಾಗಿ ಹೊಸ ಫೋನ್ ಸಂಖ್ಯೆ ಗೌಪ್ಯತೆ ವೈಶಿಷ್ಟ್ಯವು ಸದ್ಯ ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದು ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಅಪ್ಡೇಟ್ ಮಾಡುವ ಮೂಲಕ ಸಿಗಲಿದೆ ಎಂದು ವರದಿ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​